- RA NEWS:-ಶೃತಿ ಹರಿಹರನ್ ಬೆನ್ನ ಹಿಂದೆ ಇಬ್ಬರು ಹಿರಿಯ ನಟರ ಕೈವಾಡ. . .!
- RA NEWS:-ಯದುವೀರರಿಂದ ಮೈಸೂರಿಗೆ ಪರಿಚಯವಾದ ಶ್ರೀ ಚಾಮುಂಡೇಶ್ವರಿ
- RA NEWS:-ಅಲಮೇಲು ಶಾಪಕ್ಕೂ ದಸರೆಗೂ ಇರುವ ಸಂಬಂಧವೇನು ಗೊತ್ತಾ. . ?
- RA NEWS:-ಅಮೇರಿಕಾಗೆ ಪ್ರತಿಭಾವಂತರು ಮಾತ್ರ ಬೇಕಂತೆ. .ಅಂದ್ರೆ ಮಿಕ್ಕೆಲಾ ಕಡೆ ಇರೋರು ದಡ್ಡರಾ. . ?
- RA NEWS:-BREAKING NEWS ಶಿವಮೊಗ್ಗ ತೆನೆಗೆ. . ! ಜಮಖಂಡಿಯಲ್ಲಿ ಕೈಗೆ ಆನಂದವಾದರೇ. . .ಬಳ್ಳಾರಿಯಲ್ಲಿ ಪ್ರಸಾದ ವಿನಿಯೋಗ. . .!
RA NEWS:-BREAKING NEWS ಶಿವಮೊಗ್ಗ ತೆನೆಗೆ. . ! ಜಮಖಂಡಿಯಲ್ಲಿ ಕೈಗೆ ಆನಂದವಾದರೇ. . .ಬಳ್ಳಾರಿಯಲ್ಲಿ ಪ್ರಸಾದ ವಿನಿಯೋಗ. . .!

BREAKING NEWS. . !
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಉಪ ಚುನಾವಣೆಗಾಗಿ ಭಾರೀ ಕಸರತ್ತುಗಳು ನಡೆಯುತ್ತಿವೆ.
ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಉಪಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಅಲ್ಲದೇ, ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.ಎಲ್ಲಿ ತೆನೆ ಮತ್ತು ಎಲ್ಲಿ ಕೈ ಎಂಬ ವಿಚಾರಕ್ಕೆ ಹಲವು ಗೊಂದಗಗಳು ಸೃಷ್ಟಿಯಾಗಿತ್ತು.ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಹಲವು ಕಸರತ್ತುಗಳನ್ನು ನಡೆಸುತ್ತಿತ್ತು.ಆಡಳಿತದಲ್ಲಿ ಮೈತ್ರಿ ಸರ್ಕಾರವಿರುವಾಗ ಅದೇ ಸಮಯದಲ್ಲಿ ಉಪ ಚುನಾವಣೆ ಘೋಷಣೆಯಾಗಿದೆ ಹಾಗಾಗಿ ಉಭಯ ಪಕ್ಷಗಳಿಗೆ ಇದು ಪ್ರತಿಷ್ಟೆಯ ಪ್ರೆಶ್ನೆಯಾಗಿದೆ.
ಶಿವಮೊಗ್ಗದಲ್ಲಿ ಇತ್ತೀಚೆಗೆ ಜೆಡಿಎಸ್ ಪ್ರಬಲವಾಗುತ್ತಿದೆ,ಅದೇ ಸಮಯದಲ್ಲಿ ಶಿವಮೊಗ್ಗದ ಕಾಂಗ್ರೆಸ್ ಪಾಳೆಯದಲ್ಲಿ ಹಲವು ರೀತಿಯಲ್ಲಿ ಚರ್ಚಿಸಿದರೂ ಸೂಕ್ತವಾದ ಅಭ್ಯರ್ಥಿ ನಿಖವಾದ ನಿರ್ಧಾರಕ್ಕೆ ಬರಲು ಆಗಲಿಲ್ಲಾ. ಶಿವಮೊಗ್ಗ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ನಿಂದ ಸೂಕ್ತ ಅಭ್ಯರ್ಥಿ ಸಿಗದ ಕಾರಣಕ್ಕೆ ಈ ಕ್ಷೇತ್ರವನ್ನು ಉಪಚುನಾವಣೆಗೆ ಮಾತ್ರ ಅನ್ವಯವಾಗುವಂತೆ ಜೆಡಿಎಸ್ ಬಿಟ್ಟುಕೊಡಲು ವೇಣುಗೋಪಾಲ್ ಮತ್ತು ಮುಖಂಡರು ನಿರ್ಧರಿಸಿದರು. ಇಂದು ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ನಿರ್ಧಾರಕ್ಕೆ ಅಂಕಿತ ಹಾಕುವುದೊಂದೇ ಬಾಕಿ ಉಳಿಸಿದೆ. ನಿರೀಕ್ಷೆಯಂತೆ ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ಅದರಂತೆ ಜೆಡಿಎಸ್ನಿಂದ ಮಧುಬಂಗಾರಪ್ಪ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಧು ಬಂಗಾರಪ್ಪ ಅಭ್ಯರ್ಥಿ ಎಂಬುದನ್ನು ಕಳೆದ ಮೂರು ದಿನಗಳ ಹಿಂದೆಯೇ ಜೆಡಿಎಸ್ ವರಿಷ್ಠ ದೇವೇಗೌಡರು ಘೋಷಿಸಿದ್ದರು.
ಜಮಖಂಡಿಯಲ್ಲಿ ಕೈಗೆ ಆನಂದವಾದರೇ. . .ಬಳ್ಳಾರಿಯಲ್ಲಿ ಪ್ರಸಾದ ವಿನಿಯೋಗ. . .!
ಉಪಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿರುವ ಜಮಖಂಡಿ ವಿಧಾನಸಭೆ ಹಾಗೂ ಬಳ್ಳಾರಿ ಲೋಕಸಭೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ. ಜಮಖಂಡಿಯಿಂದ ಆನಂದ್ ನ್ಯಾಮಗೌಡ ಹಾಗೂ ಬಳ್ಳಾರಿಯಿಂದ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್ ಹೆಸರನ್ನು ಫೈನಲ್ ಮಾಡಲಾಗಿದ್ದು, ಇಂದು ರಾಹುಲ್ ಗಾಂಧಿ ಅವರು ಅಧಿಕೃತವಾಗಿ ಹೆಸರನ್ನು ಘೋಷಣೆ ಮಾಡಲಿದ್ದಾರೆ.