RA NEWS:-ಶೃತಿ ಹರಿಹರನ್ ಬೆನ್ನ ಹಿಂದೆ ಇಬ್ಬರು ಹಿರಿಯ ನಟರ ಕೈವಾಡ. . .!

ಶೃತಿ ಹರಿಹರನ್ ಬೆನ್ನ ಹಿಂದೆ ಇಬ್ಬರು ಹಿರಿಯ ನಟರ ಕೈವಾಡ. . .!
ಕೆಲವೇ ಕ್ಷಣಗಳ ಹಿಂದೆ ಫಿಲಂ ಛೇಂಬರ್ ಮುಂದೆ ದೊಡ್ಡ ಸುದ್ಧಿ ಸ್ಪೋಟವಾಗಿದೆ.
ನಟ ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಮಾಡಿರುವ ಮೀಟು ಆರೋಪದ ವಿವಾದ ಈಗ ತಾರಕಕ್ಕೆ ಏರಿದ್ದು.ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾದ ಚಿನ್ನೇಗೌಡರು ಮತ್ತು ಕಲಾವಿದರ ಸಂಘದ ಅಧ್ಯಕ್ಷರಾದ ಅಂಬರೀಶ್ ರವರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.ಇದೇ ವೇಳೆ ಅಂದರೇ ಛೇಂಬರ್ ಒಳಗೆ ಸಭೆ ನಡೆಯುತ್ತಿದ್ದಾಗ ಹೊರಗೆ ಪ್ರಶಾಂತ್ ಸಂಬರಗಿ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡುತ್ತಾ ಸುದ್ಧಿ ಸ್ಪೋಟವನ್ನೇ ಮಾಡಿದರು.

#metoo
#metoo

ಅರ್ಜುನ್ ಸರ್ಜಾ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚು ನಡೆದಿದ್ದು ಪೇಯ್ಡ್ ಅಭಿಯಾನ ಸುಳ್ಳು ಸುದ್ಧಿಗಳನ್ನ ಹಬ್ಬಿಸಿ ಅರ್ಜುನ್ ಸರ್ಜಾ ವಿರುದ್ಧ ವ್ಯವಸ್ಥಿತ ಪಿತ್ತೂರಿ ನಡೆಸುತ್ತಿದೆ ಎಂದು ಹೇಳಿದರು.ಇದೇ ವೇಳೆ ಅವರು ಮಾತನಾಡುತ್ತಾ ಚನೈನಲ್ಲಿ ಅರ್ಜುನ್ ಸರ್ಜಾ ರವರು ನಿರ್ಮಿಸುತ್ತಿರುವ ಆಂಜನೇಯ ದೇವಸ್ಥಾನದ ವಿಚಾರದ ವಿರುದ್ಧವಾಗಿ ಅಂದರೇ ಹಿಂದೂ ವಿರೋಧಿ ಸಂಸ್ಥೆ ಶೃತಿಹರಿಹರನ್ ಮುಖಾಂತರ ಇದೆಲ್ಲಾ ಸಂಚು ನಡೆಸಿದ್ದಾರೆ ಎಂದು ಹೇಳೀದರು.ಇದೆಲ್ಲಾ ವಿಚಾರಗಳನ್ನು ಹೇಳುತ್ತಾ ಕಡೆಯದಾಗಿ ಅವರು ಇದೆಲ್ಲಾ ಸಂಚಿನ ಹಿಂದೆ ಕನ್ನಡದ ಇಬ್ಬರು ಹಿರಿಯ ನಟರು ಇದ್ದಾರೆಂದು ಹೇಳಿದರು. ಆದರೇ ಅವರ ಹೆಸರನ್ನು ಬಹಿರಂಗ ಪಡಿಸಲಿಲ್ಲ.ಈ ಮೀಟು ವಿವಾದ ಇನ್ನೂ ಯಾವ ಯಾವ ರೂಪ ಪಡೆಯುತ್ತದೋ ಕಾದು ನೋಡಬೇಕು

Please follow and like us:
0

Leave a Comment