RA NEWS:-ಕುಣಿಗಲ್ ಗಿರಿ ಕಾಟ್. . !

ಕುಣಿಗಲ್ ಗಿರಿ ಕಾಟ್. . !
ಅಂಡರ್ ವರ್ಲ್ಡ್ ಅಲರ್ಟ್ ಆಗಿತ್ತಿದೆಯಾ. . !
ಅಯ್ಯೋ ಈ ಕುಣಿಗಲ್ ಗಿರಿಗೂ ಬೆಚ್ಚನೆ ಮಕಾಡೆ ಮಲಗಿರುವ ಬೆಂಗಳೂರು ಭೂಗತ ಜಗತ್ತಿಗೂ ಏನು ಸಂಬಂಧ.ಅನ್ನೋ ಮಾತು ಇದೆ.ಆದರೇ ಕುಣಿಗಲ್ ಗಿರಿ ಹೆಸರು ಈಗ ಮತ್ತೆ ಕೇಳಿ ಬಂದಿದೆ.ಕೆಲವೇ ವರ್ಷಗಳ ಹಿಂದೆ ‘ ಕುಣಿಗಲ್ ಗಿರಿ’ ಎಂಬ ಹೆಸರು ಟಾಕ್ ಆಫ್ ದಿ ಕ್ರೈಮ್ ವರ್ಲ್ಟ್ ಎಂಬಂತಾಗಿತ್ತು.ಹೊಡೆದಾಟ ಬಡಿದಾಟ ಹಾಗಿರಲಿ ಬರೀ ರಾಬರಿ ಮಾಡಿಯೇ ಕ್ರೈಮ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ಕುಣಿಗಲ್ ಗಿರಿ,
ಭೂಗತ ಜಗತ್ತಿನ ರಕ್ತ ಸಿಕ್ತ ಇತಿಹಾಸದ ಪುಟಗಳನ್ನ ತೆರೆದು ನೋಡಿದರೇ ಅಲ್ಲಿ ಘಟಾನು ಗಟಿ ರೌಡಿಗಳ ನೆಟ್ಟು ಬೋಲ್ಟುಗಳನ್ನ ನಮ್ಮ ಪೊಲೀಸ್ ಇಲಾಖೆ ಕಳಚಿ ಬಿಸಾಡಿದೆ.ಇನ್ನು ಈ ಕುಣಿಗಲ್ ಗಿರಿಯನ್ನ ಕುಳಿತಲ್ಲೇ ಗಿರಿಗಿಟ್ಟಲೆ ಆಡಿಸೋದು ಸಿಸಿಬಿಗೆ ಯಾವ ಲೆಕ್ಕ.ಇಷ್ಟಕ್ಕೂ ಆಫ್ಟರ್ ಎ ಲಾಂಗ್ ಟೈಮ್ ಕುಣಿಗಲ್ ಗಿರಿ ಎಂಬ ಹೆಸರು ಯಾಕೆ ಬ್ರೇಕಿಂಗ್ ನ್ಯೂಸ್ ನಲ್ಲಿ ಯಾಕೆ ಬಂತ್ತು ಎಂದು ತಿಳಿಯೋಣ.
MID NIGHT ROBBERY. . !
ಆದು ರಾಜಗೋಪಾಲ್ ನಗರದ ರಸ್ತೆ. ಮಧ್ಯ ರಾತ್ರಿಯಲ್ಲಿ ನಿರ್ಜನ ಪ್ರದೇಶದಲ್ಲಿ.ಒಂದು ರಾಬರೀ ತಂಡ ಉಧ್ಯಮಿಯೊಬ್ಬರನ್ನ ದೋಚಲು ಅಣಿಯಾಗಿ ಕಾದಿದ್ದರು.ಈ ತಂಡ ದೊಡ್ಡ ರಾಬರಿಗೆ ರೆಡಿಯಾಗಿದ್ದ ಸಮಯದಲ್ಲೇ ಮಿಂಚಿನವೇಗದಲ್ಲಿ ಬಂದದ್ದು ಪೊಲೀಸ್ ಜೀಪ್. . !

kunigal giri
kunigal giri

CCB IN ACTION. . !
ರಾಬರೀ ತಂಡ ಗಾಬರಿಯಾಗುವಂತೆ ರೌಂಡ್ ಅಪ್ ಮಾಡಿದ್ದು ಸಿಸಿಬಿ ಪೊಲೀಸರು.ಆ ಕೂಡಲೇ ಎಲ್ಲಾ ಕ್ರಿಮಿನಲ್ ಗಳನ್ನ ಸ್ಪಾಟ್ ನಲ್ಲಿ ಬಂಧಿಸಿದರು.ಸಿಸಿಬಿ ಪೊಲೀಸರಿಗೆ ಇಂತಹಾ ರೇಡ್ ಗಳು ಕಾಮನ್ ಆದರೇ ಸಿಕ್ಕಿ ಬಿದ್ದ ರಾಬರೀ ಗ್ಯಾಂಗ್ ನಲ್ಲಿ ಇದ್ದ ಅವನನ್ನ ನೋಡಿ ಪೊಲೀಸರು ಅಲರ್ಟ್ ಆದರು ಯಾಕೆಂದರೇ. . !
ಅವನು ಕುಣಿಗಲ್ ಗಿರಿ ಅಲಿಯಾಸ್ ರಾಬರೀ ಗಿರಿ. . !
ಕ್ರೈಮ್ ಲೋಕದಲ್ಲಿ ರಾಬರಿಗೆ ಕುಖ್ಯಾತಿಯಾಗಿದ್ದ ಗಿರಿ ಒಂದು ಕಾಲದಲ್ಲಿ ಹಲವರನ್ನ ದೋಚಿದ್ದ.ತಿಂಗಳಾನುಗಟ್ಟಲೇ ಪೊಲೀಸರಿಗೆ ಸಿಗದೇ ಎಸ್ಕೇಪ್ ಆಗುತ್ತಿದ್ದ.ಹಿಂದೆ ಇದೇ ಗಿರಿಯನ್ನ ಪೊಲೀಸರು ದೊಡ್ಡ ಚೇಸ್ ನಲ್ಲಿ ಹಿಡಿದು ಹೆಡೆಮುರಿಗೆ ಕಟ್ಟಿ ಕಂಬಿಗಳ ಹಿಂದೆ ದಬ್ಬಿದ್ದರು.
ಹಿಡಿದವರು. .!
ಕುಣಿಗಲ್ ಗಿರಿ ತಂಡ ರೂಪಿಸಿದ್ದ ದರೋಡೆ ಕೃತ್ತವನ್ನ ತಡೆದು ಸೆರೆಹಿಡಿದ ಪೊಲೀಸ್ ಟೀಮ್ ಎಂದರೇ. .ಅದು ಕೇಂದ್ರ ಅಪರಾಧ ವಿಭಾಗ, ಸಂಘಟಿತ ಅಪರಾಧ ದಳದ ಸಹಾಯಕ ಪೊಲೀಸ್ ಕಮೀಷÀನರ್ ಶ್ರೀ ವಿ.ಮರಿಯಪ್ಪರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀ.ಆರ್.ಪ್ರಕಾಶ್ ಮತ್ತು ಎ.ಎಸ್.ಐ ಶ್ರೀ ದೇವರಾಜು ಹಾಗೂ ಸಿಬ್ಬಂದಿಗಳಾದ ಶ್ರೀ.ಸತೀಶ್, ಶ್ರೀ.ನರಸಿಂಹಮೂರ್ತಿ,
ಶ್ರೀ. ಅರುಣ್‍ಕುಮಾರ್, ಶ್ರೀ.ಸತೀಶ್‍ಕುಮಾರ್, ಶ್ರೀ.ಆನಂದ.
ಸಿಕ್ಕಿ ಬಿದ್ದವರು. .!
ಗಿರೀಶ್ @ ಕುಣಿಗಲ್ ಗಿರಿ, ಶ್ರೀನಿವಾಸ @ ವಾಸು,ವಿನೋದ ಮತ್ತು ಆನಂದಕುಮಾರ್.

Please follow and like us:
0

Leave a Comment