RA NEWS:-ದರ್ಶನ್ ಕಾರು ಅಪಘಾತ. . .! ಕೈ ಬಳೆ ಕಟ್. . !

Darshan car accident. . !
ನೆನ್ನೆಯ ರಾತ್ರಿ ಸ್ಯಾಂಡಲ್ ವುಡ್ ಎರೆಡು ದುರಂತಗಳನ್ನು ಕಂಡಿದೆ.ಒಂದು ದುನಿಯಾ ವಿಜಿಯ ಮಾಡಿದ ಹಲ್ಲೆಯ ಪ್ರಕರಣವಾದರೇ ಮತ್ತೊಂದು ನಡು ರಾತ್ರಿ ನಡೆದ ದರ್ಶನ್ ಕಾರು ಅಪಘಾತ.ಮೈಸೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ದರ್ಶನ್,ದೇವರಾಜ್,ಪ್ರಜ್ವಲ್ ದೇವರಾಜ್ ರ ಕಾರು ರಸ್ತೆ ವಿಭಜಕ ಮತ್ತು ಬೀದಿ ದೀಪದ ಕಂಬಕ್ಕೆ ಗುದ್ದಿ ಅಪಘಾತವಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರು ಮೈಸೂರು ಹಿನಕಲ್​ ರಿಂಗ್​ ರಸ್ತೆಯ ಬಳಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ದರ್ಶನ್ ರವರ ಕೈಗೆ ಏಟಾಗಿದ್ದು ಅವರು ಬಳಸಿದ್ದ ಬಳೆ ಕಟ್ ಆಗಿದೆ.ನಟ ದೇವರಾಜ್ ಕೈಬೆರಳಿಗೆ ಪೆಟ್ಟಾಗಿದ್ದು ಅವರ ಪುತ್ರ ಪ್ರಜ್ವಲ್ ದೇವರಾಜ್ ಗೂ ಗಾಯಗಳಾಗಿದೆ.ದರ್ಶನ್ ರವರ ಗೆಳೆಯರಾದ ರಾಯ್ ಎಂಬುವರು ಕಾರನ್ನು ಚಲಿಸುತ್ತಿದ್ದು,ಮುಂಬಾಗದ ಅವರ ಪಕ್ಕದಲ್ಲಿ ದರ್ಶನ್ ಕುಳಿತ್ತಿದ್ದರು,ಹಿಂಬದಿಯ ಸೀಟಿನಲ್ಲಿ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಕುಳಿತ್ತಿದ್ದರು.

darshan car accident
darshan car accident

ಅಪಘಾತವಾದ ತಕ್ಷಣ ಸ್ಥಳಿಯರು ಮೈಸೂರಿನ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ಸೇರಿಸಿದ್ದರು.ದರ್ಶನ್ ರವರ ಬಲಗೈ ಫ್ಯಾಕ್ಚರ್ ಆಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ರವರಿಗೂ ಚಿಕಿತ್ಸೆ ನೀಡಲಾಗಿದೆ.ಅಪಘಾತದಲ್ಲಿ ಯಾರಿಗೂ ಗುರುತರವಾದ ಪೆಟ್ಟುಗಳು ಆಗದೇ ಎಲ್ಲರೂ ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದು ವೈಧ್ಯರು ತಿಳಿಸಿದ್ದಾರೆ.

Please follow and like us:
0

COMMENTS

  • Anonymous

    ಶ್ರೀ ಗುರುರಾಯರು ..ಶ್ರೀ ಮುತ್ತು ರಾಜರು ಹರಸಿಹಾರೈಸಲಿ..ಶೀಘ್ರ ಗುಣಮುಖರಾಗಲೆಂದು ಬಯಸುವೇ

Leave a Comment