RA NEWS:-ಮಹದಾಯಿ ಹೋರಾಟದ ರಣ ಕಹಳೆ ದೆಹಲಿಯ ದಂತಗೋಪುರದಲ್ಲಿ ಮಾರ್ದನಿಸಲಿ. . .!

mahadayi

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರೆದಲಿ ಹರಸು
ಮಹದಾಯಿ ಹೋರಾಟದ ಪರ್ವಕಾಲ ಇದೀಗ ಆರಂಭವಾಗಿದೆ.ರಾಜಕೀಯ ಪಕ್ಷಗಳ ಕೆಸರೆರಚಾಟದಿಂದ ರಾಜ್ಯದ ಜನತೆ ದಿಕ್ಕು ತಪ್ಪಿದ್ದರು.ಹಲವಾರು ವರ್ಷಗಳಿಂದ ಹೋರಾಡುತ್ತಿದ್ದ ರೈತರು ಒಂದು ಹಂತದಲ್ಲಿ ಹತಾಶರಾಗಿದ್ದರು.ಆದರೀಗ ರೈತರು ಕನ್ನಡಪರ ಚಳವಳಿಗಾರರು ಒಂದಾಗಿದ್ದಾರೆ ಈ ಹೋರಾಟಕ್ಕೆ ಕನ್ನಡ ಚಿತ್ರರಂಗವೂ ಬೆಂಬಲ ಸೂಚಿಸಿದೆ.ಮಹದಾಯಿ ಹೋರಾಟದ ಐಕ್ಯತೆ ತುಂಬಾ ಮುಖ್ಯವಾದದ್ದು. ಯಾಕೆಂದರೆ ಕುಡಿಯುವ ನೀರಿಗಾಗಿ ಆರಂಭಿಕ ಘಟ್ಟದಿಂದಲ್ಲೂ ಮಹದಾಯಿ ಪ್ರದೇಶದ ರೈತರು ನಿರಂತರ ಹೋರಾಟಗಳನ್ನ ಮಾಡಿಕೊಂಡು ಬಂದಿದ್ದಾರೆ.
ಕೇಂದ್ರ ಸರ್ಕಾರ ಮಹದಾಯಿ ವಿಚಾರದಲ್ಲಿ ಅಂದಿನಿಂದಲ್ಲೂ ಇಂದಿನವರೆಗೂ ನಿರ್ಲಕ್ಷವನ್ನ ಮಾಡಿಕೊಂಡು ಬಂದಿದೆ. ಹಿಂದೆ ಇದೇ ರೀತಿ ನದಿ ನೀರಿನ ವಿವಾದಗಳು ರಾಜ್ಯಗಳ ನಡುವೆ ತಾರಕಕ್ಕೇರಿದ ಸಂದರ್ಭದಲ್ಲಿ ಅಂದಿನ ಕೇಂದ್ರ ಸರ್ಕಾರದ ನೇತಾರರು ಆಸಕ್ತಿವಹಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.ಆ ಸಾಲಿನಲ್ಲಿ ನಿಲ್ಲುವವರು ಇಂದಿರಾಗಾಂಧಿ, ವಾಜಪೇಯಿ ಮತ್ತು ದೇವೇಗೌಡರು.
ವಿಶ್ವವನ್ನ ಜೋಡಿಸಬೇಕು. . .ದೇಶ ದೇಶಗಳ ಬಾಂದವ್ಯ ಬೆಳೆಯಬೇಕು ಎಂದು ಹಂಬಲಿಸುವ ಪ್ರಧಾನ ಮಂತ್ರಿ ಮೋದಿಯವರು ಇಂದು ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನ ಹಾರಿಸಿದ್ದಾರೆ ನಿಜ, ಆದರೇ ಅದ್ಯಾಕೆ ಅವರು ನಮ್ಮ ನಾಡಿನ ಸಮಸ್ಯಗಳ ಬಗ್ಗೆ ಮೌನ ತಾಳಿದ್ದಾರೆ.

ಒಂದೇ ನಾಡು ಒಂದೇ ಕುಲವು ಒಂದೇ ದೈವವು. .!
ಕರ್ನಾಟಕದ ಏಕೀಕರಣದ ಕಾಲದಿಂದಲ್ಲೂ ಕನ್ನಡ ನಾಡು ನುಡಿ ನೆಲ ಜಲದ ಬಗ್ಗೆ ಹೋರಾಟಗಳು ನಡೆದುಕೊಂಡು ಬಂದಿದೆ. ಆಗ ಸಮಸ್ಯೆಗಳು ಹೆಚ್ಚಾಗಿದ್ದವು ಸಂಘಟನೆಗಳು ಕಡಿಮೆ ಇತ್ತು. ಆದರೇ ಈಗ ಏನಾಗಿದೆ ಸಂಘಟನೆಗಳು ಹಾದಿಗೊಂದು ಬೀದಿಗೊಂದು ತೆರೆದುಕೊಂಡಿದೆ. ಕನ್ನಡದ ಪರ ಹೋರಾಡಲು ಸಾವಿರಾರು ಯುವಕರು ಸಿದ್ಧರಿದ್ದಾರೆ. ಆದರೇ ಒಮ್ಮತ ಅನ್ನೋದಿಲ್ಲ. ಕನ್ನಡ ಚಳವಳಿಗಾರರು ಈಗ ಒಗ್ಗಟನ್ನು ಪ್ರದರ್ಶಿಸಬೇಕು.

ಕನ್ನಡ ಚಳವಳಿಗೆ ಹೋರಾಟದ ಪರಂಪರೆಯನ್ನ ತಂದವರು ಮ.ರಾಮಮೂರ್ತಿ,ಅ.ನ.ಕೃ, ಸಂಪಂಗಿ ಮುಂತಾದವರು ಅವರ ಹೋರಾಟದ ಮಾರ್ಗದಲ್ಲೇ ಬಂದವರು ವಾಟಾಳ್ ನಾಗರಾಜ್, ನಾರಾಯಣಕುಮಾರ್,ಸಾ.ರಾ.ಗೋವಿಂದು. . . ಮುಂತಾದವರು. ಹಿಂದೆ ನಮ್ಮ ರಾಜ್ಯದ ರಾಜಧಾನಿಯಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿತ್ತು ಅಂತಹಾ ಸಮಯದಲ್ಲಿ ಕನ್ನಡ ಚಳವಳಿಗಾರರಿಂದಲ್ಲೇ ಕನ್ನಡ ರಕ್ಷಣೆ ನಡೆಯಿತು.ಅಂದಿಗೆ ಕನ್ನಡ ಚಳವಳಿಗಾರರು ಬೀದಿಗಿಳೀದು ಪೊಲೀಸರ ಬೂಟಿನೇಟು ತಿಂದು ಹೋರಾಡದಿದ್ದರೇ ನಮ್ಮ ರಾಜಧಾನಿ ಪರಭಾಷಿಗರ ಪಾಲಾಗುತ್ತಿತ್ತು. ಹಾಗಾಗಿ ನಾವು ಹಿರಿಯ ಕನ್ನಡ ಚಳವಳಿಗಾರರಿಗೆ ಗೌರವ ಕೊಡಬೇಕು.
ಮಹದಾಯಿ ಹೋರಾಟದ ಮಾರ್ದನಿ ದೆಹಲಿಗೆ ಮುಟ್ಟಲಿ. . .!

ನಿಮ್ಮ ಅಭಿಪ್ರಾಯವನ್ನ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ಆನಂತರ ಆಡ್ ಕಾಮೆಂಟ್ ಬಟನ್ ಒತ್ತಿ. ನಿಮ್ಮ ಸ್ಪರ್ಷ ಮತ್ತು ಅಕ್ಷರಗಳು ವೆಬ್ ಸೈಟ್ ಗೆ ಹಾರೈಕೆ ಆಗುತ್ತೆ.

Please follow and like us:
0

COMMENTS

  • ಕಳಸಾ-ಬಂಡೂರಿ ಮಹದಾಯಿ ನದಿ ನೀರಿನ ವಿಚಾರನ ಸುಮಾರು ೩೦ ವರ್ಷಗಳಷ್ಟು ಕಾಲ ಎಳಕೊಂಡು ಬಂದಿರೋದು ಸಹಾ ಇದೇ ಭ್ರಷ್ಟಾಚಾರಿ ವ್ಯವಸ್ಥೆ. ಕಾವೇರಿ ವಿವಾದಾನ ಇನ್ನೂ ಜೀವಂತವಾಗಿ ಇಟ್ಟಿರೋದು ಸಹಾ ಇದೇ ಭ್ರಷ್ಟಾಚಾರಿ ವ್ಯವಸ್ಥೆ. ಅಖಂಡ ಕರ್ನಾಟಕ ರಾಜ್ಯನಾ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅಂತಾ ಒಡೆದು ಅಳ್ತಾ ಇರೋದು ಸಹಾ ಇದೇ ಭ್ರಷ್ಟಾಚಾರಿ ವ್ಯವಸ್ಥೆ. ದೇಶದ ಗಡಿ ಕಾಪಾಡೋ ಯೋಧರನ್ನ ಮತ್ತು ನಮಗೆ ಅನ್ನದಾತರಾದ ರೈತರನ್ನ ಯಾವುದೇ ಭಾಷೆ, ರಾಜ್ಯ ಅಥವಾ ಜಾತಿ-ಧರ್ಮಗಳಿಂದ ಗುರುತಿಸಬಾರದು. ಅವರಿಬ್ಬರೂ ನಾಡಿನ ಆಸ್ತಿ ಮತ್ತು ಶಕ್ತಿ. ದುರಂತ ಅಂದ್ರೆ ಇತ್ತೀಚೆಗೆ ಅಗ್ತಾ ಇರೋ ಬೆಳವಣಿಗೆಗಳನ್ನ ಗಮನಿಸಿದರೆ ರೈತರನ್ನು ಸಹಾ ನಮ್ಮ ಪಕ್ಷದ ರೈತರು, ಅವರ ಪಕ್ಷದ ರೈತರು ಅಂತ ಹೇಳಿ ಅನ್ನದಾತರ ಒಗ್ಗಟ್ಟನ್ನ ಒಡೆದು ಮಹದಾಯಿ ಹೋರಾಟದ ಬಲಕುಂದಿಸುವ ಹೀನ ಕೆಲಸ ಕೆಲವರು ಮಾಡ್ತಿದಾರೆ.

    ನಮ್ಮ ದೇಶದಲ್ಲಿ ಒಟ್ಟು ೩೦ ರಾಜ್ಯಗಳಿವೆ, ಅದ್ರ ಪೈಕಿ ಬರೋಬ್ಬರಿ ೨೨ ರಾಜ್ಯಗಳು ಉತ್ತರ ಭಾಗದಲ್ಲಿ ಇವೆ. ಆ ೨೨ ರಾಜ್ಯಗಳಲ್ಲಿ ಯಾವಾಗಾದರೂ ನೆಲ-ಜಲ-ಭಾಷೆಗಳ ಸಲುವಾಗಿ ಗಲಾಟೆಗಳಾಗಿರೋದು ನೋಡಿದಿರಾ ಇಲ್ಲ ಕೇಳಿದಿರಾ. ದಕ್ಷಿಣದಲ್ಲಿರೋದು ಬರೀ ೭ ರಾಜ್ಯಗಳು. ಇಲ್ಲಿ ನಮ್ಮಗಳ ಮಧ್ಯದಲ್ಲೇ ಯಾಕೆ ದಿನಾ ಒಂದಿಲ್ಲೊಂದು ವಿಚಾರಕ್ಕೆ ಗಲಾಟೆಗಳು ಆಗ್ತಾವೆ ಅಂತಾ ಯಾವತ್ತಾದ್ರೂ ವಿಚಾರ ಮಾಡಿದಿರೇನು.

    ಇಲ್ಲಾ ಆಲ್ವಾ…

    _ವಾಸ್ತು ಹರೀಶ್

Leave a Comment