RA NEWS:-ಗೌರಿ ದಿನ ಗರಿಗೆದರಿದ ಘೋಷಣೆಗಳು. . !/Gauri Day’s Declarations


Gauri Day’s Declarations

ಬೆಂಗಳೂರು:ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ನಗರದಲ್ಲಿ ಸೋಮುವಾರ ‘ಗೌರಿ ದಿನ’ ಕಾರ್ಯಕ್ರಮವನ್ನ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ, ಕವಿತಾ ಲಂಕೇಶ್, ಪ್ರಕಾಶ್ ರಾಜ್,ಕನ್ಹಯ ಕುಮಾರ್,ಜಿಗ್ನೇಶ್ ಮೆವಾನಿ, ಉಮರ್ ಖಾಲಿದ್, ಶೆಹ್ಲಾ ರಶೀದ್‌, ಡಾ:ವಾಸು,ಟ್ರಸ್ಟ್ ನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ಮುಂತಾದವರು ಭಾಗವಹಿಸಿದ್ದರು.

, “ಮುಂದಿನ ಚುನಾವಣೆ ನಿಜವಾದ ಅಗ್ನಿಪರೀಕ್ಷೆ ಇದ್ದಂತೆ. ಈ ರಾಜ್ಯವನ್ನು ಬಿಜೆಪಿಗೆ ಒಪ್ಪಿಸಿದರೆ ಇಡೀ ದೇಶ ಮೋದಿಯ ತೆಕ್ಕೆಗೆ ಸಿಕ್ಕಂತಾಗುತ್ತದೆ. ಇದನ್ನು ತಡೆಯದಿದ್ದರೆ ಸರ್ವನಾಶ ಖಚಿತ” ಎಂದು ಎಚ್ಚರಿಸಿದ್ದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ.
ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿ ಮಾತನಾಡುತ್ತ “ರಾಜ್ಯದಲ್ಲಿ ಮುಂಬರುವ ಚುನಾವಣೆಗೆ ಎಲ್ಲ ಪಕ್ಷಗಳು ಮತ್ತು ಪ್ರಗತಿಪರ ಮನಸು ಉಳ್ಳವರು ಒಗ್ಗಟ್ಟಿನಿಂದ ಹೋರಾಡಿ ಚಡ್ಡಿ ಪಕ್ಷ ಬಿಜೆಪಿಯನ್ನು ಮಣಿಸಬೇಕು” ಎಂದು ಹೇಳಿದರು.

ಇದೇ ವೇಳೆ ಜನರನ್ನ ಉದ್ದೇಶಿಸಿ ಮಾತನಾಡಿದ ಕನ್ಹಯ್ಯ ಕುಮಾರ್ ” ರಾಮ, ಅಲ್ಲಾ, ವಂದೇ ಮಾತರಂ ಮತ್ತು ಭಾರತೀಯ ಸೇನೆಯ ಗೀತೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಜನರ ಮೇಲೆ ಪ್ರಭಾವ ಬೀರುವ ವಿಷಯಗಳಿಂದ ದೂರವುಳಿಯಲು ಸಾಧ್ಯವಿಲ್ಲ ” ಎಂದು ಹೇಳಿದರು.
20 ವರ್ಷಗಳ ಶುಶ್ರೂಷೆ. . .!

ನಟ ಪ್ರಕಾಶ್‌ ರೈ ಮಾತನಾಡಿ, ‘ಪ್ರಪಂಚದಲ್ಲಿ ಯಾವುದೇ ಫ್ಯಾಸಿಸ್ಟ್‌ ಶಕ್ತಿಗಳು ಹೆಚ್ಚು ಕಾಲ ಉಳಿದಿಲ್ಲ. ನಮ್ಮ ದೇಶದಲ್ಲಿಯೂ ಹೆಚ್ಚೆಂದರೆ ಇನ್ನು ಐದು ವರ್ಷ ಕಾಲ ಇವರು ಆಡಳಿತ ನಡೆಸಬಹುದು. ಆದರೆ, ಅವರು ಮಾಡುವ ಗಾಯ ಮತ್ತು ನೋವಿಗೆ ನಾವು 20 ವರ್ಷಗಳು ಶುಶ್ರೂಷೆ ಮಾಡಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರಾNEWS:-ಪ್ರಗತಿಪರರ ರಕ್ತದಲ್ಲಿ ಚರಿತ್ರೆ ಬರೆಯಲು ಹೊರಟಿರುವವರು ಯಾರು..?

Please follow and like us:
0

Leave a Comment