RA NEWS:-ಕರಿಚಿರತೆಗೆ ಬಿಡುಗಡೆಯ ಬೇಲ್. . .!

ಕರಿಚಿರತೆಗೆ ಬಿಡುಗಡೆಯ ಬೇಲ್. . .!
ಕಡೆಗೂ ಕರಿಚಿರತೆ ಬೋನಿನಿಂದ ಹೊರ ಬರುವಂತಾಗಿದೆ. . !
ಕಳೆದ ಒಂದು ವಾರದಿಂದ ಬೋನಿನಲ್ಲಿ ಶಥಪಥ ಹೆಜ್ಜೆ ಹಾಕಾತ್ತಾ ಚಡಪಡಿಸುತ್ತಿತ್ತು.ಯಾವ ಕ್ಷಣ ಈ ಸರಳುಗಳು ಸರಿದು ಹೊರ ಬರುತ್ತಿನೋ ಎಂದು ಕರಿಚಿರತೆ ಆಕಳಿಸುತ್ತಿತ್ತು.ಈಗ ಬೇಲ್ ಮುಖಾಂತರ ಕರಿಚಿರತೆ ಬೋನಿನಿಂದ ಹೊರ ಬರಲು ಸಜ್ಜಾಗುತ್ತಿದೆ.

duniya vijay
duniya vijay

ಹಾಕಿದ್ಯಾಕೆ ಬೋನಿಗೆ. . ?
ಕರಿಚಿರತೆ ಜಿಮ್ ಟ್ರೈನರ್ ಮಾರುತಿ ಗೌಡ ಮೂತಿಗೆ ಗುದ್ದಿಗಾಯ ಗೊಳಿಸಿತ್ತು ಎಂಬ ಆರೋಪದ ಮೇಲೆ ಪೊಲೀಸರು ಕರಿಚಿರತೆಯನ್ನ ಬಂಧಿಸಿ ಬೋನಿಗೆ(ಜೈಲು) ಹಾಕಿದ್ರು.ಸರಳುಗಳ ಹಿಂದೆ ವಾರದಿಂದ ಕರಿಚಿರತೆ ಬೋನಿನಲ್ಲಿ ಬೇಲ್ ನಿರೀಕ್ಷೆಯಲ್ಲಿತ್ತು.
ಈಗಾಗಲೇ ಎರಡು ಬಾರಿ ಜಾಮೀನು ಅರ್ಜಿ ನಿರಾಕರಣೆಯಾಗಿರುವ ಹಿನ್ನಲೆ ದುನಿಯಾ ವಿಜಯ್ ಕಂಗಾಲಾಗಿದ್ದರು. ಶನಿವಾರ ದುನಿಯಾ ವಿಜಯ್ ಅರ್ಜಿ ವಿಚಾರಣೆ ನಡೆಸಿದ 70ನೇ ಸೆಷನ್ಸ್ ನಾಯಾಲಯದ ನ್ಯಾಯಾಧೀಶರು ಸೋಮವಾರಕ್ಕೆ ಅರ್ಜಿಯನ್ನು ಮುಂದೂಡಿತ್ತು. ಶನಿವಾರ ದುನಿಯಾ ವಿಜಯ್ ಪರ ವಾದ ಮಂಡಿಸಿದ ವಕೀಲರಾದ ಶ್ರೀನಿವಾಸ್, ಈಗಾಗಲೇ ಮಾರುತಿಗೌಡ ಅವರ ಆರೋಗ್ಯ ಸುಧಾರಿಸಿದ್ದು, ಮನೆಗೆ ತೆರಳಿದ್ದಾರೆ. ವಿಜಯ್ ಅವರನ್ನು ಉದ್ದೇಶ ಪೂರ್ವಕವಾಗಿ ಸೆಕ್ಷನ್ 326ರಲ್ಲಿ ಸೇರಿಸಲಾಗಿದೆ ಎಂದಿದ್ದರು.ಆದರೆ ವಿಜಯ್ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ಅಭಿಯೋಜಕರು, ದುನಿಯಾ ವಿಜಿ ವಿರುದ್ಧ ಈ ಹಿಂದೆ ಸಾಕಷ್ಟು ಪ್ರಕರಣ ದಾಖಲಾಗಿವೆ. ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದವು. ದುನಿಯಾ ವಿಜಿ ಸಾಕಷ್ಟು ಪ್ರಭಾವಿ, ಹಣಬಲವಿರುವ ವ್ಯಕ್ತಿ ಎಂದು ಆರೋಪ ಮಾಡಿದ್ದರು.
duniya vijay
duniya vijay

ಎರಡು ಪರ ವಕೀಲರ ವಾದ ಆಲಿಸಿರುವ ನ್ಯಾಯಾಧೀಶರು ಇಂದು ಜಾಮೀನು ಮಂಜೂರು ಮಾಡಿದ್ದಾರೆ.
ವಿಜಯ್ , ಪ್ರಸಾದ್,ಮಣಿ, ಡ್ರೈವರ್ ಪ್ರಸಾದ್ ಅವರಿಗೆ ಜಾಮೀನು ಮಂಜೂರಾಗಿದ್ದು ಸಾಕ್ಷ್ಯ ನಾಶಪಡಿಸಬಾರದು ಎಂದು ಷರತ್ತು ವಿಧಿಸಿದೆ.

Please follow and like us:
0

Leave a Comment