RA NEWS:-students made pakoda protest aganist modi. .!/ಪೊಲೀಸರ ಸರ್ಪಗಾವಲಿನ ನಡುವೆಯೂ ಮೋದಿ ವಿರುದ್ಧ ಪಕೋಡ ಪ್ರೊಟೆಸ್ಟ್.

students made pakoda protest aganist modi. .!

 students made pakoda protest aganist modi. .!

ನರೇಂದ್ರ ಮೋದಿ ಕರ್ನಾಟಕಕ್ಕೆ ಕಾಲಿಡುತ್ತಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಊದಿರೋ ಚುನಾವಣಾ ಶಂಖನಾದ ಪರಿವರ್ತನ ಸಮರೂಪವ ಸಮಾವೇಶ ಮಾಡಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.  ಈ ನಿಟ್ಟಿನಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಸರ್ವ ಸನ್ನದ್ಧವಾಗಿದೆ, ಮೋದಿಯ ಆಗಮನಕ್ಕೆ ಕಾರ್ಯಕರ್ತರು ಸಕಲ ಸಿದ್ಧತೆಯನ್ನ ನಡೆಸಿಕೊಂಡು ಮೋದಿಯ ದರ್ಶನಕ್ಕಾಗಿ ಕಾಯುತ್ತಿದ್ದಾರೆ ಆದ್ರೆ  ಮೋದಿ ಆಗಮನಕ್ಕೆ ವಿಘ್ನವೊಂದು ಎದುರಾಗಿದೆ.

ಹೌದು ಒಂದು ಕಡೆ ಮೋದಿಯ ದರ್ಶನಕ್ಕಾಗಿ ಕಾದು ಕುಳಿತಿರೋ ಅಭಿಮಾನಿ ವರ್ಗವಾದ್ರೆ ಇನ್ನೊಂದು ಕಡೆ ಮೋದಿಗೆ ವಿರುದ್ಧವಾಗಿ ಪ್ರೊಟೆಸ್ಟ್ ಮಾಡುತ್ತಿದ್ದಾರೆ. ಮೋದಿ ಭಾಷಣಕ್ಕಾಗಿ ಅರಮನೆ ಮೈದಾನದಲ್ಲಿ ಸಕಲ ಸಿದ್ಧತೆಯನ್ನ ನಡೆಸಿದ್ರೆ ಅರಮನೆ ಮೈದಾನದ ಪಕ್ಕ ಅಂದ್ರೆ ಮೇಕ್ರಿ ಸರ್ಕಲ್ ವೃತ್ತದ ಬಳಿ ಮೋದಿ ವಿರುದ್ಧ ಪ್ರೊಟೆಸ್ಟ್ ಮಾಡಿದ್ದಾರೆ.

ಮೋದಿ ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡುವಾಗ ಪಕೋಡ ಮಾರುವುದು ಒಂದು ಉದ್ಯೋಗ ಅಲ್ಲವೇ ಅನ್ನೋ ಮಾತನ್ನ ಹೇಳಿದ್ರು ಈ ಮಾತು ದೇಶದ್ಯಾದ್ಯಂತ ದೊಡ್ಡ ಚರ್ಚೆಗೆ ಗುರಿಯಾಗಿತ್ತು, ಸೋ ಪದವಿ ಮಾಡಿದವರು ಪಕೋಡ ಮಾಡಿಕೊಂಡು ಜೀವನ ಮಾಡ್ಬೇಕ ಅನ್ನೋ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಆಕ್ರೋಶ ಬೆಂಗಳೂರಿನಲ್ಲೂ ಪಕೋಡ ಮಾರುವುದರ ಮೂಲಕ ಹೊರ ಬಂದಿದೆ.

students made pakoda protest aganist modi. .!

ಮೇಕ್ರಿ ಸರ್ಕಲ್ ಸುತ್ತ ಮುತ್ತ ಪದವಿದರರ ಬಟ್ಟೆಯನ್ನ ಹಾಕಿಕೊಂಡು ಯುವಕರು ಮೋದಿ ಪಕೋಡ ಬೇಕಾ ಮೋದಿ ಪಕೋಡಾ ಬೇಕಾ ಅಂತಾ ಪ್ರೊಟೆಸ್ಟ್ ಮಾಡಿದ್ದಾರೆ. ಪ್ರಧಾನಿ ಸಮಾವೇಶದ ಸುತ್ತ ಮುತ್ತ ಈ ರೀತಿಯಾಗಿ ಪ್ರೊಟೆಸ್ಟ್ ಮಾಡುವುದು ಅಂದ್ರೆ ಸುಮ್ಮನೆ ಮಾತಲ್ಲ, ಆದ್ರೆ ಈ ಯುವಕರು ಮಾತ್ರ ಮೋದಿ ವಿರುದ್ಧ ತಮ್ಮ ಅಸಮಧಾನವನ್ನ ಪಕೋಡ ಮಾರೋದ್ರ ಮೂಲಕ ಹೊರ ಹಾಕಿದ್ದಾರೆ, ಮೇಕ್ರಿ ಸರ್ಕಲ್ ಸುತ್ತ ಮುತ್ತ ಮೋದಿ ಬ್ಯಾನರ್ ಗಳು ಇದ್ದ ಜಾಗದಲ್ಲಿ ಪಕೋಡ ಮಾರಿದ್ದಾರೆ, ಮಾತ್ರವಲ್ಲ  ಮೋದಿ ಸಮಾವೇಶಕ್ಕೆ ಹೊರಟಿದ್ದ ಕಾರ್ಯಕರ್ತರಿಗೂ ಮೋದಿ ಪಕೋಡವನ್ನ ಮಾರಿದ್ದಾರೆ.

ಯುವಕರು ಮೋದಿ ಪಕೋಡ , ತಗೊಳ್ಳಿ ತಗೊಳ್ಳಿ ಅಂತಾ ಕೂಗುತ್ತಿದ್ದನ್ನ ಕಂಡ ಪೊಲೀಸರು ಸುಮ್ಮನೆ ಇರುತ್ತಾರಾ ಸಿಗ್ನಲ್ ನಲ್ಲಿ ಪಕೋಡ ಮಾರುತ್ತಿದ್ದವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 10 ಜನ ಯುವಕರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅಂದ ಹಾಗೆ ಈ ಯುವಕರು ರಾಜೀವ್ ಗಾಂಧಿ ಕಾಲೇಜು ಮತ್ತು ಶೇಷಾದ್ರಿ ಪುರಂ ಕಾಲೇಜು ವಿದ್ಯಾರ್ಥಿಗಳು ಅಂತಾ ತಿಳಿದು ಬಂದಿದೆ.

ಒಟ್ಟಾರೆ ಮೋದಿ ಹೇಳಿಕೆಗೆ ರಾಷ್ಟ್ರದಾದ್ಯಂತ ಹೆಚ್ಚು ಸದ್ದು ಮಾಡುತ್ತಿದ್ದು ಕರ್ನಾಟಕದಲ್ಲೂ ಕಾವು ಪಡೆದುಕೊಂಡಿದೆ. ರಾಜ್ಯದಲ್ಲಿ ಇನ್ನೇನು ಕೆಲವೇ ತಿಂಗಳಲ್ಲಿ ಚುನಾವಣೆ ಎದುರಾಗಲಿದೆ ಈ ಸಮಯದಲ್ಲಿ ಮೋದಿ ವಿರುದ್ಧ ನಡೆಯುತ್ತಿರೋ ಈ ಬೆಳವಣಿಗೆಗಳು ರಾಜ್ಯ ಬಿಜೆಪಿಗೆ ಕಲ್ಲು ಮುಳ್ಳಿನ ಹಾದಿ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ, ಮೋದಿ ಮಾಡೋ ಭಾಷಣದಲ್ಲಿ ತಮ್ಮ ಪಕೋಡ ಹೇಳಿಕೆಯನ್ನೇ ಸಮರ್ಥಿಸಿಕೊಳ್ತಾರ ಅಥವ ಈ ವಿಚಾರವನ್ನ ಇಲ್ಲಿಗೆ ಕೈ ಬಿಡುತ್ತಾರ ಅನ್ನೋದನ್ನ ಎದುರು ನೋಡಬೇಕಿದೆ

Please follow and like us:
0

Leave a Comment