RA NEWS:-ಅಟ್ಯಾಕ್ ಆನ್ ರೌಡಿ ಅರಸಯ್ಯ. .!

ಮತ್ತೆ ಬಾಯಿ ತೆರೆದ ಭೂಗತ ಲೋಕ. . !
ಬೆಂಗಳೂರಿನಲ್ಲಿ ಕದ ಮುಚ್ಚಿ ಕುಳಿತ್ತಿದ್ದ ಭೂಗತ ಲೋಕ ಮತ್ತೆ ಕೆರಳಿ ನಿಂತಿದೆಯಾ. ? ಹಲವಾರು ವರ್ಷಗಳಿಂದ ಮೂಲೆ ಸೇರಿದ ಮಚ್ಚುಗಳಿಗೆ ಮತ್ತೆ ರಕ್ತದಾಹ ಬಂದಿದೆಯಾ ..? ಒಂದು ತಲೆಮಾರಿನ ರೌಡಿಗಳು ಮನೆ ಸೇರಿಕೊಂಡು ಮೆತ್ತಗಾದರು ಎನ್ನುವಷ್ಟರಲ್ಲೇ ಅಂಡರ್ ವರ್ಲ್ಡ್ ಮತ್ತೆ ಅಬ್ಬರಿಸಿದೆ.
ಅಟ್ಯಾಕ್ ಆನ್ ರೌಡಿ ಅರಸಯ್ಯ. .!
ಬೆಂಗಳೂರು ದಕ್ಷಿಣದಲ್ಲಿ ಹಿಂದೆ ಕುಖ್ಯಾತಿಯನ್ನ ಪಡೆದಿದ್ದ ರೌಡಿ ಅರಸಯ್ಯನ ಮೇಲೆ ಇಂದು ಭೀಕರ ಹಲ್ಲೆ ನಡೆದಿದೆ.ಹೇಳಿ ಕೇಳಿ ಅಮಾವಾಸ್ಯಯದಿನವೇ ಹಲ್ಲೆ ನಡೆದಿದೆ.ಅಮಾವಾಸ್ಯಯ ದಿನ ಹಲವರು ದೇವಸ್ಥಾನಗಳಿಗೆ ಹೋಗೊದು ರೂಡಿ.ಅರಸಯ್ಯ ಕೂಡಾ ಇಂದು ಅಮಾವಾಸ್ಯ ಪೂಜೆಗಾಗಿ ಹೋಗಿದ್ದ.

bangalore under world
bangalore under world

ಅಮಾವಾಸ್ಯದ ದಿನದಂದೇ ನಡೆಯಿತು ಅಟ್ಯಾಕ್. ..!
ಹಲವಾರು ವರ್ಷಗಳಿಂದ ರೌಡಿ ಅರಸಯ್ಯನ ಯಾವುದೇ ಸುದ್ಧಿ ಇರಲಿಲ್ಲಾ.ಫೀಲ್ಡು ಬಿಟ್ಟು ಸುಮ್ಮನಾದ ಅಂತಲ್ಲೇ ಇತ್ತು ವಿಚಾರ.ಇಂದು ಅಮಾವಾಸ್ಯಯ ದಿನ ಅರಸಯ್ಯ ಶ್ರೀರಂಗಪಟ್ಟಣಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರುವಾಗ ಟಿ ಎಂ ಹೊಸೂರು ಎಂಬ ಹಳ್ಳಿಯ ಬಳಿ ಅವನ ಮೇಲೆ ಭೀಕರ ಹಲ್ಲೆ ನಡೆದಿದೆ.ಈ ಹಲ್ಲೆಯಿಂದ ಅರಸಯ್ಯನ ಸ್ಥಿತಿ ಹೇಗಿದೆ ಎಂಬ ವಿಚಾರ ತಿಳಿದು ಬಂದಿಲ್ಲಾ.ಸಧ್ಯದ ಮಾಹಿತಿ ಪ್ರಕಾರ ಅರಸಯ್ಯ ಮೈಸೂರಿನ ಆಸ್ಪತ್ರೆಯಲ್ಲಿದ್ದಾನೆ ಎಂಬ ಸುದ್ಧಿ ಇದೆ.
ಈ ಹಲ್ಲೆ ಗೆ ಕಾರಣವೇನು,ಹಲ್ಲೆ ಮಾಡಿದವರ್ಯಾರು ಎಂಬೆಲ್ಲಾ ವಿಚಾರ ಮುಂದಿನ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಅಂದರ್ ಆಗಿದ್ದ ಅಂಡರ್ ವರ್ಲ್ಡ್ ಮತ್ತೆ ಬಾಹರ್ ಆಗಿದ್ದು ಯಾಕೋ. .?
ಗೋರಿಯಾಳದಲ್ಲಿ ಹುದುಗಿದ್ದ ರಂಗನಾಥ್ ಶವ ಅತ್ತಿತ್ತ ಹೊರಳಿತಾ. .!

Please follow and like us:
0

Leave a Comment