RA NEWS:-‘ ಬಾಲಕೃಷ್ಣ ರವರಿಗೆ ಕೆಟ್ಟ ಮೇಲೆ ಬುದ್ಧಿ ಬಂತು ‘ ಅಂದ್ರಾ ಎ ಮಂಜು. . !

ಬಾಲಕೃಷ್ಣ ರವರಿಗೆ ಕೆಟ್ಟ ಮೇಲೆ ಬುದ್ಧಿ ಬಂತು ಅಂದ್ರಾ ಎ ಮಂಜು. . !
ನಮ್ಮರಾಮನಗರ ಜಿಲ್ಲಾ ಸುದ್ದಿವಿಭಾಗ
ಮಾಗಡಿ::”ಮಾಜಿಗಳಾದ ಶಾಸಕ ಎಚ್.ಸಿ.ಬಾಲಕೃಷ್ಣರಿಗೆ ಈಗ ಜ್ಞಾನೋದಯವಾದಂತಿದೆ ಹಾಲಿಯಾಗಿದ್ದಾಗ ಈ ಮಾತುಗಳು ಎಲ್ಲಿಹೋಗಿದ್ದವು?” ಎಂದು ಶಾಸಕ ಎ.ಮಂಜು ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಾರ್ಯಕರ್ತರು,ಮುಖಮಡರಿಗೆ ಅಭಿವಂದನೆಗಳನ್ನು ಸಲ್ಲಿಸುವಾಗ ಮಾತನಾಡಿದ ವಿಚಾರಗಳಿಗೆ ಇಲ್ಲಿನ ಜೆಡಿಎಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಶೇ 70 ಕಾಂಗ್ರೆಸ್,ಶೇ30 ಜೆಡಿಎಸ್ ಸಮ್ಮಿಶ್ರಸರಕಾರವಿದೆ ನಮಗೂ ಜಿಲ್ಲಾಉಸ್ತುವಾರಿ ಸಚಿವರು ಇರುತ್ತಾರೆ ನಾವು ಕಾಮಗಾರಿಗಳನ್ನು ತರುತ್ತೇವೆ,ಅವರು ತರಲಿ ಕೆಲಸ ಮಾಡಲಿ ಅದಕ್ಕೆ ಹೊಂದಾಣಿಕೆಯಿಂದ ಕೆಲಸ ಮಾಡೋಣ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗೋಣ ಎನ್ನುವ ಬುದ್ದಿ ಇಂದು ಅವರಿಗೆ ಬಂದಿರುವುದು ಈಗ ಜ್ಞಾನೋದಯವಾಗಿರುವುದಾಗಿ ಹೇಳಿದರು.
ಅವರು ಹಿರಿಯರು ಅವರ ಸಲಹೆ ಮಾರ್ಗದರ್ಶನಗಳನ್ನು ಸ್ವಾಗತಿಸುವೆ. ಅದನ್ನೇ ಪ್ರಸಾದವೆನ್ನುವೆ.ಅಲ್ಲಿ ಡಿಕೆಶಿ-ಎಚ್ಡಿಕೆ ಬಾಯಿಬಾಯಿಯಾದರೆ ಇಲ್ಲಿಯೂ ಬಾಯಿಬಾಯಿ ಎಂಬ ಭ್ರಮೆಯಲ್ಲಿ ನಮ್ಮ ಜೆಡಿಎಸ್ ಕಾರ್ಯಕರ್ತರು ಮುಖಂಡರಿಗೆ ಪರೋಕ್ಷ ಬೆದರಿಕೆಗೆ ಆಸ್ಪದವಿಲ್ಲ.ಮೊದಲು ನಮ್ಮ ಕಾರ್ಯಕರ್ತರು,ಮುಖಂಡರು,ಪಕ್ಷ,ನಮ್ಮ ಸಿಎಂ ಕುಮಾರಸ್ವಾಮಿ ಅವರದೇ ಅಂತಿಮ ತೀರ್ಮಾನ. ನಮಗೆ ಬೆಂಗಳೂರು ಪದ್ಮನಾಭನಗರವೆ ಹೈಕಮಾಂಡ್ ಎಂಪಿ ಚುನಾವಣೆ ಇನ್ನೂ ಒಂದೂವರೆ ವರ್ಷವಿದೆ.ಆಗ ನೋಡೋಣ ನಮ್ಮ ಹೈಕಮಾಂಡ್ ದೇವೇಗೌಡರು ತೀರ್ಮಾನಿಸಿದಂತೆ ಕೆಲಸಮಾಡುವೆ.ಈಗಲೆ ಪಾಪ ಮಾಜಿ ಶಾಸಕರು ಹಗಲು ಕನಸು ಕಾಣುತ್ತಿದ್ದಾರೆ. ಗಾರ್ಮೆಂಟ್ಸ್,ಇಂಡಷ್ಟ್ರಿಸ್ಗಿಳನ್ನು ತಂದು ಜನಪರವಾಗಿ ಕೆಲಸ ಮಾಡುವೆ.ಇತಿಹಾಸದಲ್ಲಿ ಯಾವ ಶಾಸಕರಿಗೂ ಇಷ್ಟು ದೊಡ್ಡಪ್ರಮಾಣದಲ್ಲಿ ಲೀಡ್ ಕೊಟ್ಟಿರಲಿಲ್ಲ ಈಗ ಕೊಟ್ಟಿರುವುದರಿಂದ ಅವರ ಋಣ ತೀರಿಸಲು ನಿರ್ಧರಿಸಿರುವೆ.

Magadi A.Manju
Magadi A.Manju

ಹೇಮಾವತಿ ಯೋಜನೆ:
1996 ರಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಮಾವತಿ ಯೋಜನೆಯನ್ನು ಮಾಗಡಿಗೆ ತರಲು ಹೋರಾಟ ಮಾಡಿದ್ದರು.ಅವರು ಕ್ಷೇತ್ರ ಬಿಟ್ಟಾಗ ನಾನು ಮೊದಲಬಾರಿ ಸೋತಾಗ ಆ ಯೋಜನೆಯನ್ನು ಅವರ ಮೂಲಕ ಅಧ್ಯಯನಮಾಡಿ ಮಾಗಡಿಗೆ ಹರಿಸಲು ಮುಂದಾದೆ.ಚಾಲನೆಯನ್ನು ಕೊಟ್ಟೆ.ಬಾಲಕೃಷ್ಣ ಕಾಂಗ್ರೆಸ್ ಸೇರಿದಾಗ ನಾನು ಜೆಡಿಎಸ್ ಸೇರ್ಪಡೆಯಾದ ನಂತರ ಇದುವರೆವಿಗೂ ಅಂದು ಯೋಜನೆಯ ಫೈಲಿನ ಒಂದೇ ಒಂದು ಪೃಪೆ ಅಲುಗಾಡಿಲ್ಲ.ಈಗ ಮೊನ್ನೆ ಅದರ ತಾರ್ಕಿಕ ಸಭೆ ನಡೆಸಿದೆ.ಶಾಸಕರು ಹೇಮಾವತಿಗೆ ಈ ಹಿಂದೆ ಸಹಕಾರ ಕೊಟ್ಟಿದ್ದು ಕ್ಷೇತ್ರದ ಜನರಿಗೆ ಗೊತ್ತಿದೆ ಮುಂದೆ ಅದೆಷ್ಟು ಸಹಕಾರ ಕೊಡುವರೋ ನೋಡೋಣ.
ಶಾಸಕರ ಕಚೇರಿ ಉದ್ಘಾಟನೆ:
ತಾಲೂಕು ಪಂಚಾಯಿತಿಯಲ್ಲಿ ಶಾಸಕರ ಕಚೇರಿಯನ್ನು ಉದ್ಘಾಟನೆ ಮಾಡಿರುವೆ.ಜೂನ್ 8 ಪುರಸಭೆಯಲಿ ಶಾಸಕರ ಕೊಠಡಿಯ ಪೂಜೆಯನ್ನು ಮಧ್ಯಾಹ್ನ 12 ಗಂಟೆಗೆ ನೆರವೇರಿಸುವೆ. ಅಭೂತಪೂರ್ವ ಗೆಲುವು ತಂದುಕೊಟ್ಟ ಮಾಗಡಿ ವಿಧಾನ ಸಭಾ ಕ್ಷೇತ್ರದ ಮತದಾರರನ್ನು ಅಭಿನಂದಿಸಲು ಸಿಎಂ ಎಚ್.ಡಿ.ಕುಮಾರಸ್ವಾಮಿ,ನಮ್ಮ ಅಪ್ಪಾಜಿ ಎಚ್.ಡಿ.ದೇವೇಗೌಡರನ್ನು ಸಚಿವರುಗಳನ್ನು ಕೋಟೆ ಮೈದಾನಕ್ಕೆ ಕರೆದು ಬೃಹತ್ ಸಮಾವೇಶವನ್ನು ಏರ್ಪಡಿಸುವೆ. ದಿನಾಂಕವನ್ನು ನಿಗದಿ ಮಾಡಿ ತಿಳಿಸುವುದಾಗಿ ಹೇಳಿದರು.
ದಿವಂಗತ ಶಾಸಕರುಗಳ ಪ್ರತಿಮೆಗಳನ್ನು ಕೋಟೆಯಲ್ಲಿ ನಿರ್ಮಿಸುವ ಯೋಜನೆಯನ್ನು ಪಟ್ಟಣದ ಸೌಂಧರ್ಯ ಹೆಚ್ಚಿಸಲು ರಸ್ತೆ,ಸಾವನದುರ್ಗ,ಕಲ್ಯಾಕೆಂಪೇಗೌಡ ಐಕ್ಯಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿಸಲು ಯೋಜನೆ ತಯಾರಿಸುವುದು. ಯುಜಿಡಿ,ಕೆಎಂಆರ್ಪಿಲ,ಬೆಸ್ಕಾಂ,ಮಂಚನಬೆಲೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕುರಿತಾದ ಸಿಬ್ಬಂದಿ ಸಭೆಯನ್ನು ಕರೆದು ಮಾತನಾಡುವೆ.ಸರಕಾರಿ ಪದವಿಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಕಾಲೇಜು ಅಭಿವೃದ್ಧಿ ಮತ್ತು ಪ್ರಿನಿಸಿಪಾಲರ ಸಭೆಯನ್ನು ಕರೆದು ಸಲಹೆ ಸೂಚನೆಯ ಮೇರೆಗೆ ಅನುದಾನ ತರುವೆ.ಗ್ರಂಥಾಲಯ ಕಟ್ಟಡ,ಗುರುಭವನ,ತರಕಾರಿ ಮಾರಾಟಗಾರರಿಗೆ ಅನುಕೂಲಕರವಾದ ಮಾರುಕಟ್ಟೆ ನಿರ್ಮಾಣ ಮಾಡಲು ಹಿರಿಯ ನಾಗರಿಕರ,ಪುರಸಭಾ ಸದಸ್ಯರ,ಪತ್ರಕರ್ತರ,ಲೇಖಕರ ಬುದ್ದಿ ಜೀವಿಗಳೊಂದಿಗೆ ಚರ್ಚಿಸಿ ಕೆಲಸ ಮಾಡುವುದಾಗಿ ತಿಳಿಸಿದರು.
A Manju
A Manju

ಬಿಡಿಸಿಸಿ ಹಗರಣದ ಪ್ರತಿಧ್ವನಿ:
ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಶಾಸಕರ ಸೋದರ ಎಚ್.ಎನ್.ಅಶೋಕ್ ಉರುಫ್ ತಮ್ಮಾಜಿಯ ಸದಸ್ಯತ್ವ ಐದು ವರ್ಷಗಳ ಕಾಲ ಅನರ್ಹತೆ ಬಗ್ಗೆ ಸಹಕಾರ ಸಂಘಗಳ ನ್ಯಾಯಾಲಯದ ತೀರ್ಪು ಪತ್ರಿಕಾಗೋಷ್ಠಿಯಲ್ಲಿ ಪ್ರತಿಧ್ವನಿಸಿತು.ಹೈಕೋರ್ಟಿಗೆ ಹೋದರೂ ಕೆಳಗಿನ ಕೋರ್ಟಿನ ನಿರ್ಣಯಗಳೆ ಸಾಧುವಾಗಲಿವೆ ಎಂದು ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿಪಾಳ್ಯ ಕೃಷ್ಣಮೂರ್ತಿ ಪ್ರತಿಕ್ರಿಯೆವ್ಯಕ್ತ ಪಡಿಸಿದರು.
ಪತ್ರಿಕಾಗೋಷ್ಠಿಯಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಪೊಲೀಸ್ ರಾಮಣ್ಣ,ವಾಟರ್ ಬೋರ್ಡುರಾಮಣ್ಣ,ಅಯ್ಯಂಡಹಳ್ಳಿರಂಗಸ್ವಾಮಿ,ಪಿವಿ.ಸೀತಾರಾಮು,ಆಚಾರ್ ಪಾಳ್ಯ ತಿಮ್ಮರಾಯಪ್ಪ,ನಯಾಜ್,ದಂಡಿಗೆಪುರ ಅಶೋಕ್,ಕೆ.ಕೃಷ್ಣಮೂರ್ತಿತಾಳೆಕೆರ ನಾಗರಾಜು,ತಿಪ್ಪಸಂದ್ರರಘು ಪ್ರಮುಖವಾಗಿ ಭಾಗವಹಿಸಿದ್ದರು.
———————————————————————————————

Please follow and like us:
0

Leave a Comment