RA NEWS:-ದುನಿಯಾ ವಿಜಿಗೆ ಬೇಲ್ ಇಲ್ಲಾ. . . !

ದುನಿಯಾ ವಿಜಿಗೆ ಬೇಲ್ ಇಲ್ಲಾ. . . ! no bail to duniya vijay
ಕರಿಚಿರತೆ ಬೋನಿನಲ್ಲಿ ಶಥಪಥ ಹೆಜ್ಜೆ ಹಾಕುತ್ತಲ್ಲೇ ಇತ್ತು. . .!
ಕಳೆದ ಮೂರು ದಿನಗಳಿಂದ ಬೋನಿನಲ್ಲಿದ್ದ ಕರಿಚಿರತೆ ಚಡಪಡಿಸುತ್ತಲ್ಲೇ ಇತ್ತು.ಬಯಲಿನಲ್ಲಿ ಅಂಡಲೆಯುತ್ತಿದ್ದ ಕರಿಚಿರತೆಯನ್ನ ಬಂಧಿಸಿ ಬೋನಿಗೆ ಹಾಕಿದಾಗ ಬೇಸತ್ತು ಹೋಗಿತ್ತು.ಈಗ ಬೋನಿನಿಂದ ಹೊರ ಬರಲು ಅದಕ್ಕೆ ಬೇಕು ಬೇಲು.

duniya vijay
duniya vijay

ದುನಿಯಾ ವಿಜಿ ಮತ್ತು ಗ್ಯಾಂಗ್ ಮಾರುತಿ ಗೌಡ ಎಂಬುವರ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಇಂದು ಬೇಲ್ ವಿಚಾರವಾಗಿ ಎಸಿಎಂಎಂ ಕೋರ್ಟ್ ತೀರ್ಪು ಕಾದರಿಸಿತ್ತು.ಸ್ಯಾಂಡಲ್ ವುಡ್ ಸದ್ಧಿಲ್ಲದೇ ಮ್ಯಾಜಿಸ್ಟ್ರೇಟ್ ಕೋರ್ಟ್ ನ ತೀರ್ಪಿನತ್ತ ಕಿವಿ ನೆಟ್ಟಿತ್ತು.ಕಳೆದ ನಲವತ್ತ ಎಂಟು ಗಂಟೆಗಳಿಂದ ವಿಜಿ ಅಂಡ್ ಗ್ಯಾಂಗ್ ಬೇಲ್ ವಿಚಾರವಾಗಿ ಸಾಕಷ್ಟು ಕುತೂಹಲ ಮೂಡಿಸಿತ್ತು.ಇಂದು ಸಂಜೆ 5 ಗಂಟೆಗೆ ಹೊರ ಬಿದ್ದ ತೀರ್ಪಿನಲ್ಲಿ ದುನಿಯಾ ವಿಜಿ ಗೆ ಜಾಮೀನು ನಿರಾಕರಿಸಿದೆ.ಹಾಗಾಗಿ ವಿಜಿ ಅಂಡ್ ಗ್ಯಾಂಗ್ ಮತ್ತೆ ಜೈಲು ಸೇರಬೇಕು.ವಿಜಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಯನ್ನ ವಜಾಗೊಳಿಸಲಾಗಿದೆ.
ಕರಿ ಚಿರತೆ ಮತ್ತೆ ಬೋನಿಗೆ ಬಿದ್ದಿದೆ. . .!

Please follow and like us:
0

Leave a Comment