RA NEWS:-ಆಳುವವರು ಅಳಬಾರದಾ. . .?

ಕಣ್ಣೀರಿಗೂ ಕೆಂಡಕಾರುವ ಪರಿಸ್ಥಿತಿ ನಿರ್ಮಾಣವಾಗಿದೆ. . !
ನಗುವುದು ಅಳುವುದು. . .ಮನುಜನ ಸಹಜ ಕ್ರಿಯೇ,ಕಣ್ಣೀರಿನ ಬೆಲೆ ಕಣ್ಣೀರು ಹಾಕುವವರಿಗೆ ಮಾತ್ರ ಗೊತ್ತು.ಕಠೋರ ಕಠಿಣ ಹೃದಯದವರಿಗೆ ಕಣ್ಣೀರಿನ ಬೆಲೆ ಗೊತ್ತಾಗುವುದಿಲ್ಲ.ಇತ್ತಿಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಣ್ಣೀರು ಹಾಕಿದ ಸನ್ನಿವೇಶ ದೊಡ್ಡ ಮಟ್ಟದ ಚರ್ಚೆಗೆ ಗುರಿಯಾಗಿದೆ.ಆ ವಿಚಾರವಾಗಿ ಅನೇಕರು ಅನೇಕ ಬಗೆಯಲ್ಲಿ ವ್ಯಾಕ್ಯಾನಿಸಿದ್ದಾರೆ.ಮಾತ್ರವಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಈ ವಿಚಾರದ ಬಗ್ಗೆ ಹಲವಾರು ಕಾರ್ಯಕ್ರಮಗಳು ಇನ್ನಾದರೂ ಬಿತ್ತರವಾಗುತ್ತಲ್ಲೇ ಇದೆ,
ಮೊದಲನೆಯದಾಗಿ ಕುಮಾರಸ್ವಾಮಿಯವರು ಎಲ್ಲಿ ಯಾವ ಸಂದರ್ಭದಲ್ಲಿ ಯಾವ ವಿಚಾರವನ್ನ ಹೇಳುತ್ತಾ ಕಣ್ಣೀರು ಹಾಕಿದರು ಎಂಬ ಸತ್ಯವನ್ನ ಪರಾಮರ್ಶಿಸ ಬೇಕಿದೆ.
ಸ್ಥಳ: ಜೆಪಿ ಭವನ, ಬೆಂಗಳೂರಿನಲ್ಲಿರುವ ಜೆಡಿಎಸ್ ನ ಪ್ರಧಾನ ಕಛೇರಿ,
ಸಂದರ್ಭ: ಅಭಿನಂದನೆ ಕಾರ್ಯಕ್ರಮ.
ಬೆಂಗಳೂರು ನಗರ ಜೆಡಿಎಸ್ ನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರು ಮಾತನಾಡುತ್ತಾ ” ನಾನು ಚುನಾವಣೆಯ ಸಮಯದಲ್ಲಿ ಮತಯಾಚನೆಯ ಪ್ರವಾಸ ಮಾಡುವಾಗ ಹೊದಲೆಲ್ಲಾ ಜನ ಸೇರುತ್ತಿದ್ದರು.ರಾತ್ರಿ ಹನ್ನೆರೆಡಾದರೂ ಜನ ಸೇರುತ್ತಿದ್ದರು,ಆದರೇ ನಮ್ಮ ಪಕ್ಷಕ್ಕೆ ನಮ್ಮ ಅಭ್ಯರ್ಥಿಗಳಿಗೆ ಯಾಕೆ ಓಟು ಹಾಕಲಿಲ್ಲಾ,ನಾನೇನು ತಪ್ಪು ಮಾಡಿದೆ,ನಾನು ಸಿಎಂ ಆಗಿದ್ದಕ್ಕೆ ನೀವೆಲ್ಲಾ ಸಂತೋಷದಿಂದ ಇದ್ದೀರಿ,ಆದರೇ ನಾನು ಸಂತೋಷದಿಂದ ಇಲ್ಲ,ನಾನೇ ಆ ನೋವನ್ನ ವಿಷಕಂಠನಾಗಿ ನುಂಗಿದ್ದೇನೆ. . . ”
ಈಗ ಹೇಳಿ ಇಲ್ಲಿ ಕುಮಾರಸ್ವಾಮಿಯವರು ಮಾತನಾಡಿದ್ದರಲ್ಲಿ ತಪ್ಪೇನಿದೆ.ಅವರದೇ ಪಕ್ಷ ಇನ್ನೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕಿತ್ತು ಎಂಬ ಬಾವಾರ್ಥದಲ್ಲಿ ಮಾತನಾಡಿದ್ದಾರೆ.ಹಾಗೆ ಮಾತನಾಡುವಾಗ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಇದರಲ್ಲಿ ತಪ್ಪೇನಿದೆ. . .
what’s wrong. .in it. . .?

CM Kumaraswamy
CM Kumaraswamy

ಇಲ್ಲಿ ಕುಮಾರಸ್ವಾಮಿಯವರ ಕಣ್ಣೀರಿಗೂ ಕಾಂಗ್ರೆಸ್ ಗೂ ಏನು ಸಂಬಂಧ. ?ವಿನಾಕಾರಣ ಈ ವಿಚಾರವನ್ನ ಯಾಕೆ ಕೆಲವು ರಾಜಕಾರಣಿಗಳು ಎಳೆಯುತ್ತಿದ್ದಾರೆ,ಅತ್ರು ತಪ್ಪು. . .ನಕ್ಕರೂ ತಪ್ಪು. .ಕುಂತ್ರು ತಪ್ಪು. .ನಿಂತ್ರೂ ತಪ್ಪು ಎಂದು ಹೇಳುತ್ತಾ ಹೊದರೇ ಹೇಗೆ .? ಅರೆರೇ ಮನುಷ್ಯ ತನ್ನದೇ ಬಾವನೆಯನ್ನ ಮುಚ್ಚು ಮರೆ ಇಲ್ಲದೇ ವ್ಯಕ್ತಪಡಿಸೋದು ತಪ್ಪಾ . .? ಮುಖ್ಯಮಂತ್ರಿಯಾಗಲಿ ಪ್ರಧಾನ ಮಂತ್ರಿಯಾಗಲಿ off course ಅವರೂ ಮನುಷ್ಯರು ತಾನೆ.ಅಸಲು ಕುಮಾರಸ್ವಾಮಿಯವರು ಕಣ್ಣೀರು ಹಾಕಿದ್ದು ಎಲ್ಲಿ. .? ಅವರದೇ ಪಕ್ಷದ ಸಭಾಂಗಣದಲ್ಲಿ ಅವರದೇ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡುವಾಗ ಬಾವುಕರಾಗಿ ಅತ್ತರು ತಪ್ಪೇನಿದೆ . .?
ಭಾವುಕರಾದ ವಿಚಾರಕ್ಕೆ ಮೈತ್ರಿಯ ವಿಚಾರವನ್ನ ಯಾಕೆ ತಳುಕು ಹಾಕಬೇಕು.ಇದೆಲ್ಲಾ ರಗಳೆಯಿಂದ ಕುಮಾರಸ್ವಾಮಿಯವರು ಎದ್ದು ಬಂದು ಮತ್ತೆ ತಮ್ಮ ಹಳೆಯ ಆ ಇಪ್ಪತ್ತು ತಿಂಗಳ ಆಡಳಿತದಂತೆ ಸಾಗಲಿ.ಕಣ್ಣೀರಿಗೂ ಕೆಂಡಕಾರುವವರ ಮಧ್ಯ ಕರುನಾಡ ದೊರೆ ಜನರ ಕಣ್ಣೀರನ್ನ ಒರೆಸಲಿ.

Please follow and like us:
0

Leave a Comment