RA NEWS:-ಭಕ್ತರ ಭಕ್ತಿಯೇ ದೈವ ಶಕ್ತಿ. . .!


ಒಂದು ಭಕ್ತ ಸಮೂಹ ಮನಸ್ಸು ಮಾಡಿದರೇ ಅಲ್ಲಿ ಒಂದು ಪುಣ್ಯ ಕ್ಷೇತ್ರವೇ ತೆರೆದುಕೊಳ್ಳುತ್ತೆ.ತರೆದುಕೊಳ್ಳವ ಪುಣ್ಯ ಕ್ಷೇತ್ರ ಸಾವಿರಾರು ಭಕ್ತಾಧಿಗಳಿಗೆ ಪುಣ್ಯ ದಾಮವಾಗುತ್ತೆ.ಪುಣ್ಯದಾಮದಲ್ಲಿ ಅಗೋಚರವಾದ ದಿವ್ಯವಾದ ಅದ್ಭುತ ಶಕ್ತಿ ನೆಲೆಗೊಳ್ಳುತ್ತೆ.ಆ ಶಕ್ತಿಯ ಕೃಪೆಗೆ ಭಕ್ತಾಧಿಗಳು ಪಾತ್ರರಾಗುತ್ತಾರೆ.ಅಂತಹಾ ಒಂದು ಪುಣ್ಯ ಕಾರ್ಯ ಬೆಂಗಳೂರಿನ ಕಾಮಾಕ್ಷೀಪಾಳ್ಯದಲ್ಲಿ ನೆರವೇರಲು ಸಕಲ ಸಿದ್ಧತೆ ನಡೆದಿದೆ.
ಮಾಗಡಿ ರಸ್ತೆಯ ಟೋಲ್ ಗೇಟ್ ನಿಂದ ಹೋರೆಟು ವೀರೇಶ್ ಚಿತ್ರಮಂದಿರವನ್ನ ದಾಟಿ ಹೌಸಿಂಗ್ ಬೋರ್ಡ್ ಗೂ ಮುಂದೆ ಬಂದರೇ ಸಮತಟ್ಟ ರಸ್ರೆ ಮುಗಿದು ಇಳಿಜಾರು ಆರಂಭವಾಗುವ ಸ್ಥಳದಲ್ಲಿ ಬಲಕ್ಕೆ ತಿರುಗಿ ಶ್ರೀರಾಮನಗರದ ಗಾಡಿ ಮುದ್ದಣ್ಣ ರಸ್ತೆಯಲ್ಲಿ ಗಾವುದ್ದ ಸಾಗಿದರೇ ನಿಮ್ಮ ಬಲಕ್ಕೆ ದೇವಾಲಯದ ದರ್ಶನವಾಗುತ್ತೆ.
ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ (ರಿ). . .!
ಈ ಟ್ರಸ್ಟ್ ವತಿಯಿಂದ ಶ್ರೀ ವೀರಾಂಜನೇಯ ಸ್ವಾಮಿ,ಶ್ರೀ ಮಹಾಗಣಪತಿ,ಶ್ರೀ ಮಹಾಲಕ್ಷೀ,ನವಗ್ರಹ ಮತ್ತು ನಾಗರಕಲ್ಲು ಪುನರ್ ಸ್ಥಾಪನಾ ಸಮಾರಂಭ ನಡೆಯಲಿದೆ.ಈ ಸಮಾರಂಭ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಾನಿಧ್ಯದಲ್ಲಿ ಉದ್ಘಾಟನೆಯಾಗಲಿದೆ.ದಿನಾಂಕ 27-01-2018 ರಿಂದ 29-01-2018ರ ತನಕ ಈ ದಾರ್ಮಿಕ ಕಾರ್ಯ ನಡೆಯಲಿದೆ.ಭಕ್ತಾದಿಗಳಲು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ನವರು ಕೇಳಿಕೊಂಡಿದ್ದಾರೆ.ಇನ್ಯಾಕೆ ತಡ ನಡೆಯಿರಿ ಪ್ರತಿಯೋಬ್ಬರೂ ಭಗವಂತನ ಕೃಪೆಗೆ ಪಾತ್ರರಾಗಿ.

Please follow and like us:
0

Leave a Comment