RA NEWS:-ರಾಜ್ಯದಲ್ಲೂ ದೋಸ್ತಿ. . ರಾಜಧಾನಿಗೂ ದೋಸ್ತಿ. . .! ಕಮರಿದ ಕಮಲ. . !

ವಿಧಾನ ಸಭಾ ಚುನಾವಣೆಯ ನಂತರ ರಾಜಕೀಯ ದೊಂಬರಾಟ ನೋಡಿದ ಜನತೆಗೆ ಈಗ ಬೆಂಗಳೂರಿನ ಮೇಯರ್ ಮತ್ತು ಉಪ ಚುನಾವಣೆಯಲ್ಲೂ ಅಂತಹದ್ದೆ ದೊಂಬರಾಟದ ಸ್ಯಾಂಪಲ್ ನ ಪ್ರಹಸನಗಳು ಕಂಡು ಬಂದಿತ್ತು.ಕೆಲವು ಪಾಲಿಕೆ ಸಧಸ್ಯರನ್ನ ಹೈಜಾಕ್ ಮಾಡಲು ಬಿಜೆಪಿ ಹರ ಸಾಹಸ ಮಾಡಿತು.ಆಪರೇಶನ್ ಕಮಲ ಫಲಿತಾಂಶ ನೀಡಲಿಲ್ಲ.
ಬಿಬಿಎಂಪಿಯ ನೂತನ ಮೇಯರ್ ಆಗಿ ಜಯನಗರ 153ನೇ ವಾರ್ಡ್ ನ ಕಾರ್ಪೊರೇಟರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಆಯ್ಕೆಯಾಗಿದ್ದಾರೆ. 130 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ. ಕೌನ್ಸಿಲ್ ನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ನಡೆದ ಹೈಡ್ರಾಮಾ ಬಳಿಕ ಬಿಜೆಪಿ ಸೋಲೊಪ್ಪಿಕೊಂಡಿದ್ದು, ಕಾಂಗ್ರೆಸ್ ನ ಅಭ್ಯರ್ಥಿ ಗಂಗಾಂಬಿಕೆ ಮೇಯರ್ ಆಗಿ, ಜೆಡಿಎಸ್ ಅಭ್ಯರ್ಥಿ ರಮೀಳಾ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.ಗಂಗಾಂಬಿಕೆ ಅವರು 130 ಮತಗಳನ್ನು ಪಡೆದು ಬೆಂಗಳೂರು ನಗರದ 52ನೇ ಮೇಯರ್ ಆಗಿ ಆಯ್ಕೆಯಾದರು. ಉಪ ಮೇಯರ್ ಆಗಿ ರಮೀಳಾ ಅವರು ಆಯ್ಕೆಯಾದರು. ಉಪ ಮೇಯರ್ ರಮೀಳಾ ಅವರು 129 ಮತಗಳನ್ನು ಪಡೆದರು.

Bangalore new mayor gangambika and deputy mayor ramila
Bangalore new mayor gangambika and deputy mayor ramila

ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್ ಪಟ್ಟಕ್ಕೆ ಬಿಜೆಪಿಯಿಂದ ಶೋಭಾ ಅಂಜನಪ್ಪ ಹಾಗೂ ಉಪ ಮೇಯರ್ ಪಟ್ಟಕ್ಕೆ ಪ್ರತಿಭಾ ಧನರಾಜ್ ನಾಮಪತ್ರ ಸಲ್ಲಿಸಿದ್ದರು. ಇತ್ತ ಕಾಂಗ್ರೆಸ್‌ನಿಂದ ಗಂಗಾಂಬಿಕೆ ಮೇಯರ್ ಪಟ್ಟಕ್ಕೆ ಹಾಗೂ ಉಪ ಮೇಯರ್ ಪಟ್ಟಕ್ಕೆ ಜೆಡಿಎಸ್ನ ರಮೀಳಾ ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣೆಗೂ ಮೊದಲು ನಡೆದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಕಿತ್ತಾಡಿಕೊಂಡು ಬಿಬಿಎಂಪಿಯಲ್ಲಿ ಹೈಡ್ರಾಮಾವೇ ನಡೆದಿತ್ತು. ಇದಾದ ಬಳಿಕ ಅಸಮಾಧಾನಗೊಂಡ ಬಿಜೆಪಿ ನಾಯಕರು ಚುನಾವಣೆ ಬಹಿಷ್ಕರಿಸಿ ಸಭಾತ್ಯಾಗ ಮಾಡಿದ್ದರು.
ಬಹುಮತದೊಂದಿಗೆ ಆಯ್ಕೆಯಾದ ಗಂಗಾಂಬಿಕೆ ಹಾಗೂ ರಮೀಳಾರವರಿಗೆ ಮಾಜಿ ಮೇಯರ್ ಸಂಪತ್ರಾಜ್ ಅಭಿನಂದಿಸಿ, ಅಧಿಕಾರ ಹಸ್ತಾಂತರಿಸಿದ್ದಾರೆ.

Please follow and like us:
0

Leave a Comment