RA NEWS:-ನಾಡ ಹಬ್ಬದ ಚಾಲನೆಗೆ ಮಾತೃ ಹೃದಯಿ ಸುಧಾಮೂರ್ತಿಯವರ ಸಿಂಚನ. . !

ವಿಶ್ವ ವಿಖ್ಯಾತ ಮೈಸೂರು ದಸರ ಆರಂಭವಾಗಿದೆ.. . !
ಜಗತ್ಪ್ರಸಿದ್ಧ 408ನೇ ಮೈಸೂರು ದಸರಾ ಮಹೋತ್ಸವಕ್ಕೆ ಮಲ್ಲಿಗೆ ನಗರಿಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಚಾಲನೆ ನೀಡಿದ್ದಾರೆ. ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ಇನ್‌ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾ ಮೂರ್ತಿ ವಿಶ್ವವಿಖ್ಯಾತ ಮೈಸೂರು ದಸರೆಗೆ ವಿಧ್ಯುಕ್ತ ಚಾಲನೆ ನೀಡಿದರು. ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆಯೊಡನೆ ಬೆಳಗ್ಗೆ 7.05ರಿಂದ 7.35ರ ಸಲ್ಲುವ ಶುಭ ತುಲಾ ಲಗ್ನದಲ್ಲಿ ಇಸ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ದಸರೆಗೆ ಚಾಲನೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ಅನೇಕ ಸಚಿವ, ಶಾಸಕರು ಉಪಸ್ಥಿತಿರಿದ್ದರು.

 ನಾಡಹಬ್ಬ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಸುಧಾಮೂರ್ತಿಯವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ನಟಿ ಜಯಮಾಲಾರಿಂದ ಸನ್ಮಾನ.

ನಾಡಹಬ್ಬ ದಸರಾಕ್ಕೆ ವಿಧ್ಯುಕ್ತ ಚಾಲನೆ ನೀಡಿದ ಸುಧಾಮೂರ್ತಿಯವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ, ನಟಿ ಜಯಮಾಲಾರಿಂದ ಸನ್ಮಾನ.

ಮೈಸೂರು ದಸರಾ ಅಂಗವಾಗಿ ಮಂಗಳವಾರದಂದೇ ಕ್ರೀಡಾ ದಸರಾ, ಚಲನಚಿತ್ರೋತ್ಸವ, ಆಹಾರ ಮೇಳ, ಕುಸ್ತಿ ಪಂದ್ಯಾವಳಿ, ಪುಸ್ತಕ ಮೇಳ, ವಸ್ತು ಪ್ರದರ್ಶನಗಳಿಗೆ ಚಾಲನೆ ದೊರಕಲಿದೆ. ಜೊತೆಗೆ ಹಸಿರು ಮಂಟಪ, ಗಾಜಿನ ಮನೆ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಉದ್ಘಾಟನೆಗೊಳ್ಳಲಿವೆ.ನವರಾತ್ರಿಯ ಮರುದಿನವಾದ ಅ.19 ವಿಜಯದಶಮಿಯಂದು ಜಂಬೂ ಸವಾರಿ ನಡೆಯಲಿದೆ. ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲ ಗೌರವ ವಂದನೆ ಸ್ವೀಕರಿಸುವರು. ಅದರೊಂದಿಗೆ ದಸರೆಗೆ ತೆರೆ ಬೀಳಲಿದೆ.

Please follow and like us:
0

COMMENTS

Leave a Comment