RA NEWS:-ಗಡಿನಾಡಲ್ಲಿ ರಿಷಬ್ ಶೆಟ್ಟಿಯ ಕನ್ನಡ ಕಹಳೆ. . . !

ಗಡಿಯಲ್ಲಿ ಕನ್ನಡ ನುಡಿ. . !
ನಮ್ಮ ಕನ್ನಡ ನಾಡಿನ ಗಡಿ ಸಮಸ್ಯಗಳು ನಿರಂತರವಾಗಿ ಕಾಡುತ್ತಾ ಬಂದಿದೆ.ಈ ಬಗ್ಗೆ ಸರ್ಕಾರಗಳೂ ಒಂದು ಮಟ್ಟಕ್ಕೆ ಸ್ಪಂಧಿಸಿದೆ.ಆದರೇ ವೂಟ್ ರಾಜಕಾರಣವೂ ಗಡಿ ಸಮಸ್ಯಗಳಿಗೆ ಕಾರಣವಾಗಿದೆ.ಗಡಿ ನಾಡ ಕನ್ನಡಿಗರ ರಕ್ಷಣೆಗಾಗಿ ಕನ್ನಡ ಚಳವಳಿಗಾರರು ಹಲವಾರು ಹೋರಾಟಗಳನ್ನೂ ನಡೆಸಿದ್ದಾರೆ.
ಈಗ ಬೆಳ್ಳಿ ತೆರೆಯ ಮೇಲೆ ರಿಷಬ್ ಶೆಟ್ಟಿ ಮೊಳಗಿಸುತ್ತಾರೆ ಕನ್ನಡದ ಕಹಳೆ. . !

kasaragod
kasaragod

ಕೇರಳಕ್ಕೆ ಕಾಲು ಚಾಚಿದರೂ ಕನ್ನಡಮ್ಮನ ಕಂಕುಳಲ್ಲೇ ಇರುವ ಕಾಸರಗೂಡು ನಮ್ಮ ಕನ್ನಡ ನಾಡಿನ ಕೈಗೂಸು.ಆದರೇ ಇಂದು ಅಲ್ಲಿ ಮಳಯಾಳಿ ಮಯವಾಗಿ ಕನ್ನಡದ ಮಕ್ಕಳು ಮಳಯಾಳಿ ಮಾಯೆಗೆ ಸಿಲುಕುವಂತಾಗಿದೆ.ಯಾಕೆಂದರೇ ಅಲ್ಲಿನ ಶಾಲೆಗಳಲ್ಲಿ ಮಳಯಾಳಿ ಶಿಕ್ಷಕರನ್ನ ನೇಮಿಸಿ ಮಳಯಾಳಿ ಕಲಿಸುವ ಸಂಚು ನಡೆದಿದೆ.
ಕಾಸರಗೋಡಿನ ಕನ್ನಡದ ಮಕ್ಕಳ ಸಂಕಟವನ್ನ ಸಬ್ ಜೆಕ್ಟ್ ಮಾಡಿಕೊಂಡಿರುವ ರಿಷಬ್ ಶೆಟ್ಟಿ ತಮ್ಮ ಸಿನಿಮಾದಲ್ಲಿ ಇದೇ ವಿಷಯವನ್ನ ಪ್ರಧಾನವಾಗಿ ತೋರಿಸಲಿದ್ದಾರೆ.ಕಾಸರಗೂಡಿನ ಗಡಿ ಸಮಸ್ಯಗಳನ್ನು ನೋಡಿರುವ ರಿಷಬ್ ಶೆಟ್ಟಿ ಅವುಗಳಿಗೆ ಕಥಾರೂಪಕವನ್ನ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬ ಸಿನಿಮಾವನ್ನ ನಿರ್ದೇಶಿಸುತ್ತಿದ್ದಾರೆ.ರಿಷಬ್ ಶೆಟ್ಟಿಯವರ ಈ ಪ್ರಯತ್ನ ನಾಡಿನ ಗಡಿ ಸಮಸ್ಯಗಳ ಮೇಲೆ ಬೆಳಕು ಚೆಲ್ಲಲು ಅನುಕೂಲವಾಗಿತ್ತೆ.ರಿಷಬ್ ಶೆಟ್ಟಿಯವರ ಈ ಸಿನಿಮಾ ಯಶಸ್ವಿಯಾಗಬೇಕು ಆ ಮೂಲಕ ಗಡಿ ಸಮಸ್ಯ ಚರ್ಚೆಗೆ ಗ್ರಾಸವಾಗಬೇಕು.ನಾಡಿನ ಸಮಗ್ರ ಜನತೆಗೆ ಗಡಿ ಸಮಸ್ಯ ಅರ್ಥವಾಗಬೇಕು.

Please follow and like us:
0

Leave a Comment