RA NEWS:- ಹೆಡ್ಲಿ ಮೇಲೆ ಡೆಡ್ಲೀ ಅಟ್ಯಾಕ್. .!

David Headley
ದೇಶ ದ್ರೋಹಿ ಹೆಡ್ಲಿ ಮೇಲೆ ಡೆಡ್ಲೀ ಅಟ್ಯಾಕ್. . !
2009ರ 24/11 ರ ದಾಳಿಯನ್ನ ನಾವೆಂದೂ ಮರೆಯಲು ಸಾಧ್ಯವಿಲ್ಲ.ಅಂತಹಾ ಭಯಾನಕ ದಾಳಿಯ ಬಗ್ಗೆ ಯೋಜನೆ ರೂಪಿಸಿದ್ದ ಹೆಡ್ಲಿ ಅಮೇರಿಕಾದ ಜೈಲಿನಲ್ಲಿದ್ದ.

ಡೇವಿಡ್ ಕೋಲ್ಮನ್ ಹೆಡ್ಲಿ ಮೂಲ ಹೆಸರು ಡಾಯುದ್ ಸಯದ್ ಗಿಲಾನಿ, ವಾಷಿಂಗ್ಟನ್, ಡಿ.ಸಿ.ಯಲ್ಲಿ ಜನಿಸಿದ್ದ, ಭಯೋತ್ಪಾದರೊಂದಿಗೆ ಸಂಪರ್ಕ ಜಾಲವನ್ನ ಇಟ್ಟುಕೊಂಡಿದ್ದ ಹೆಡ್ಲಿ,ನಮ್ಮ ದೇಶದ ಮೇಲಿನ ಹಲ್ಲೆಗೆ ಹಲವು ಪ್ಲಾನ್ ಗಳನ್ನ ಮಾಡಿದ್ದ. ಯುಎಸ್ ಅಧಿಕಾರಿಗಳ ಜ್ಞಾನವಿಲ್ಲದೆ ಹೆಡ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ನಂತರ ಅವನು ಲಷ್ಕರ್ ಸಿದ್ಧಾಂತದೊಂದಿಗೆ ಗುರುತಿಸಿಕೊಂಡಿದ್ದ. ಹಫಿಜ್ ಮುಹಮ್ಮದ್ ಸಯೀದ್ ಅವರೊಂದಿಗೆ ಸಂಪರ್ಕದಲ್ಲಿದ್ದ.
ಫೆಬ್ರವರಿ 2002 ರಲ್ಲಿ, ಗಿಲಾನಿ ಲಷ್ಕರ್ ತರಬೇತಿ ಶಿಬಿರಕ್ಕೆ ಹೋಗಿದ್ದ.

David Headley
David Headley

ಡೇವಿಡ್ ಹೆಡ್ಲಿ ಅರೆಸ್ಟ್ ಆದ ನಂತರ ಭಯೋತ್ಪಾದನೆಯ ಭಯಾನಕ ರಹಸ್ಯಗಳು ಬಯಲಾಗಿದ್ದವು.
ಕೆಲವು ಮಾಧ್ಯಮ ವರದಿಗಳ ಪ್ರಕಾರ, ಜುಲೈ 8 ರಂದು ಡೇವಿಡ್ ಹೆಡ್ಲಿ ಇಬ್ಬರು ಸಹ ಕೈದಿಗಳಿಂದ ದಾಳಿಗೊಳಗಾಗಿದ್ದ.
ಮುಂಬೈಯ 2008 ರ ಭಯೋತ್ಪಾದಕ ದಾಳಿಗೆ 160 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಕ್ಕಾಗಿ ಡೇವಿಡ್ ಹೆಡ್ಲಿಗೆ ಯುಎಸ್ ನ್ಯಾಯಾಲಯವು 35 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

Please follow and like us:
0

Leave a Comment