RA NEWS:-ಪ್ರತಿಭಾಕಾರಂಜಿಯಲಿ ಬಂಡೇಮಠದ ಭೀಮಯ್ಯನವರಿಗೆ ಭೀಮಪಾಲು

ನಮ್ಮರಾಮನಗರ ಜಿಲ್ಲಾಸುದ್ದಿವಿಭಾಗ
ಮಾಗಡಿ/ಕುದೂರು: ಇಲ್ಲಿಗೆ ಸಮೀಪದ ಕಂಚುಗಲ್ಬಂ-ಡೇಮಠದ ಪ್ರೌಢಶಾಲಾ ಮುಖ್ಯಸ್ಥ ಭೀಮಯ್ಯರ ಪಾಲಿಗೆ ಹದಿನೆಂಟು ಮಕ್ಕಳು ಸೋಲೂರು ಹೋಬಳಿಯಿಂದ ಜಿಲ್ಲಾಹಂತಕ್ಕೆ ಭೀಮಪಾಲು ಸಾಧ್ಯವಾಗಿದೆ.
ಮಾಗಡಿಯ ಸರಕಾರಿ ಪಿಯು ಕಾಲೇಜಿನ ಆವರಣದಲ್ಲಿ ನಡೆದ ಕಲಿಕೋತ್ಸವ ಪ್ರತಿಭಾಕಾರಂಜಿಯ ವೇಳೆ ಕಿರುನಾಟಕ ಮತ್ತು ಸಾಮೂಹಿಕ ಸಂಗೀತ ಸ್ಪರ್ಧೆಯಿಂದ ಹದಿನೆಂಟು ಮಕ್ಕಳು ಗೆಲುವು ಸಾಧಿಸಿ ಜಿಲ್ಲಾಹಂತಕ್ಕೆ ಆಯ್ಕೆಯಾಗಿದ್ದಾರೆ.

magadi  bandematha
magadi bandematha

ಅದರ ಫಲವೆ ಮುಕ್ಯಶಿಕ್ಷಕ ಭೀಮಯ್ಯ ಕೊಟ್ಟ ಪ್ರೋತ್ಸಾಹ ಭೀಮಬಲಕ್ಕೆ ಸಾಟಿ ಎನ್ನು ತ್ತಾರೆ ಆ ಶಾಲೆಯ ಕ್ರಿಯಾಶೀಲ ಶಿಕ್ಷಕ ಹೊಂಬಾಳಮ್ಮನ ಪೇಟೆ ಗುರುಮೂರ್ತಿ’
ಆದರೆ ಶಾಲಾ ಪ್ರತಿಭಾಕಾರಂಜಿಯಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಕಿರುನಾಟಕದ ತಂಡದ ನಟ ಮಹೇಶ ಮಾತನಾಡಿ ” ಸರ್ ಗುರುಮೂರ್ತಿ ಗುರುಗಳು ನಿರಂತರ ನಾಟಕದ ತಾಲೀಮು ನಮಗೆ ಈ ಯಶಸ್ಸಿಗೆ ಕಾರಣ” ಎಂದು ಹೇಳಿದರು.
” ಮೈಕ್ ಇಲ್ಲದೆ ಹೇಗೆ ಮಾತನಾಡಬೇಕು,ಡೈಲಾಗ್ ರಿಲಿಸ್ಗೆದ ಜನ ಸ್ಪಂದನೆ ನೋಡಿ ನಂತರ ಮಾತನಾಡಿ ಎಂಬ ಕುಶಲತೆಯನ್ನು ಅವರು ಯಾವ ರೆಪರ್ಟರಿಯಲಿ ಕಂಡುಬಂದು ನಮಗೆ ತಿಳಿಸಿದರೋ ಗೊತ್ತಿಲ್ಲ. ನಾವೆಲ್ಲಾ ವೇದಿಕೆಯನ್ನು ಬಳಸಿಕೊಂಡಿದ್ದೆ ಪ್ರಥಮ ಸ್ಥಾನ ಗಳಿಸಲು ಇದಕ್ಕೆಲ್ಲಾ ಕಾರಣ” ಎಂದು ಹೆಣ್ಣುಮಗು ಕಲಾವಿದೆ ರೂಪಾ ಹೇಳಿದರು.
ಎಲ್ಲಾ ಮಕ್ಕಳು ಖುಷಿಯಿಂದ ಸೋಲೂರು ಹೋಬಳಿ ನಮ್ಮ ಶಾಲೆಗೆ ಗೌರವ ತರುವ ಕೆಲಸಕ್ಕೆ ಮುಂದಾಗಿದ್ದೇವೆ ಎಂಬುದು ಸಂತಸದ ವಿಚಾರ ಎಂದು ಅಭಿಪ್ರಾಯ ಒಟ್ಟಿಗೆ ವ್ಯಕ್ತ ಪಡಿಸಿದರು.
————————————————————————————————-

Please follow and like us:
0

Leave a Comment