RA NEWS:-ಕನ್ನಡಿಗರನ್ನು ಅವಮಾನಿಸಿದ ವಿನೋದ್ ಪಾಲೇಕರ್ ವಿರುದ್ಧ ಮನೋಹರ ಮರ್ದನ. . ! congress it cell

congress it cell

ಕಾಂಗ್ರೇಶ್ ನ ಮನೋಹರ್ ಬಳಿ ಏನಾದರೂ ಇದೆ ಎನ್ನುವುದಾದರೇ ಅದು ಪ್ರತಿಭಟನೆಯ ಫಸಲು.ಅಂದಿಗೆ ಕೇಂದ್ರದ ಹೌಸಿಂಗ್ ಬೋರ್ಡ್ ನ ಸಚಿವರಾಗಿದ್ದ ಅನಂತ್ ಕುಮಾರ್ ರವರ ಹುಡ್ಕೋ ಹಗರಣದ ವಿರುದ್ಧ ಪ್ರತಿಭಟಿಸಿದ್ದು ಮನೋಹರ್ ಮತ್ತು ಯುವ ಕಾಂಗ್ರೆಸ್ ತಂಡ.ಅಂದಿನಿಂದ ಇಂದಿನವರೆಗೂ ಅನೇಕ ಹೋರಾಟಗಳನ್ನ ಮಾಡಿಕೊಂಡು ಬಂದಿದ್ದಾರೆ ಮನೋಹರ್ ಅವರೀಗ ಕವಿಕದ ಅಧ್ಯಕ್ಷರು.

ಇತ್ತಿಚೆಗೆ ಕನ್ನಡಿರನ್ನ ಅವಮಾನಿಸುವಂತೆ ಹೇಳಿಕೆ ಕೊಟ್ಟ ವಿನೋದ್ ಪಾಲೇಕರ್ ನಾಡ ದ್ರೋಹದ ವಿರುದ್ಧ ರಾಜಾಜಿನಗರ ಕಾಂಗ್ರೆಸ್ ನ ಮಾಹಿತಿ ತಂತ್ರಜ್ಞದ ವಿಭಾಗದವರು ಮನೋಹರ್ ನೇತೃತ್ವದಲ್ಲಿ ಹೋರಾಟ ಮಾಡಿದರು.

ಸಮಗ್ರ ಕನ್ನಡಿಗರಿಗೆ ಅವಮಾನವಾಗುವಂತೆ ಮಾತನಾಡಿರುವ ವಿನೋದ್ ಪಾಲೇಕರ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.ಎಲ್ಲವನ್ನೂ ತಿಳಿದಿರುವ ಗೋವಾದ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಮೌನದಿಂದಿರುವುದನ್ನ ಖಂಡಿಸಿದ್ದಾರೆ.

ಮನೋಹರ್ ಪಾರೀಕರ್ ಮತ್ತು ಯಡ್ಯೂರಪ್ಪನವರ ಮಧ್ಯ ನಡೆದ ಪತ್ರದ ನಾಟಕ ಬಯಲಾಗಿದೆ ಎಂದು ಟೀಕಿಸಿದರು.ವಿನೋದ್ ಪಾಲೇಕರ್ ಬಾವ ಚಿತ್ರವನ್ನ ದಹಿಸಿ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಪ್ರತಿಭಟಿಸಲಾಯಿತು.

Please follow and like us:
0

Leave a Comment