RA NEWS:-ಬ್ರೇಕಿಂಗ್ ನ್ಯೂಸ್. .! ಮಹದಾಯಿ ನ್ಯಾಯಾದಿಕರಣ ತೀರ್ಪು ಪ್ರಕಟ. .! ನಾಡಿಗೆ ಸಿಕ್ಕ ಸ್ವಲ್ಪ ಸಮಾಧಾನ. .!

ಮಹದಾಯಿ ವಿವಾದದಲ್ಲಿ ರೈತರು ವ್ಯವಸಾಯ ಮತ್ತು ಕುಡಿಯುವ ನೀರಿನ ಬಗ್ಗೆ ಹಲವಾರು ವರ್ಷಗಳಿಂದ ಹೋರಾಟಗಳನ್ನು ಮಾಡುತ್ತಲ್ಲೇ ಬಂದಿದ್ದರು.ಈ ವಿವಾದ ಹಲವು ವರ್ಷಗಳ ಹಿಂದೆ ನ್ಯಾಯಾಧಿಕರಣದ ವ್ಯಾಪ್ತಿಗೆ ಬಂದಿತ್ತು.ಇಂದು ನಾಲ್ಕು ಗಂಟೆಗೆ ತೀರ್ಪಿನ ಪ್ರತಿ ಪ್ರಕಟವಾಗಿದ್ದು ಅದರಲ್ಲಿ ಕುಡಿಯುವ ನೀರಿನ ವಿಚಾರದಲ್ಲಿ ನಾಡಿಗೆ ಮೊದಲ ಸ್ವಲ್ಪ ಸಮಾಧಾನ ಸಿಕ್ಕಿದೆ.
ಏನು ಹೇಳುತ್ತೆ ತೀರ್ಪು. .!
ಕರ್ನಾಟಕದ ನೀರು ಬಳಕೆಗೆ ಓಟ್ಟೂ 5.5 ಟಿಸಿಎಂ ನೀರು ಲಭೀಸಿದೆ.ಇದರಲ್ಲಿ ಮಹದಾಯಿ ವ್ಯಾಪ್ತಿಗೆ 1.5 ಟಿಎಂಸಿ ನೀರು ಮತ್ತು ಮಲಪ್ರಭಾ ವ್ಯಾಪ್ತಿಯಲ್ಲಿ 4 ಟಿಎಂಸಿ ನೀರು,ಈ ನೀರು ಕುಡಿಯುವ ಸಲುವಾಗಿ ಬಳಕೆಯಾಗುತ್ತೆ.ಇದೆಲ್ಲದರ ಹೊರತಾಗಿ ಜಲ ವಿದ್ಯುತ್ ಉತ್ಪಾದನೆಗೆ ಪ್ರತ್ಯೇಕ 8.02 ನೀರನ್ನ ಬಳಕೆ ಮಾಡಬಹುದು.
ಗೋವಾ ಸರ್ಕಾರ ಕರ್ನಾಟಕಕ್ಕೆ ಬರೀ 1.5 ಟಿಎಂಸಿ ನೀರು ಬಿಡುವುದಾಗಿ ಮೊಂಡು ವಾದ ಮಾಡಿತ್ತು.ಈ ತೀರ್ಪು ಗೋವಾ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಿದೆ.

mahadayi river.
mahadayi river.

ನಾಡಿಗೆ ಮರೀಚಿಕೆಯಾಗಿದ್ದ ಮಹದಾಯಿ ಮತ್ತೆ ನಾಡಿಗೆ ಒಲಿದಿದೆ.ಜಲವಿದ್ಯುತ್,ಕುಡಿಯುವ ನೀರು ಮತ್ತು ಇತರೆ ಬಳಕೆಗೆ ಓಟ್ಟೂ 13.05 ಟಿಎಂಸಿ ನೀರನ್ನು ಕರ್ನಾಟಕ ಬಳಸಿಕೊಳ್ಳ ಬಹುದು.ಕುಡಿಯುವ ನೀರಿಗೆ 7.05 ಟಿಎಂಸಿ ಕೇಳಿತ್ತು ಆದರೇ ತೀರ್ಪಿನ ಪ್ರಕಾರ ಸಿಕ್ಕಿರುವುದು 4 ಟಿಎಂಸಿ.
ನಮ್ಮ ನಾಡಿಗೆ ಈ ತೀರ್ಪಿನಿಂದ ತಕ್ಕ ಸ್ವಲ್ಪ ನ್ಯಾಯ ಸಿಕ್ಕಿರ ಬಹುದು.ಆದರೇ ಸಂಪೂರ್ಣ ತೀರ್ಪು ಪ್ರಕಟವಾದ ಮೇಲೆ ನಾಡಿನ ರೈತರ ಸ್ಥಿತಿಗತಿ ಸಮಗ್ರವಾಗಿ ತಿಳಿದು ಬರಲಿದೆ.

Please follow and like us:
0

Leave a Comment