RA NEWS:-ಯದುವೀರರಿಂದ ಮೈಸೂರಿಗೆ ಪರಿಚಯವಾದ ಶ್ರೀ ಚಾಮುಂಡೇಶ್ವರಿ

ಯದುವೀರರಿಂದ ಮೈಸೂರಿಗೆ ಪರಿಚಯವಾದ ಶ್ರೀ ಚಾಮುಂಡೇಶ್ವರಿ
ಭಾರತ ಭೂಖಂಡ ಒಂದು ಜನಾಂಗಕ್ಕೆ, ಒಂದು ಭಾಷೆಗೆ, ಒಂದೇ ನಾಗರಿಕತೆಗೆ, ಏಕ ಧಾರ್ಮಿಕ ಸೂತ್ರಕ್ಕೆ ಸೀಮಿತವಾದ ನೆಲೆಯಲ್ಲ. ಇದೊಂದು ಪುಟ್ಟ ವಿಶ್ವ. ಇಲ್ಲಿ ಜಗತ್ತಿನ ಎಲ್ಲಾ ಜನಾಂಗದವರಿದ್ದಾರೆ, ಜಗತ್ತಿನ ಹಲವು ಭಾಷೆ, ನಾಗರಿಕತೆ, ಧಾರ್ಮಿಕತೆ ಸಮ್ಮಿಳಿತವಾಗಿ ರೂಪುಗೊಂಡಿದೆ. ಇಲ್ಲಿಗೆ ನೆಲೆ ಅರಸಿ ಬಂದ ಎಲ್ಲರಿಗೂ ಆಶ್ರಯ ನೀಡಿದೆ. ಇಲ್ಲಿಗೆ ಬಂದವರು ಇಲ್ಲಿನ ಭಾಷೆ, ಧರ್ಮ ಸಂಸ್ಕøತಿಯೊಂದಿಗೆ ತಮ್ಮ ಭಾಷೆ-ಧರ್ಮ-ಸಂಸ್ಕøತಿಯನ್ನು ಬೆರೆಸಿ ಹಿತವಾಗಿ ಬದುಕುತ್ತಿದ್ದಾರೆ. ಜಗತ್ತಿನ ಯಾವ ಭೂಭಾಗದಲ್ಲೂ ಕಾಣದಷ್ಟು ಜನಸಂಖ್ಯೆ ಈ ಪುಟ್ಟ ಭೂಭಾಗದಲ್ಲಿದ್ದಾರೆಂದರೆ ಇಲ್ಲಿ ಅನ್ಯ ಜನರ ವಲಸೆ ಸಾವಿರಾರು ವರ್ಷಗಳಿಂದ ಆಗಿದೆ ಎಂದೇ ಅರ್ಥ. ಇದಕ್ಕೆ ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಇರುವ ಜನರ ಭಾಷೆ-ಸಂಪ್ರದಾಯವನ್ನನುಸರಿಸಿ ನಾವು ಸಂಶೋಧನಾ ದೃಷ್ಟಿಯಿಂದ ತಿಳಿದುಕೊಳ್ಳಬೇಕಾಗುತ್ತದೆಯಷ್ಟೆ.
ನಮ್ಮ ಜಾನಪದ ಕತೆ, ಹಾಡುಗಳಲ್ಲೂ ನಮ್ಮ ಇತಿಹಾಸದ ಕುರುಹುಗಳನ್ನು ಹುಡುಕಬಹುದಾಗಿದೆ. ಇದಕ್ಕೆ ಪರಿಶುದ್ಧ ಭಾರತೀಯ ಆತ್ಮ, ಇಲ್ಲಿನ ವೈವಿಧ್ಯ-ಸಂಸ್ಕøತಿ ಅರಿವ ನಿಷ್ಕಲ್ಮಶ ಮನಸ್ಸು, ಜೊತೆಗೆ, ಫಲಾಪೇಕ್ಷೆ ಇಲ್ಲದೆ ದುಡಿವ ನಿಸ್ಪøಹ ಶ್ರಮ ಅಗತ್ಯವಾಗಿರಬೇಕು. ಹಾಗಲ್ಲದೆ ಹುಡುಕುವ ಯತ್ನ ಪಾಶ್ಚಾತ್ಯ ಇತಿಹಾಸ ಪಂಡಿತರಿಗೆ ಆದಂಥ ಭ್ರಮನಿರಸನವೆ ಆಗುತ್ತದೆ. ಹೇಗೆ ನಾವು ಸಿಂಧೂ ನಾಗರಿಕತೆ, ಮೆಸಪಟೊಮಿಯಾ, ಈಜಿಪ್ಟ್ ನಾಗರಿಕತೆಗಳಲ್ಲಿ ಕಂಡು ಬರುವ ಅರ್ಥವಾಗದ ಲಿಪಿಗಳನ್ನು ಅಲ್ಲಿ ಸಿಕ್ಕ ವಸ್ತುಗಳೊಂದಿಗೆ ಹೊಂದಿಸಿ ಅರ್ಥೈಸುವ ರೀತಿಯಲ್ಲೆ ಭಾರತೀಯ ಇತಿಹಾಸವನ್ನು ಭೌಗೋಳಿಕ, ಸಾಂಸ್ಕøತಿಕ ಮತ್ತು ಐತಿಹ್ಯ ಕುರುಹುಗಳಾದ ಶಿಲ್ಪಕಲೆ ಜಾನಪದ ಕಲೆಗಳನ್ನು ಅಧ್ಯಯನ ಮಾಡಿ ತಿಳಿಯಬೇಕು.
ನಮ್ಮ ಭಾರತೀಯ ಇತಿಹಾಸ ತಿಳಿಯಬೇಕೆಂದರೆ, ರಾಮಾಯಣ, ಮಹಾಭಾರತ, ಭಗವದ್ಗೀತೆ, ವಿಷ್ಣುಪುರಾಣ, ವೇದ-ಉಪನಿಷತ್ತು ಮತ್ತಿತರ ವೈದಿಕ ಸಂಸ್ಕøತಿಗಳ ಅಧ್ಯಯನವನ್ನು ಒರೆಗಚ್ಚಿ ನೋಡಬೇಕೆಂಬ ಪ್ರಚಲಿತ ಮಾತಿದೆ. ಈಗ ಇದು ಸುಳ್ಳಾಗುತ್ತಿದೆ. ನಮ್ಮ ವೈದಿಕ ಸಂಸ್ಕøತಿ ವಿವರದಿಂದ ಭಾರತದ ಸ್ಥಳೀಯ ಇತಿಹಾಸ ತಿಳಿಯಲಾಗದು. ಏಕೆಂದರೆ ವೈದಿಕ ಸಂಸ್ಕøತಿ ನೆಲೆವೀಡು ಭಾರತವಲ್ಲ. ಮಧ್ಯ ಏಷ್ಯಾದಿಂದ ಬಂದ ವೈದಿಕರು ತಂದ ಪಳೆಯುಳಿಕೆಗಳನ್ನಷ್ಟೆ ಭಾರತದಲ್ಲಿ ಕಾಣಬಹುದು. ಭಾರತೀಯರ ಐತಿಹಾಸಿಕ ಅಧ್ಯಯನಕ್ಕೆ ಸ್ಥಳೀಯ ಜನರ ಜಾನಪದ ಹಾಡು-ಪಾಡುಗಳನ್ನು ಒರೆಗಚ್ಚಿ ಅಧ್ಯಯನ ನಡೆಸಬೇಕಾಗುತ್ತದೆ. ಅಲ್ಲದೆ ವೈದಿಕ ಸಾಂಸ್ಕøತಿಕ ಐತಿಹ್ಯಗಳು ಭಾರತಕ್ಕೆ ಬಂದಿದ್ದು, ಆರ್ಯರಿಂದ. ಯಹೂದಿಗಳ ಏಕದೇವತಾರಾಧನೆ, ಮೂರ್ತಿ ಭಂಜಕತನದ ದಾಳಿಯಿಂದ ಆರ್ಯರು ಮಧ್ಯ ಏಷ್ಯಾದಿಂದ ದಕ್ಷಿಣ ಏಷ್ಯಾದ ಕಡೆ ವಲಸೆ ಬಂದರು. ಇಲ್ಲಿದ್ದ ಶೈವ-ಜೈನ, ಬೌದ್ಧ ಧರ್ಮದೊಂದಿಗೆ ಸಂಘರ್ಷಿಸಿ ತಮ್ಮ ವೈದಿಕ ಸಂಸ್ಕøತಿ ಸ್ಥಾಪಿಸಿದರು.

History of Goddess chamundeshwari
History of Goddess chamundeshwari

ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಬ್ಯಾಬಿಲೋನಿಯನ್ ಸಂಸ್ಕøತಿಯಲ್ಲಿ (ಇರಾಕ್) ಸಿಂಹವಾಹಿನಿ ದುರ್ಗೆ ಮಹಿಷಾಸುರನ ಸಂಹರಿಸುತ್ತಿರುವ ಶಿಲ್ಪಗಳು ಸಿಕ್ಕಿರುವುದು. 3700 ವರ್ಷಗಳ ಹಿಂದೆ ಇದ್ದನೆನ್ನಲಾದ ಬ್ಯಾಬಿಲೋನಿಯನ್ ಪ್ರಸಿದ್ಧ ರಾಜ ಹಮುರಾಬಿ ರೂಪಿಸಿದ ಶಾಸನ ಸನ್ನದ್ದುಗಳು ಮುಂದೆ ಹಿಂದೂ,ಜೈನ,ಯಹೂದಿ,ಬೌದ್ದ,ಕ್ರೈಸ್ತ,ಇಸ್ಲಾಮ್ ಧರ್ಮಗಳ ಕಟ್ಟಳೆಗೆ ನೆರವಾದವು. ಇದಾದ ನಂತರ ಪಾಶ್ಚಾತ್ಯರು ತಮ್ಮ ಹಲವು ಕಾನೂನು ಕಟ್ಟಳೆಗಳನ್ನು ಹಮುರಾಬಿ ರೂಪಿಸಿದ ಶಾಸನ ಸನ್ನದ್ದು ಆಧರಿಸಿಯೇ ಮಾಡಿದರು. ಹಮುರಾಬಿ ರೂಪಿಸಿದ ಈ ಶಾಸನ ಸನ್ನದ್ದು ಅಲೆಮಾರಿ ಫಕೀರನಿಂದ ಪಡೆದ ಯಹೂದಿ ಧರ್ಮ ಸ್ಥಾಪಕ ಮೋಸೆಸ್ 10 ದೈವಾಜ್ಞೆ (10 ಅommoಟಿಜmeಟಿಣs) ರೂಪಿಸಿದ್ದ. ಹೀಗಾಗಿ ದಾನವ(ದ್ರಾವಿಡ) ದೇವತೆಗಳು (ಆರ್ಯರು) ಸಂಘರ್ಷದ ಭೂಮಿಕೆ ಭಾರತವಲ್ಲ, ಮಧ್ಯ ಏಷ್ಯಾ ಎಂಬುದು ಸಾಬೀತಾಗುತ್ತದೆ. ಹಾಗೆಯೆ, ಯಹೂದಿ ಧರ್ಮದಲ್ಲಿ ಕಂಡುಬರುವ ಜ್ಯೂಗಳು ಬಿಳಿಯರು.ಯಹೂದಿಯೇತರರು ಕರಿಯರು. ಇಸ್ಲಾಂನಲ್ಲಿ ಕಂಡು ಬರುವ ಸುನ್ನಿ(ಕಪ್ಪು ವರ್ಣೀಯರು) ಷಿಯಾ(ಬಿಳಿ ವರ್ಣೀಯರು)ಗಳನ್ನು ಹಿಂದೂ ಧರ್ಮದಲ್ಲಿ ಕಂಡು ಬರುವ ಆರ್ಯ-ದ್ರಾವಿಡ ವರ್ಗಕ್ಕೆ ಹೋಲಿಸಬಹುದು.
ಜಗತ್ತಿನಲ್ಲಿ ಈಗಿರುವ ಧರ್ಮಗಳೆಲ್ಲಾ ಹುಟ್ಟಿದ್ದು ಮಧ್ಯ ಏಷ್ಯಾದಲ್ಲೆ. ವಿಶ್ವದ ಇನ್ನಾವ ಭೂ ಭಾಗದಲ್ಲು ದೇವರು ಅವತಾರ ಎತ್ತಲಿಲ್ಲ,ಪ್ರವಾದಿ ಪ್ರಭಾವ ಬೀರಿಲ್ಲ. ಅಂದರೆ,ಮಧ್ಯ ಏಷ್ಯಾದಲ್ಲಿ ಹುಟ್ಟಿದ ಕರಿಯ-ಬಿಳಿಯ ಎಂಬ ವರ್ಣ ತಾರತಮ್ಯದಿಂದ ಜಾತಿ ಜನಾಂಗಗಳು-ಧರ್ಮಗಳು ಹುಟ್ಟಿವೆ ಎನ್ನುವುದು ಸಾಬೀತಾಗುತ್ತದೆ. ಒಂದು ಸಂಶೋಧನೆ ಪ್ರಕಾರ, ಏಷ್ಯಾ ಖಂಡ ಪೂರಾ ಚೀನೀ ಮಾದರಿಯ ಜನ ಇದ್ದರು. ಸುಮಾರು 10 ಸಾವಿರ ವರ್ಷಗಳ ಹಿಂದೆ ಆರಂಭಗೊಂಡ ಮಾನವರ ಮಹಾ ವಲಸೆ ಜಗತ್ತಿನ ಮೂರು ಮೂಲ ಮಾನವ ತಳಿಗಳನ್ನು ಏಷ್ಯಾದಲ್ಲಿ ಸಮ್ಮಿಶ್ರಣಗೊಳಿಸಿತು. ಆಫ್ರಿಕಾ ಖಂಡದಿಂದ ಬಂದ ದ್ರಾವಿಡ ಕಪ್ಪು ಜನ ಮೊದಲಿಗೆ ಏಷ್ಯಾದಲ್ಲಿದ್ದ ಚೀನೀ ಮಾದರಿಯ ಜನರನ್ನು ಓಡಿಸಿ ಪಶ್ಚಿಮ ಏಷ್ಯಾದಲ್ಲಿ ನೆಲೆ ಊರ ತೊಡಗಿದರು. ಮುಂದೆ ಇದೇ ಜನ ದಕ್ಷಿಣ ಏಷ್ಯಾವರೆಗೂ ವ್ಯಾಪಿಸಿದರು. ಇವರಿಬ್ಬರ ನಡುವಿನ ಸಂಘರ್ಷ ಮತ್ತು ಮಿಶ್ರ ಸಂಕರದಿಂದ ನೇಪಾಳೀ-ಬರ್ಮೀಯರು,ಭಾರತದ ಈಶಾನ್ಯ ರಾಜ್ಯದಂಥ ಜನಾಂಗ,ಇಂಡೋನೇಷಿಯಾ,ಮಲೇಷಿಯನ್ನರು ಮಿಶ್ರ ಸಂಕರಗಳಿಂದಾಗಿದ್ದಾರೆ. ಅಷ್ಟೆ ಅಲ್ಲಾ,ಬಂಗಾಳೀಗಳಲ್ಲಿ ಬಿಳಿ ವರ್ಣದವರೆಲ್ಲಾ ಇಂಥ ಮಿಶ್ರ ಸಂಕರಗಳಿಂದಾಗಿದ್ದಾರೆ.
ಆಫ್ರಿಕಾದ ಕರಿಯ ಜನ ಏಷ್ಯಾ ಕಡೆ ಬಂದು ಕೆಲ ಸಾವಿರ ವರ್ಷಗಳ ನಂತರ ಯೂರೋಪ್‍ನಿಂದ ಬಂದ ಬಿಳಿಯ ಜನ ಮೊದಲಿಗೆ ಮಧ್ಯ ಏಷ್ಯಾದಲ್ಲಿದ್ದ ಕರಿಯ ಜನರ ಮೇಲೆ ಸಂಘರ್ಷಕ್ಕಿಳಿದರು. ನಂತರ ಪಶ್ಚಿಮ ಏಷ್ಯಾದಲ್ಲಿ ಕರಿ-ಬಿಳಿಯರ ಸಂಘರ್ಷ ಆಗುವ ಹೊತ್ತಿಗೆ ಕರಿ-ಬಿಳಿಯರ ಮಿಶ್ರ ಸಂಕರವಾಗಿ ಗೋಧಿ ಮೈ ಬಣ್ಣದ ಪ್ರತ್ಯೇಕ ಜನಾಂಗ ಸೃಷ್ಟಿಯಾಗಿತ್ತು. ಯುರೋಪ್‍ನಿಂದ ಬಂದ ಬಿಳಿಯ ಜನ ಇವರನ್ನೆಲ್ಲ ಕೊಂದೊ, ಸಂಘರ್ಷದಿಂದಲೋ ಆರ್ಯ ದ್ರಾವಿಡ ಸಮ್ಮಿಶ್ರ ಜನ ರೂಪುಗೊಂಡಿದ್ದರು. ಪಶ್ಚಿಮ ಏಷ್ಯಾದಲ್ಲಿರುವ ಜನರೆಲ್ಲರ ರಕ್ತದಲ್ಲಿ ಹರಿಯುತ್ತಿರುವ ವಂಶವಾಹಿನಿ ಜೀನ್‍ನಲ್ಲಿ ಆರ್ಯರ ಬಿಳಿ ರಕ್ತದ ತಳಿ ಜೊತೆ ದ್ರಾವಿಡರ ವಂಶವಾಹಿನಿ ತಳಿಯು ಇದೆ. ಪಶ್ಚಿಮ,ಉತ್ತರ,ಮಧ್ಯ ಮತ್ತು ದಕ್ಷಿಣ ಏಷ್ಯಾದ ಇತಿಹಾಸದ ಗರ್ಭದಲ್ಲಿ ಸಾವಿರಾರು ವರ್ಷಗಳ ಕಾಲ ನಡೆದ ವರ್ಗ-ವರ್ಣ ಸಂಘರ್ಷದ ಹಲವು ಭೂಮಿಕೆಗಳಿವೆ. ಅವು ಹಿಂದೂ,ಜೈನ,ಪಾರ್ಸಿ,ಯಹೂದಿ,ಬೌದ್ದ,ಕ್ರೈಸ್ತ,ಇಸ್ಲಾಂ ಧರ್ಮಗಳ ಗ್ರಂಥಗಳಲ್ಲಿ ಹಲವಾರು ಕಥಾನಕ ರೂಪದಲ್ಲಿವೆ. ಇದನ್ನೆಲ್ಲಾ ಸರಿಯಾಗಿ ಒರೆಗಚ್ಚಿ ನೋಡಿದರೆ,ಯಾವ ಧರ್ಮವೂ ಭಿನ್ನವಲ್ಲ,ಯಾವ ಧರ್ಮವೂ ಪರಿಪೂರ್ಣವಲ್ಲ, ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ ರೂಪ ತಾಳಿವೆ ಎಂಬುದು ನಿರೂಪಿತವಾಗುತ್ತದೆ.
History of Goddess chamundeshwari
History of Goddess chamundeshwari

ಯೂರೋಪ್‍ನಲ್ಲಿದ್ದ ಹಸುಗಳು,ಬಿಳಿಯ ಜನ ಏಷ್ಯಾಕ್ಕೆ ವಲಸೆ ಬಂದಾಗ ಅವರೊಟ್ಟಿಗೆ ಇಲ್ಲಿಗೆ ಬಂದಂಥವು. ಏಷ್ಯಾದಲ್ಲಿ ಎಮ್ಮೆಗಳೆ ಮೇಳೈಸುತ್ತಿದ್ದವು. ಬಿಳಿಯರ ಬಳಿ ಇದ್ದ ಹಸುಗಳನ್ನು ಕರಿಯ ಜನ ಕದ್ದು ತಿನ್ನುತ್ತಿದ್ದರಿಂದ ಗೋವುಗಳಲ್ಲಿ ಮುಕ್ಕೋಟಿ ದೇವತೆಗಳಿರುತ್ತವೆ,ಅದು ದೈವ ಸಮಾನ ಅನ್ನೋ ಎಚ್ಚರಿಕೆ ಸಂದೇಶಗಳನ್ನು ನೀಡಿ ಗೋವುಗಳನ್ನು ರಕ್ಷಿಸಿಕೊಳ್ಳುತ್ತಿದ್ದರು. ಹಾಗೆಯೆ,ಬಿಳಿಯರ ಹೆಂಗಸರನ್ನು ಕರಿಯ ಜನ ಹೊತ್ತೊಯ್ಯುತ್ತಿದ್ದರಿಂದ ಮಹಿಷಾಸುರನನ್ನು ಕೊಂದ ದುರ್ಗೆ ಅವತಾರದ ಕತೆಗಳು ಹೆಚ್ಚಾದವು. ಕರಿಯ ಜನರನ್ನು ಮತ್ತಷ್ಟು ಹೆದರಿಸಲು ಸಿಂಹ-ಹುಲಿಯ ಮೇಲೆ ಕೂತು ಬರುವ ರೌದ್ರ ಸ್ವರೂಪಿಣಿ ಕತೆಗಳು ಹುಟ್ಟಿಕೊಂಡವು. ಹೀಗಾಗಿಯೇ, ರಾಮಾಯಣದ ರಾವಣನಿಂದ ಮೊದಲ್ಗೊಂಡು ಭಸ್ಮಾಸುರ, ಮಹಿಷಾಸುರರವರೆಗೂ ದುರ್ಗೆಯನ್ನು ಮೋಹಿಸಿ,ಅದರ ಪಾಪದ ಫಲಕ್ಕೆ ಅವಳಿಂದಲೇ ಅವರ ಹತ್ಯೆಯಾಗುವ ಕಥಾನಕಗಳಿವೆ. ಇಲ್ಲಿದ್ದ ಕರಿ ಜನರ ಮೈ ಬಣ್ಣ ಎಮ್ಮೆ ಬಣ್ಣವಾಗಿದ್ದರಿಂದ ಅವರನ್ನೆಲ್ಲಾ ಮಹಿಷಾ(ಕೋಣ)ಸುರರು ಎಂದು ಯೂರೋಪಿನಿಂದ ಬಂದ ಬಿಳಿಯ ಜನ ಕರೆಯುತ್ತಿದ್ದರು. ದ್ರಾವಿಡ ಕರಿ ಜನರನ್ನು ಅಣಕಿಸಲು ಅವರ ಪಶುವಾದ ಎಮ್ಮೆ-ಕೋಣಗಳಿಗೆ ಹೋಲಿಸುತ್ತಿದ್ದರು. ಚಾಮ ಅಂದರೆ ಎಮ್ಮೆ-ಕೋಣ ಎಂದರ್ಥ. ಚಾಮುಂಡ ಅಂದರೆ ಕೋಣದ ಮುಂಡವನ್ನೂ,ಮನುಷ್ಯನ ರುಂಡವನ್ನು ಹೊಂದಿರುವವ ಅಂತ ಅರ್ಥ. ಚಾಮುಂಡನನ್ನು ಕೊಂದ ದುರ್ಗೆ ಚಾಮುಂಡೇಶ್ವರಿಯಾದಳು. ಈಗಲೂ ಹಲವು ಮಹಿಷಾಸುರ ಮರ್ಧಿನಿ ಫೋಟೋಗಳಲ್ಲಿ ದೇಹ ಕೋಣದಂತೆ,ರುಂಡ ಮಾತ್ರ ಮಾನವನ ಮುಖದಂತೆ ಕಾಣುವ ಮಹಿಷಾಸುರನನ್ನು ಚಾಮುಂಡೇಶ್ವರಿ ಕೊಲ್ಲುವ ಚಿತ್ರವಿದೆ. ಚಾಮರಾಜ ಅಂದರೆ ಎಮ್ಮೆ-ಕೋಣಗಳ ರಾಜ ಅಂತಾನೆ ಅರ್ಥ.
ಮತ್ತೊಂದಿಷ್ಟು ಕಾಲ ಸರಿದಂತೆ ಬಿಳಿ ಕನ್ಯೆಯರನ್ನು ಬಯಸುವ ಕರಿಯರನ್ನು ಕೊಲ್ಲಲು ಮೋಹಿನಿ ರೂಪ ಧರಿಸುವ, ಬಲಿಷ್ಟನಾದ ಕರಿಯ ಮುಖಂಡನನ್ನು ಯುದ್ದದಲ್ಲಿ ಗೆಲ್ಲಲಾಗದ ಬಿಳಿ ಜನ ವಿಷ ಕನ್ಯೆಯರನ್ನು ಕಳುಹಿಸಿ ಕೊಲ್ಲುವ,ಹತ್ತಾರೂ ಕುಟಿಲೋಪಾಯಗಳನ್ನು ಬಿಳಿ ಜನ ಮಾಡುತ್ತಿದ್ದರು. ಬಲಿಷ್ಟನಾದ ಕರಿ ಮುಖಂಡ ಅಥವ ಅಸುರ ರಾಜ ಬಿಳಿಯರ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದಾಗ,ಅಲ್ಲಿದ್ದ ಬಿಳಿಯ ಹೆಂಗಸರನ್ನೆಲ್ಲಾ ಹೊತ್ತೊಯ್ಯುತ್ತಿದ್ದ. ಇಂಥ ಕತೆಗಳು ನಮ್ಮ ಹಿಂದೂ ಪುರಾಣಗಳಲ್ಲಿ ಬಹಳಷ್ಟಿವೆ. ಉದಾಹರಣೆಗೆ ಜರಾಸಂಧನನ್ನು ಭೀಮನ ಮೂಲಕ ಕೊಂದ ಕೃಷ್ಣ. ಜರಾಸಂಧ ಬಂಧಿಸಿಟ್ಟಿದ್ದ ಬಿಳಿ ಕನ್ಯೆಯರನ್ನೆಲ್ಲಾ ಬಿಡಿಸುತ್ತಾನೆ. ಆದರೆ ಅಪವಿತ್ರರಾದ ಅವರನ್ನೆಲ್ಲಾ ಮತ್ತೆ ಬಿಳಿ ಜನ ತಮ್ಮ ಬಳಿ ಸೇರಿಸಿಕೊಳ್ಳದಿದ್ದರಿಂದ ಅವರನ್ನೆಲ್ಲಾ ತಾನೇ ಮದುವೆಯಾಗಿ ಸಮಾಜದಲ್ಲಿ ಆ ಹೆಣ್ಣುಗಳಿಗೆ ಗೌರವ ಸಿಗುವಂತೆ ಮಾಡುತ್ತಾನೆ. ಹೀಗೆ ಅಸುರ(ಕರಿಯರು)ರ ಬಂಧನದಲ್ಲಿದ್ದ ಸಾವಿರಾರು ಬಿಳಿ ಕನ್ಯೆಯರನ್ನ ಬಿಡಿಸಿ ತಾನೇ ಅವರಿಗೆ ಬಾಳು ಕೊಡುತ್ತಿದ್ದರಿಂದ ಕೃಷ್ಣನಿಗೆ ಹದಿನಾರು ಸಾವಿರ ಪತ್ನಿಯರಿದ್ದರು.
History of Goddess chamundeshwari
History of Goddess chamundeshwari

ಕೃಷ್ಣ ಸುರ ಮತ್ತು ಅಸುರರ ಸಂಗಮದ ಮಿಶ್ರ ತಳಿ. ಕೃಷ್ಣನ ತಂದೆ ವಸುದೇವ ಬಿಳಿ ಬಣ್ಣದ ಆರ್ಯ ವಂಶಜ. ತಾಯಿ ದೇವಕಿ ಕರಿ ಬಣ್ಣದ ದ್ರಾವಿಡ ವಂಶಸ್ಥೆ. ಇವರಿಬ್ಬರ ಪ್ರೇಮ ಸಂಗಮ ಸಹಿಸದ ಅಸುರ ಕಂಸ, ದಂಪತಿಯನ್ನು ಬಂಧನದಲ್ಲಿಟ್ಟಿದ್ದಲ್ಲದೆ,ಹುಟ್ಟುವ ಮಕ್ಕಳನ್ನು ಕೊಲ್ಲುತ್ತಿದ್ದ. 7 ಮಕ್ಕಳನ್ನು ಕೊಂದಿದ್ದ ಕಂಸ 8ನೇ ಮಗನನ್ನು ಕೊಲ್ಲುವಾಗ ಸ್ವಲ್ಪ ಯಾಮಾರಿದ. ಆಗ ವಸುದೇವ ಆ ಮಗುವನ್ನು ರಕ್ಷಿಸಿ ಯಾದವ ಜನಾಂಗದ ಯಶೋಧರೆ ಮಡಿಲಲ್ಲಿಟ್ಟು ಬರುತ್ತಾನೆ. ದ್ರಾವಿಡ-ಆರ್ಯರ ಮಿಶ್ರ ತಳಿಯವರಾದ ಯಾದವರನ್ನು ಭಾಗಶಃ ಆರ್ಯರೆಂದು ಆರ್ಯರು ತಮ್ಮ ಬಳಿ ಇಟ್ಟುಕೊಂಡು ದನ ಕಾಯುವ ಕೆಲಸ ಕೊಟ್ಟಿರುತ್ತಾರೆ. ಇವರ ಮೈ ಬಣ್ಣ ನಸುಗಪ್ಪು,ಇಲ್ಲವೆ ನಸುಗೆಂಪು ಆಗಿರುತ್ತದೆ. ಪೂರಾ ಕಪ್ಪು ಅಲ್ಲದ,ಪೂರಾ ಬಿಳಿ ಬಣ್ಣದವರಲ್ಲದ ಯಾದವರ ಬಳಿಯೇ ನಸುಗಪ್ಪು ಬಣ್ಣದ ಶಿಶು ಕೃಷ್ಣನನ್ನು ತಂದೆ ವಸುದೇವ ಬಿಟ್ಟು ಬರುವುದು ಪೂರ್ವ ನಿಯೋಜಿತ. ಸುರ-ಅಸುರರ ಸಂಗಮದಲ್ಲಿ ಹುಟ್ಟುವ ಮಗುವನ್ನು ಯಾದವರ ಬಳಿ ಬಿಟ್ಟು ಬಂದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬುದನ್ನ ವಸುದೇವ ಮೊದಲೇ ಗೊತ್ತು ಮಾಡಿಕೊಂಡಿರುತ್ತಾನೆ. ಮಹಾಭಾರತ ಸಹ ವರ್ಣ ಭೇದದ ಸಂಘರ್ಷದ ಪ್ರಧಾನ ಕತೆ ಇದೆ. ಇದು ಕುರುಕ್ಷೇತ್ರದ ಯುದ್ದದಲ್ಲಿ ಪರ್ಯಾವಸಾನವಾಗುತ್ತೆ.
ಮಹಾಭಾರತ ಕೇವಲ ದಾಯಾದಿ ಮತ್ಸರದ ಕತೆಯಲ್ಲ. ಇಲ್ಲಿ ಕುರುವಂಶದ ಮೂಲ ತಳಿ ಮತ್ತು ಮಿಶ್ರ ತಳಿಗಳ ಸಂಘರ್ಷ ಭೂಮಿಕೆ ಇದೆ. ಕೌರವರ ದೊರೆ ಧುರ್ಯೋದನ ತಾವು ಮಾತ್ರ ಕುರು ವಂಶದ ಮೂಲ ಪುರುಷರು,ಪಾಂಡವರು ತಮ್ಮ ವಂಶಕ್ಕೆ ಹುಟ್ಟಿದವರಲ್ಲ ಅಂತ ಅವರಿಗೆ ಅರ್ಧ ರಾಜ್ಯ ಹಸ್ತಾಂತರಿಸುವುದಿಲ್ಲ. ಕೌರವರು ದ್ರಾವಿಡ ಕರಿಯ ಜನಾಂಗದವರಾಗಿದ್ದರೆ, ಪಾಂಡವರು ಹೆಸರಿಗೆ ತಕ್ಕಂತೆ (ಪಾಂಡು ಅಂದರೆ ಬಿಳಿ ವರ್ಣ) ಗೋಧಿ ಮೈ ಬಣ್ಣದವರು. ಕೃಷ್ಣನಂತೆ ಆರ್ಯ-ದ್ರಾವಿಡ ಮಿಶ್ರಿತ ತಳಿಗಳು. ಹೀಗಾಗಿ ಕೃಷ್ಣ ಮೊದಲಿನಿಂದಲೂ ಪಾಂಡವರ ಪರವಾಗಿರುತ್ತಾನೆ. ಕುರು ವಂಶದವನಾದ ಶಂತನು ಮಹಾರಾಜ ಮೊದಲ ಹೆಂಡತಿ ತೀರಿಕೊಂಡ ನಂತರ ಬೆಸ್ತ ಜನಾಂಗದ ಸತ್ಯವತಿ ಮೇಲೆ ಅನುರಕ್ತನಾಗುತ್ತಾನೆ. ಆದರೆ ಸತ್ಯವತಿ ತಾನು ಮದುವೆಯಾಗಬೇಕಾದರೆ,ತನ್ನ ಮಕ್ಕಳಿಗೆ ಪಟ್ಟಾಭಿಷೇಕ ಮಾಡಬೇಕು. ಮೊದಲ ಹೆಂಡತಿ ಮಗ ಭೀಷ್ಮ ಪಟ್ಟಾಭಿಷಿಕ್ತನಾಗಲು ಅರ್ಹನಾಗಿದ್ದರೂ,ಅವನ ವಂಶಸ್ಥರ್ಯಾರೂ ಪಟ್ಟಾಭಿಷೇಕಕ್ಕೆ ಬರಬಾರದು ಎಂಬ ವಾಗ್ದಾನಕ್ಕೆ ಬದ್ದವಾದರೆ ಮಾತ್ರ ಮದುವೆಯಾಗುವುದಾಗಿ ಹೇಳುತ್ತಾಳೆ. ಈ ರೀತಿ ಬೆಸ್ತರ ಕನ್ಯೆ ಸತ್ಯವತಿ ಹೇಳುವುದಕ್ಕೆ ಕಾರಣ,ಆ ಕಾಲದಲ್ಲಿದ್ದ ಜಾತಿ ಕಟ್ಟಳೆ ಪ್ರಕಾರ ಕೆಳ ಜಾತಿಯವಳಿಗೆ ಹುಟ್ಟಿದವರೆಂದು ತನ್ನ ಮಕ್ಕಳಿಗೆ ಅಧಿಕಾರ ನಿರಾಕರಿಸುವ ಸಾಧ್ಯತೆ ಇದ್ದುದರಿಂದ ಸತ್ಯವತಿ ಷರತ್ತು ವಿಧಿಸಿರುತ್ತಾಳೆ. ತಂದೆಯ ವಿಧುರತ್ವ ತೊಡೆದು ವಿವಾಹಿತನನ್ನಾಗಿಸಲು ಭಿಷ್ಮ ತಾನು ಆ ಜನ್ಮ ಬ್ರಹ್ಮಚಾರಿಯಾಗಿರುವ ಶಪಥ ಮಾಡುತ್ತಾನೆ. ಶಂತನು ಮತ್ತು ಸತ್ಯವತಿ ವಿವಾಹವೇನೋ ನೆರವೇರಿ ಚಿತ್ರ ವೀರ್ಯ-ವಿಚಿತ್ರ ವೀರ್ಯ ಎಂಬ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಇವರು ವಿವಾಹ ವಯಸ್ಕರಾದಾಗ ಕೆಳ ಜಾತಿಯವಳಿಗೆ ಹುಟ್ಟಿದವರೆಂದು ಹೊರ ರಾಜ್ಯದ ಆರ್ಯ ವಂಶದ ರಾಜರು ತಮ್ಮ ಹೆಣ್ಣು ಮಕ್ಕಳನ್ನು ಧಾರೆ ಎರೆದುಕೊಡಲು ನಿರಾಕರಿಸಿದಾಗ,ಭೀಷ್ಮ ಸ್ವಯಂವರ ನಡೆಯತ್ತಿದ್ದ ಸ್ಥಳಕ್ಕೆ ನುಗ್ಗಿ,ಅಲ್ಲಿದ್ದ ಅಂಬೆ-ಅಂಬಿಕೆ-ಅಂಬಾಲಿಕೆ ಎಂಬ ಮೂವರು ಹೆಣ್ಣು ಮಕ್ಕಳನ್ನು ಅಪಹರಿಸುತ್ತಾನೆ. ತಡೆಯಲು ಬಂದ ಇತರೆ ರಾಜ್ಯದ ರಾಜಕುಮಾರರನ್ನು ಸೋಲಿಸಿ,ಹಿಮ್ಮೆಟ್ಟಿಸುತ್ತಾನೆ. ಅಂಬಿಕೆ ಮತ್ತು ಅಂಬಾಲಿಕೆ ಸೋದರಿಯರು ಚಿತ್ರ ವೀರ್ಯ-ವಿಚಿತ್ರ ವೀರ್ಯ ಸೋದರರನ್ನು ವರಿಸಿದರೆ,ಅಂಬೆಗೆ ಜೋಡಿ ಸಿಗದೆ ಒಂಟಿಯಾಗುತ್ತಾಳೆ. ಆರ್ಯ ವಂಶಜಳಾದ ಅಂಬೆ, ಆರ್ಯ ವಂಶಜನಾದ ಭೀಷ್ಮನನ್ನು ಮದುವೆಯಾಗಲು ಇಚ್ಚಿಸುತ್ತಾಳೆ. ಆದರೆ ಭೀಷ್ಮ ವಚನ ಭಂಗಿತನಾಗಲು ಇಚ್ಚಿಸದೆ, ಮದುವೆ ನಿರಾಕರಿಸುತ್ತಾನೆ. ಭೀಷ್ಮನ ಎದುರಿಸಲಾರದೆ ಸೋತು ಓಡಿ ಹೋಗಿದ್ದ ಸ್ವಯಂವರದಲ್ಲಿ ಭಾಗಿಯಾಗಿದ್ದ ರಾಜಕುಮಾರರು ಸಹ ಅಂಬೆ ಅಪವಿತ್ರಳಾಗಿದ್ದಾಳೆಂದು ದೂರ ಉಳಿದಿದ್ದರಿಂದ ನೊಂದ ಅಂಬೆ ಅಗ್ನಿ ಕುಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಇತ್ತ ಮದುವೆಯಾದ ಕೆಲ ವರ್ಷಗಳಲ್ಲೆ ಚಿತ್ರ ವೀರ್ಯ ಮತ್ತು ವಿಚಿತ್ರ ವೀರ್ಯರಿಬ್ಬರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆ. ಇವರ ಸಾವಿಗೆ ಅಂಬಿಕೆ ಮತ್ತು ಅಂಬಾಲಿಕೆ ಸೋದರಿಯರ ಸಂಚು ಕಾರಣವಾ?ಗೊತ್ತಿಲ್ಲ. ಮಹಾ ಭಾರತದ ಕತೆ ಹಾಗೇನೂ ಹೇಳುವುದಿಲ್ಲ. ಊಹಿಸುವ ಮನಸುಗಳಿಗೆ ಕಡಿವಾಣವಿಲ್ಲದ್ದರಿಂದ ಹೇಗೆ ಬೇಕಾದರೂ ಊಹಿಸಿಕೊಳ್ಳಬಹುದು.
ಹೀಗೆ ಚಿತ್ರ ವೀರ್ಯ ಮತ್ತು ವಿಚಿತ್ರ ವೀರ್ಯರಿಬ್ಬರ ಸಾವಿನ ನಂತರ ಕುರು ವಂಶ ನಾಶವಾಗುವ ಸಾಧ್ಯತೆ ಇತ್ತು. ಆದರೆ ರಾಜ ಮಾತೆ ಸತ್ಯವತಿ ತನ್ನ ವಂಶಜನಾದ ವ್ಯಾಸನನ್ನು ಕರೆಸಿ ವಿಧವೆ ಸೊಸೆಯರಿಗೆ ನಿಯೋಗ ಅಥವ ಕೂಡಾವಳಿ ಮಾಡಿಸಿದಾಗ ಹುಟ್ಟಿದವರೆ ಧೃತರಾಷ್ಟ್ರ ಮತ್ತು ಪಾಂಡು. ಮಹಾರಾಣಿಯರ ಅಂತಃಪುರದ ಸೇವಕಿಯಾಗಿದ್ದವಳೊಂದಿಗೂ ವ್ಯಾಸ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಆಕೆಗೆ ವಿಧುರ ಹುಟ್ಟುತ್ತಾನೆ. ಮಹಾಭಾರತದಲ್ಲಿ ವಿಧುರ ನ್ಯಾಯದ ಚತುರನಾಗಿ,ವಿವೇಕದ ಆಗರವಾಗಿರುತ್ತಾನೆ. ಹೀಗೆ ವ್ಯಾಸನಿಂದ ಮತ್ತೆ ಬೆಳೆಯುವ ಕುರು ವಂಶದ ವಿಕಾಸ ಧುರ್ಯೋದನ ಮತ್ತು ಧರ್ಮರಾಯನ ಕಾಲಕ್ಕೆ ದಾಯಾದಿ ಮತ್ಸರ ತಾರಕಕ್ಕೇರಿ,ಕುರುಕ್ಷೇತ್ರ ಯುದ್ದಕ್ಕೆ ಕಾರಣವಾಗುತ್ತದೆ.

ತಂಗಿಯ ಮಗನಿಂದ ತನಗೆ ಸಾವು ಬರುತ್ತದೆಂದು ಕಂಸಾಸುರ ತನ್ನ ತಂಗಿ ದೇವಕಿಗೆ ಹುಟ್ಟುವ ಪ್ರತಿ ಮಗುವನ್ನು ಕೊಲ್ಲುವಂತೆ,ಖುರಾನ್‍ನಲ್ಲು ಇದೇ ಮಾದರಿಯ ಕತೆ ಇದೆ.
ಮಹಾಭಾರತ-ಕುರಾನ್-ಬೈಬಲ್ ಸಾಮ್ಯತೆ :
ಹಿಂದೂ ಧರ್ಮ-ಕ್ರೈಸ್ತ ಧರ್ಮ-ಇಸ್ಲಾಂ ಧರ್ಮ ಮಧ್ಯ ಏಷ್ಯಾದಲ್ಲಿ ಹುಟ್ಟಿದ್ದರಿಂದ ಮಹಾಭಾರತದಲ್ಲಿ ಕಂಡು ಬರುವ ಹಲವು ಅಂಶಗಳು ಕ್ರೈಸ್ತ ಧರ್ಮ-ಇಸ್ಲಾಂ ಧರ್ಮಗಳ ಧರ್ಮ ಗ್ರಂಥಗಳಾದ ಬೈಬಲ್ ಮತ್ತು ಖುರಾನ್‍ನಲ್ಲಿ ಕಾಣ ಸಿಗುತ್ತವೆ. ಉದಾಹರಣೆಗೆ ಕೃಷ್ಣ ಗೊಲ್ಲರ ಹಟ್ಟಿಯಲ್ಲಿ ಹುಟ್ಟಿದರೆ,ಕ್ರಿಸ್ತ ಕುರುಬರ ಹಟ್ಟಿಯಲ್ಲಿ ಹುಟ್ಟುತ್ತಾನೆ. ಇವರಿಬ್ಬರ ಹುಟ್ಟೂ ದೇವರ ಕೃಪೆಯಿಂದ ಹುಟ್ಟಿದವೆಂದು ಎರಡೂ ಗ್ರಂಥಗಳಲ್ಲಿ ಹೇಳಲಾಗುತ್ತೆ. ಯೇಸು ಎಂಬ ಪದ ವಾಸು ಪದದ ಅಪಭ್ರಂಶವಾಗಿ ರೂಢಿಗೆ ಬಂದಿರಬಹುದು. ಕ್ರಿಸ್ತ ಎಂಬುದು ಕೃಷ್ಣ ಎಂಬ ನಾಮ ಪದದ ಅಪಭ್ರಂಶ ಅಂತ ಈಗಾಗಲೇ ಇತಿಹಾಸ ತಜ್ಞರಿರಲಿ,ಭಾರತೀಯ ಆಧ್ಯಾತ್ಮ ಗುರುಗಳು ಪರಿಭಾವಿಸಿದ್ದಾರೆ. ಹಾಗೆ ಖುರಾನ್‍ನಲ್ಲಿ ಅಸುರ ರಾಜನೊಬ್ಬ ತನ್ನನ್ನು ಕೊಲ್ಲುವ ಶತ್ರು ತನ್ನ ಸಾಮ್ರಾಜ್ಯದಲ್ಲಿ ಹುಟ್ಟುತ್ತಾನೆಂದು ತನ್ನ ರಾಜ್ಯದಲ್ಲಿ ಹುಟ್ಟುವ ಎಲ್ಲಾ ನವಜಾತಾ ಶಿಶುಗಳನ್ನು ಸಮುದ್ರಕ್ಕೆಸೆದು ಕೊಲ್ಲುತ್ತಿರುತ್ತಾನೆ. ಹೀಗೆ ಒಮ್ಮೆ ಸಮುದ್ರಕ್ಕೆಸೆದ ಮಕ್ಕಳಲ್ಲಿ ಒಬ್ಬ ಕೆಳ ಬೀಳದೆ,ಆಕಾಶದಲ್ಲೆ ಅಶರೀರವಾಣಿಯಂತೆ ಘರ್ಜಿಸಿ ಆ ರಾಕ್ಷಸನನ್ನು ಕೊಲ್ಲುವ ಕಥೆ ಇದೆ. ಮಗನನ್ನು ಬಲಿ ಕೊಡುವ “ಭಕ್ತ ಸಿರಿಯಾಳ”ನ ಕತೆ ಮುಸ್ಲಿಮರ “ಬಕ್ರೀದ್”ಹಬ್ಬದ ಕತೆ ಹೋಲುತ್ತದೆ.್ಲ ದೇವರ ಮೇಲಿನ ಭಕ್ತಿಗಾಗಿ ಮಗನನ್ನೆ ದೇವರಿಗೆ ಬಲಿ ಕೊಡುವ ಕತೆ ಹಲವು ಧರ್ಮಗಳಲ್ಲಿ ಹಲವು ರೂಪದಲ್ಲಿವೆ. ಹಾಗೆ,ಮುಸ್ಲಿಮರ ಪರಮ ಪವಿತ್ರ ಹಬ್ಬ ರಮ್ಝಾನ್ ಅರೇಬಿಕ್ ಭಾಷೆಯಲ್ಲಿ “ರಾಮ್‍ದಾನ್” ಎಂದು ಕರೆಯುವುದು ವಾಡಿಕೆ. ಭಾರತೀಯ ಮುಸ್ಲಿಮರು ಮಾತ್ರ “ರಾಮ್ದಾನ್” ಹಬ್ಬವನ್ನು “ರಮ್ಝಾನ್”ಎಂದು ಕರೆಯುತ್ತಾರೆ.

mysore dasara
mysore dasara

ಈಗಾಗಲೆ ಮುಸ್ಲಿಮರ ಖುರಾನ್-ಕ್ರೈಸ್ತರ ಬೈಬಲ್ ಮತ್ತು ಯಹೂದಿಗಳ ಟ್ಯಾಲ್‍ಮಡ್,ಪಾರ್ಸಿಗಳ ಜೆಂಡಾ ಅವೆಸ್ತಾ ಧರ್ಮ ಗ್ರಂಥಗಳಲ್ಲಂತೂ ಪರಸ್ಪರ ಕೊಟ್ಟು-ತೆಗೆದುಕೊಳ್ಳುವ ವಿಚಾರಗಳಿವೆ. ಓಲ್ಡ್ ಟೆಸ್ಟಾಮೆಂಟ್(ಹಳೆ ಒಡಂಬಡಿಕೆ)ಯಹೂದಿಗಳ ಇತಿಹಾಸ ಹೇಳಿದರೆ,ನ್ಯೂ ಟೆಸ್ಟಾಮೆಂಟ್ ಕ್ರೈಸ್ತ ಧರ್ಮದ ವಿಚಾರಗಳನ್ನು ಹೇಳುತ್ತದೆÉ. ಖುರಾನ್‍ನಲ್ಲು ಬೈಬಲ್ ಮತ್ತು ಟ್ಯಾಲ್‍ಮಡ್ ಧರ್ಮ ಗ್ರಂಥಗಳಲ್ಲಿ ಕಂಡುಬರುವ ಅಂಶಗಳು ಬಹಳಷ್ಟಿವೆ. ಆರ್ಯರ ದೇವರು ನಾರಾಯಣನಾದರೆ,ದ್ರಾವಿಡರ ದೇವರು ಶಿವ. ಇವರ ಮೈ ಬಣ್ಣದ ವರ್ಣನೆಯಿಂದಲೇ ಗೊತ್ತಾಗುತ್ತದೆ. ಪಾಂಡು(ಬಿಳಿ)ರಂಗ (ಬಣ್ಣ) ಅಂದರೆ ಬಿಳಿ ಬಣ್ಣ ಅಂತ ಅರ್ಥ ಬರುತ್ತದೆ. ಹಾಗೆ ರಂಗನಾಥ ಅಂದರೆ ಬಣ್ಣದ ಒಡೆಯ. ಪಾಂಡುರಂಗ ಮತ್ತು ರಂಗನಾಥ ವಿಷ್ಣುವಿನ ಅವತಾರವಾಗಿರುವುದರಿಂದ ಆರ್ಯರ ದೇವರು ನಾರಾಯಣ ಎಂಬುದು ನಿರೂಪಿತವಾಗುತ್ತದೆ. ಇರಾನಿಯರೇ ಭಾರತೀಯ ಪುರಾಣಗಳಲ್ಲಿ ಬರುವ ಆರ್ಯರು ಎಂಬ ವಾದವಿದೆ. ಇಲ್ಲಿನ ಮೂಲ ಧರ್ಮವಾದ ಪಾರ್ಸಿ ಅಥವ ಜೊರಾಷ್ಟ್ರಿಯನ್ ಧರ್ಮಗ್ರಂಥ ಜೆಂಡಾ ಅವೆಸ್ತಾದಲ್ಲಿ ಅಗ್ನಿಗೆ ಪ್ರಾಮುಖ್ಯತೆ ಇದೆ. ಅಗ್ನಿಯನ್ನು ಪ್ರತ್ಯಕ್ಷ ದೇವರೆಂದು ಭಾವಿಸಿ,ಯಾವುದೇ ಪೂಜೆಗೂ ಯಜ್ಞ ಕುಂಡ ಮಾದರಿಯಲ್ಲೆ ಬೆಂಕಿ ಉರಿಸಲಾಗುತ್ತೆ. ತಮ್ಮ ದೇಹವನ್ನು ಗರುಡನಿಗೆ ಅರ್ಪಿಸುತ್ತಾರೆ. ಇದು ಆರ್ಯರ ದೇವರು ವಿಷ್ಣುವಿನ ವಾಹನ. ಹಾಗೆಯೇ, ನವಿಲು ಪಾರ್ಸಿಗಳು ಪೂಜಿಸುವ ಪವಿತ್ರ ದೇವರು. ಇಸ್ಲಾಂ ದಾಳಿಯ ನಂತರ ಅಲ್ಲಿಂದ ಕೆಲವರು ದೋಣಿ-ಹಡಗುಗಳ ಮೂಲಕ ಭಾರತೀಯ ತೀರ ಸೇರಿದರು. ಹೀಗೆ ತಮಿಳುನಾಡು ತೀರ ಪ್ರದೇಶಕ್ಕೆ ಬಂದವರು ಹಿಂದೂ ಬ್ರಾಹ್ಮಣರಾಗಿ ತಾವು ಪವಿತ್ರ ಪಕ್ಷಿ ಎಂದು ಪೂಜಿಸುತ್ತಿದ್ದ ನವಿಲು ವಾಹನ ಮಾಡಿಕೊಂಡ ಸುಬ್ರಹ್ಮಣ್ಯ ದೇವರನ್ನು ಮುರುಗನೆಂದು ಕರೆದು,ಎಲ್ಲೆಡೆ ದೇವಸ್ಥಾನಗಳನ್ನು ಹೆಚ್ಚು ಕಟ್ಟಿದ್ದರಿಂದ ತಮಿಳುನಾಡಿನಲ್ಲಿ ಗಣಪತಿ ಸೇರಿದಂತೆ ಇತರೆಲ್ಲಾ ದೇವರುಗಳಿಗಿಂತ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಭಕ್ತರು ಹೆಚ್ಚಾಗಿದ್ದಾರೆ.
ದ್ರಾವಿಡ ಶಿವ-ಆರ್ಯ ಸತಿ ದುರಂತ ಪ್ರೇಮ ಕತೆ:
ಶಿವ ಮಸಣ ಕಾಯುವ ಕೆಳ ಜಾತಿಯವ ಆಗಿದ್ದರಿಂದ ಇವನನ್ನು ಪ್ರೇಮಿಸಿ ಮದುವೆಯಾದ ಮೊದಲ ಪತ್ನಿ ಸತಿಯನ್ನು,ಈಕೆಯ ತಂದೆ ಪ್ರಜಾಪತಿ(ಆರ್ಯ) ಬಹಿಷ್ಕಾರ ಹಾಕಿರುತ್ತಾನೆ. ಹೀಗಿದ್ದರೂ,ತಂದೆ ಮನೆಯಲ್ಲಿ ನಡೆಯುತ್ತಿದ್ದ ಶುಭ ಸಮಾರಂಭವೊಂದಕ್ಕೆ ಕರೆಯದೆ ಬಂದ ಸತಿಯನ್ನು ತಂದೆ ಪ್ರಜಾ ಪತಿ ಹೀನಾಯವಾಗಿ ಹೀಯಾಳಿಸುತ್ತಾನೆ. ಅಪಮಾನ-ನೋವಿನಿಂದ ಸತಿ ಅಲ್ಲಿ ನಡೆಯುತ್ತಿದ್ದ ಹೋಮದ ಕುಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಿವ ರೌದ್ರ ರೂಪ ತಾಳಿ, ಪ್ರಜಾ ಪತಿಯನ್ನು ಕೊಂದು,ಅಗ್ನಿ ಕುಂಡದಲ್ಲಿ ಬಿದ್ದಿದ್ದ ಸತಿ ದೇಹವನ್ನು ಎತ್ತಿಕೊಂಡು ತಾಂಡವನೃತ್ಯ ಮಾಡುತ್ತಾನೆ. ಹೀಗೇ ಕೋಪೋದ್ರಿಕ್ತನಾಗಿ ಸುಟ್ಟು ಕರಕಲಾದ ಸತಿ ದೇಹವನ್ನು ಎರಡು ಕೈಯಲ್ಲಿ ಎತ್ತಿಕೊಂಡು ನಾಟ್ಯವಾಡುವಾಗ ಆಕೆಯ 18 ಪ್ರಮುಖ ಅಂಗಗಳು ಭೂಮಿಯ ನಾನಾ ಭಾಗಗಳಲ್ಲಿ ಬೀಳುತ್ತವೆ. ಇವೆಲ್ಲಾ 18 ಶಕ್ತಿ ಸ್ಥಳ ಅಥವ 18 ಶಕ್ತಿ ಪೀಠಗಳೆಂದು ಗುರುತಿಸಲಾಗಿದೆ. ಸುಟ್ಟು ಕರಕಲಾದ ಸತಿಯ ಮೂಗು ಬಿದ್ದ ಪ್ರದೇಶ ಮಹಾರಾಷ್ಟ್ರದ ನಾಸಿಕ್ ಆದರೆ,ಯೋನಿ ಬಿದ್ದ ಸ್ಥಳ ಅಸ್ಸಾಂನ ಗುವಾಹತಿಯಲ್ಲಿ ಕಾಮರೂಪ ದೇವಿ, ತೊಡೆ ಬಿದ್ದ ಸ್ಥಳ ಶ್ರೀಲಂಕಾದ ತಮಿಳರು ವಾಸಿಸುವ ಟ್ರಿಂಕೊಮಲೈನಲ್ಲಿ ಶಂಕರಿ ದೇವಿ ದೇವಸ್ಥಾನ ಇದೆ. ಬೆನ್ನಿನ ಭಾಗ ಉದುರಿದ ಸ್ಥಳ ತಮಿಳುನಾಡಿನ ಕಂಚಿ ಊರಿನಲ್ಲಿ ಕಾಮಾಕ್ಷಿ ದೇವಸ್ಥಾನವಾಗಿದೆ. ಹೊಟ್ಟೆ ಭಾಗ ಬಿದ್ದ ಪಶ್ಚಿಮ ಬಂಗಾಳದ ಪ್ರದ್ಯುಮ್ನಮ್‍ನಲ್ಲಿ ಶ್ರೀ ಶೃಂಖಲ ಊರಿದೆ. ಕೂದಲು ಬಿದ್ದ ಪ್ರದೇಶ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನವಿದೆ.ಮೇಲ್ದವಡೆ ಹಲ್ಲು ಬಿದ್ದ ಆಂಧ್ರಪ್ರದೇಶದ ಆಲಂಪುರ್‍ನಲ್ಲಿ ಜೋಗುಳಂಬ ದೇವಿ, ಕೊರಳು ಬಿದ್ದ ಶ್ರೀ ಶೈಲಂನಲ್ಲಿ ಭ್ರಮರಾಂಬಾ ದೇವಿ,ಕಣ್ಣುಗಳು ಬಿದ್ದ ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿ ದೇವಸ್ಥಾನ, ಬಲಗೈ ಬಿದ್ದ ಮಹಾರಾಷ್ಟ್ರದ ನಾಂದೇಡ್‍ನಲ್ಲಿ ಏಕ ವೀರಿಕಾ ದೇವಿ,ಮೇಲ್ದುಟಿ ಬಿದ್ದ ಮಧ್ಯಪ್ರದೇಶದ ಉಜ್ಜೈನ್‍ನಲ್ಲಿ ಮಹಾಕಾಳಿ ದೇವಿ,ಎಡಗೈ ಬಿದ್ದ ಆಂಧ್ರದ ಪೀಠಾಪುರಂನಲ್ಲಿ ಪುರುಹುಟಿಕಾ ದೇವಿ, ನಾಭಿ ಬಿದ್ದ ಸ್ಥಳ ಒಡಿಶಾದ ಜಾಜ್‍ಪುರ್‍ನಲ್ಲಿ ಬಿರಾಜಾ ದೇವಿ,ಎಡಗೆನ್ನೆ ಬಿದ್ದ ಆಂಧ್ರದ ದ್ರಾಕ್ಷರಮಂನಲ್ಲಿ ಮಾಣಿಕ್ಯಾಂಬ ದೇವಿ,ಬೆರಳುಗಳು ಬಿದ್ದ ಉತ್ತರಪ್ರದೇಶದ ಪ್ರಯಾಗದಲ್ಲಿ ಮಾಧವೇಶ್ವರ ದೇವಿ,ತಲೆ ಭಾಗ ಬಿದ್ದ ಹಿಮಾಚಲಾಪ್ರದೇಶದ ಜ್ವಾಲಾದಲ್ಲಿ ವೈಷ್ಣೋ ದೇವಿ, ಸ್ತನಗಳು ಬಿದ್ದ ಸ್ಥಳ ಬಿಹಾರದ ಗಯಾ ಪ್ರದೇಶದಲ್ಲಿ ಸರ್ವಮಂಗಳ ದೇವಿಯಾಗಿ,ಮೊಣಕೈ ಬಿದ್ದ ವಾರಣಾಸಿಯಲ್ಲಿ ವಿಶಾಲಾಕ್ಷಿದೇವಿಯಾಗಿ,ಹಲ್ಲುಗಳು ಉದುರಿದ ಚತ್ತೀಸ್‍ಗಢದ ದಂತೇವಾಡದಲ್ಲಿ ದಂತೇಶ್ವರಿ ದೇವಿಯಾಗಿ,ಬಲಗೈ ಬಿದ್ದ ಕಾಶ್ಮೀರದ ಸರಸ್ವತಿ ದೇವಿ ಪವಿತ್ರವಾದ ಮತ್ತು ಅಷ್ಟೆ ಬಲಿಷ್ಟವಾದ ದೇವರೆಂದು ಪ್ರಸಿದ್ದಿಯಾಗಿವೆ.
ಸುಟ್ಟು ಕರಕಲಾದ ಸತಿ ದೇವಿ ಮುಂದೆ ಕಾಳಿ ದೇವಿಯಾಗಿ ರೂಪ ತಾಳಿರುವ ಸಾಧ್ಯತೆ ಇದೆ. ಕುರಿ ಮುಖ ಹೋಲುತ್ತಿದ್ದ ಪ್ರಜಾ(ಅಜ ಎಂದರೆ ಆಡು)ಪತಿ ಮೇಲಿನ ಕೋಪಕ್ಕೆ ಕಾಳಿ ದೇವಿಗೆ ಕುರಿಗಳನ್ನು ಬಲಿಕೊಡುವ ಪರಿಪಾಠ ಆರಂಭವಾಯಿತು. ಹಾಗೆಯೇ, ಮಹಿಷಾಸುರನ ಮೇಲಿನ ಕೋಪಕ್ಕೆ ಕೋಣಗಳನ್ನು ಮಾರಿ ದೇವಿಗೆ ಬಲಿ ನೀಡುವ ಸಂಪ್ರದಾಯ ರೂಢಿಗತವಾಯಿತು. ಸತಿ ಕೇಶ ಬಿದ್ದ ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ 18 ಶಕ್ತಿ ಸ್ಥಳಗಳಲ್ಲಿ ಒಂದಾಗಿದೆ. ಆರ್ಯರ ವಿಷ್ಣು ಉಷ್ಣ ಪ್ರದೇಶದವ. ಶಿವ ತಂಪು ಪ್ರದೇಶದವ. ಇದರಿಂದಲೂ ಗೊತ್ತಾಗುತ್ತದೆ,ಆರ್ಯರು ಉಷ್ಣ ಪ್ರದೇಶದ ಇರಾನಿನಲ್ಲಿದ್ದವರು. ದ್ರಾವಿಡರು ತಂಪಾದ ಭರತ ಖಂಡ(ಪಾಕಿಸ್ತಾನ-ಆಫ್ಘಾನಿಸ್ತಾನ ಒಳಗೊಂಡ)ದವರೆಂಬುದು. ಇಲ್ಲಿರುವ ಸತ್ಯಾಂಶಗಳನ್ನು ಕಂಡ ನಂತರವಾದರೂ ಪಾಶ್ಚಾತ್ಯ ಇತಿಹಾಸಕಾರರ ದೃಷ್ಟಿಕೋನ ಬದಲಾಗಬಹುದು. ಹಾಗೆಯೆ, ಮಧ್ಯಪ್ರಾಚ್ಯ ದೇಶಗಳ ಇತಿಹಾಸದ ಬಗ್ಗೆ ಹೊಸ ಹೊಳಹು ಕಾಣಿಸಬಹುದು. ಸ್ವಾರಸ್ಯದ ವಿಷಯ ಎಂದರೆ, ಉತ್ತರ ಭಾರತದಲ್ಲಿ ದುರ್ಗೆ ವ್ಯಾಘ್ರ ವಾಹಿನಿಯಾಗಿದ್ದರೆ, ದಕ್ಷಿಣ ಭಾರತದಲ್ಲಿ ಸಿಂಹ ವಾಹಿನಿಯಾಗಿದ್ದಾಳೆ.
ದುರ್ಗೆಯ ಪ್ರಭಾವ ಭರತ ಖಂಡದಿಂದಾಚೆ ಸಾಗಿ ಇಂಡೋನೇಷ್ಯಾ,ಮಲೇಷ್ಯಾ,ಥೈಲ್ಯಾಂಡ್,ಬರ್ಮ, ಚೀನಾ,ಜಪಾನ್ ದೇಶದವರೆಗು ಹಬ್ಬಿದೆ. ಚೀನಾದಲ್ಲಿ ದುರ್ಗೆಯನ್ನು ಜುನ್-ತಿ ಅಥವ ಚುನ್ ದೀದಿ ಅಂತ ಕರೆಯಲ್ಪಡುತ್ತಾಳೆ. ಜೈನ ಮತ್ತು ಬೌದ್ದ ಧರ್ಮದಲ್ಲು ದುರ್ಗೆಯ ಪ್ರಸ್ತಾಪವಿದೆ. ದುರ್ಗೆ-ಕಾಳಿ-ಚಾಮುಂಡೇಶ್ವರಿ-ಮಹಿಷಾಸುರ ಮರ್ಧಿನಿ ಎಂಬಿತ್ಯಾದಿ ಹಲವು ಹೆಸರುಗಳಿಂದ ಕರೆಯುವ ಈಕೆ ಸಾಕ್ಷಾತ್ ಪಾರ್ವತಿಯ ಅವತಾರದವಳೆಂದು ನಂಬಲಾಗಿದೆ. ಇದೆಲ್ಲಾ ವಿವರÀಗಳು ಕನ್ನಡದ ಭೋಜರಾಜರೆಂದೇ ಗುರುತಿಸಿಕೊಂಡಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಹೊರ ತಂದಿರುವ ಒಂಭತ್ತು ನಿಧಿಗಳಲ್ಲಿ ಬರುವ “ಶ್ರೀ ತತ್ವ ನಿಧಿ”ಯಲ್ಲಿ ಉಲ್ಲೇಖಿಸಲಾಗಿದೆ. ಶಿವನ ಮಡದಿ ಪಾರ್ವತಿಯ ನಾನಾ ಅವತಾರಗಳ ವಿವರ ಅದರಲ್ಲಿದೆ.
ಮಾರ್ಕಂಡೇಯ ಪುರಾಣದಲ್ಲಿ ಮಹಾಬಲಾದ್ರಿ:
ಮೈಸೂರಿಗೂ ಮಹಿಷಾಸುರನಿಗೂ ಯಾವ ಬಾದರಾಯಣನ ಸಂಬಂಧವೂ ಇಲ್ಲ. ಮಹಿಷಾಸುರನಿಗೇ ಸಂಬಂಧವಿಲ್ಲ ಎಂದ ಮೇಲೆ ಚಾಮುಂಡೇಶ್ವರಿಗೂ ಮೈಸೂರಿಗೂ ಯಾವುದೇ ಪೌರಾಣಿಕ ಸಂಬಂಧವೂ ಇಲ್ಲ. ವಾಸ್ತವದಲ್ಲಿ ಚಾಮುಂಡಿ ಬೆಟ್ಟವನ್ನು ಮಾರ್ಕಂಡೇಯ ಪುರಾಣ ಸೇರಿದಂತೆ ಹಲವು ಪುರಾಣಗಳಲ್ಲಿ ಮಹಾಬಲಾದ್ರಿ, ಮಹಾಬಲೇಶ್ವರ ಪರ್ವತ ಅಂತ ಕರೆಯಲಾಗಿದೆ. ದೇವಿ ಮಹಾತ್ಮೆಯ ಪುರಾಣಗಳಲ್ಲಿ ದೇವಿಗೆ ಪ್ರಾಧಾನ್ಯವಿರುವುದರಿಂದ ಈ ಬೆಟ್ಟವನ್ನು ಕ್ರೌಂಚ ಪೀಠಂ ಅಂತ ಕರೆಯಲಾಗಿದೆ. ಇತಿಹಾಸಕಾರರ ಪ್ರಕಾರ,ಇಲ್ಲಿರುವ ಮಹಾಬಲೇಶ್ವರ ದೇವಸ್ಥಾನ ಚಾಮುಂಡೇಶ್ವರಿ ದೇವಸ್ಥಾನಕ್ಕಿಂತ ಪುರಾತನವಾದುದು. ಇದು ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಣೆÀಯಲ್ಲಿದೆ. ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ ಮಹಾಬಲೇಶ್ವರ ದೇವಾಲಯ ಸಮೀಪ ಮಾರಮ್ಮನ ಗುಡಿ ಇತ್ತು. 12ನೇ ಶತಮಾನದಲ್ಲಿ ಹೊಯ್ಸಳರು ಕಟ್ಟಿಸಿದ ಗರ್ಭ ಗುಡಿಗೆ ಉತ್ತರ ಭಾರತದಿಂದ ಬಂದ ಒಡೆಯರ್ ಮೂಲವಂಶಜನಾದ ಯದುರಾಯ ಕ್ರಿ.ಶ.1399ರಲ್ಲಿ ಪಟ್ಟಾಭಿಷಿಕ್ತನಾದ ನಂತರ ಉತ್ತರ ಭಾರತದಲ್ಲಿ ಪ್ರಚಲಿತವಿರುವ ಕಥೆಯಂತೆ ಚಾಮುಂಡೇಶ್ವರಿ ದೇವಿ ಎಂದು ಹೆಸರಿಟ್ಟ. ಇಲ್ಲಿ ಹೀಗ್ಗೆ 150 ವರ್ಷಗಳ ಹಿಂದಿನವರೆಗು ಇಲ್ಲಿ ಪ್ರಾಣಿ ಬಲಿ ಕೊಡುವ ಪದ್ದತಿ ರೂಢಿಯಲ್ಲಿತ್ತು. ಜನ ಮಾಂಸದೂಟಕ್ಕೆ ಹೆಚ್ಚು ಆಸೆ ಪಡುತ್ತಿದ್ದರಿಂದ ಮಹಾಬಲೇಶ್ವರ ದೇವಸ್ಥಾನಕ್ಕಿಂತ ಚಾಮುಂಡಿ ದೇಗುಲಕ್ಕೆ ಹೋಗುತ್ತಿದ್ದರು. ಹೀಗಾಗಿ ಮಹಾಬಲ ಬೆಟ್ಟದ ಹೆಸರು,ಚಾಮುಂಡಿ ಬೆಟ್ಟ ಅನ್ನೋ ಹೆಸರು ಚಾಲ್ತಿಗೆ ಬಂತು. 3489ಅಡಿ ಎತ್ತರವಿರುವ ಈ ಬೆಟ್ಟಕ್ಕೆ ಸಾವಿರ ಮೆಟ್ಟಿಲುಗಳಿವೆ. ಕ್ರಿ.ಶ.1659ರಲ್ಲಿ ದೊಡ್ಡ ದೇವರಾಜ ಒಡೆಯರ್ 800ನೇ ಮೆಟ್ಟಿಲ ಬಳಿ 15 ಅಡಿ ಎತ್ತರ ಮತ್ತು 24 ಅಡಿ ಉದ್ದದ ಏಕ ಶಿಲಾ ನಂದಿ ವಿಗ್ರಹ ಪ್ರತಿಷ್ಟಾಪಿಸಿದರು.
History of Goddess chamundeshwari
History of Goddess chamundeshwari

ಕ್ರಿ.ಶ.1800ರವರೆಗು ಚಾಮುಂಡಿ ಬೆಟ್ಟದ ಮೇಲಿರುವ ಈಗಿನ ದೇವಸ್ಥಾನ ಗರ್ಭಗುಡಿಗಷ್ಟೆ ಸೀಮಿತವಾಗಿತ್ತು. ಟಿಪ್ಪು ಕಾಲದಲ್ಲಿ ಇಲ್ಲಿಗೆ ಭೇಟಿ ನೀಡಿದ ಜರ್ಮನಿ ಮೂಲದ ಕ್ರೈಸ್ತ ಧರ್ಮ ಪ್ರಚಾರಕ ಸ್ಟಾಟ್ಝ್ ಪ್ರಕಾರ ಅದೊಂದು ಸಣ್ಣ ಗುಡಿಯಾಗಿತ್ತು. ಬೆಟ್ಟ ಹತ್ತಿ ಬಂದು ಜನ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಕೆಲ ದಶಕಗಳ ಹಿಂದೆ ಬೆಟ್ಟದಲ್ಲಿದ್ದ ಕೆಲ ಬುಡಕಟ್ಟು ಜನಾಂಗದವರು ಚಾಮುಂಡಿಯನ್ನು ಮೂಗು ಮಾರಿ ಎಂದು ಕರೆಯುತ್ತಿದ್ದರು. ಈಕೆಗೆ ಮೂಗು ಇಷ್ಟ ಅಂತ ಮನುಷ್ಯರ ಮೂಗು ಕತ್ತರಿಸಿ,ಅದನ್ನು ಮೂಗಿನ ಮಾಲೆಯಾಗಿಸಿ ದೇವಿ ಕೊರಳಿಗೆ ಅರ್ಪಿಸುತ್ತಿದ್ದರಂತೆ. ಹಾಗೇ,ಕೋಣ,ಕುರಿ,ಕೋಳಿಗಳ ಬಲಿ ಕೊಡುವುದು ಅಲ್ಲಿ ಮಾಮೂಲಿಯಾಗಿತ್ತಂತೆ. ಬೆಟ್ಟಕ್ಕೆ ಬರುವ ಭಕ್ತರನ್ನು ಅಪಹರಿಸಿ, ದೇವಿ ಮುಂದೆ ಅಮಾನುಷವಾಗಿ ಮೂಗು ಕತ್ತರಿಸಿ ಮಾಲೆ ಮಾಡಿ ಹಾಕುವ ಕ್ರೂರ ಪದ್ದತಿಯನ್ನು ಹೈದರಾಲಿ ತನ್ನ ಆಳ್ವಿಕೆಯಲ್ಲಿ ನಿಲ್ಲಿಸಿದನೆಂದು ಕ್ರೈಸ್ತ ಧರ್ಮ ಪ್ರಚಾರಕ ಸ್ಟಾಟ್ಝ್ ತನ್ನ ಪ್ರವಾಸ ಕಥನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.
ಮುಮ್ಮಡಿ ಕೃಷ್ಣರಾಜರ ಕಾಲದಲ್ಲಿ ಅಭಿವೃದ್ದಿ:
ಸಣ್ಣ ಗುಡಿಯಂತಿದ್ದ ಚಾಮುಂಡೇಶ್ವರಿ ದೇವಸ್ಥಾನದ ಈಗಿನ ಗೋಪುರವನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಕಟ್ಟಿಸಲಾಗಿದೆ. 7 ಬಂಗಾರದ ಕಳಸವಿರುವ ಗೋಪುರ ಬಹಳ ಆಕರ್ಷಣೀಯವಾಗಿದೆ. ಇಲ್ಲಿಗೆ ತಮಿಳುನಾಡು ಮೂಲದ ಆಗಮಿಕರನ್ನು ಕರೆಸಿ ಜೀರ್ಣೋದ್ದಾರಗೊಳಿಸಿದ ನಂತರ ದೇವಸ್ಥಾನದ ಮುಂದೆ ಪ್ರಾಣಿ ಬಲಿ ಕೊಡುವುದು ಮತ್ತು ಮಾಂಸಾಹಾರವನ್ನು ನಿಷೇಧಿಸಲಾಯಿತು. ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿರುವ ಪಾದದ ಕೆಳಗೆ ಪ್ರಾಣಿ ಬಲಿಗೆ ಅವಕಾಶ ನೀಡಲಾಯಿತು. ಒಡೆಯರ್ ವಂಶದ ಮೂಲ ಪುರುಷ ಯದುರಾಯ ಕ್ರಿ.ಶ.1399ರಲ್ಲಿ ಪಟ್ಟಾಭಿಷಿಕ್ತನಾಗುವುದಕ್ಕು ಮುನ್ನ ಮಾರಮ್ಮ,ಮೂಗು ಮಾರಿ, ಮತ್ತಿತರ ಸ್ಥಳೀಯ ಬುಡಕಟ್ಟು ದೇವರುಗಳ ಹೆಸರಿಂದ ಪೂಜಿಸುವ ಪರಿಪಾಠವಿತ್ತು. ಉತ್ತನ ಹಳ್ಳಿಯ ದೇವರನ್ನು ಉರಿ ಮಾರಿ ಎಂದು ಕರೆಯುತ್ತಿದ್ದರು. ಉತ್ತನಹಳ್ಳಿ ಅಮ್ಮ ದೇವಸ್ಥಾನವನ್ನು ಆಗಮ ಶಾಸ್ತ್ರದ ಪಂಡಿತರು ಜ್ವಾಲಾಮಾಲಾ ಅಂತ ಕರೆದರೆ, ಬೆಟ್ಟದ ಮೇಲಿದ್ದ ಮಾರಮ್ಮ ಅಥವ ಮೂಗು ಮಾರಿ ದೇವರನ್ನು ಚಾಮುಂಡೇಶ್ವರಿ ಎಂದು ಕರೆಯಲಾಯಿತು. ಗುಡಿ ಮುಂದೆ ನೀಡುತ್ತಿದ್ದ ಪ್ರಾಣಿ ಬಲಿಯನ್ನು ಬೆಟ್ಟದ ಕೆಳಗಿನ ಪಾದದ ಬಳಿಗೆ ವರ್ಗಾಯಿಸಲಾಯಿತು. ಚಪಲ ಚಿತ್ತ ಮಾಂಸಾಹಾರಿಗಳು ಪ್ರಾಣಿ ಬಲಿಕೊಟ್ಟು ಅದನ್ನು ಚಪ್ಪರಿಸುತ್ತಿದ್ದರಿಂದ ಮೂಲ ದೇವರಾದ ಮಹಾಬಲೇಶ್ವರ ಮರೆತುಮಚಾಮುಂಡಿ ತಾಯಿಯೇ ಹೆಚ್ಚು ನೆನಪಾಗಿ ಅದಕ್ಕೆ ಚಾಮುಂಡಿ ಬೆಟ್ಟ ಅಂತಾನೇ ಕರೆಯುವ ವಾಡಿಕೆ ಹೆಚ್ಚಾಯಿತು.
ಎಸ್.ಪ್ರಕಾಶ್ ಬಾಬು

Please follow and like us:
0

Leave a Comment