RA NEWS:- ಡಾ:ರಾಜ್ ಕುಮಾರ್ ಅಕಾಡಮಿಯ ಕಿರೀಟಕ್ಕೆ ಶ್ರೇಷ್ಠತೆಯ ಗರಿ. .!

ಮೊದಲ ಮಾತು. . !
ಸಮಾಜ ನಮಗೆ ಏನು ಮಾಡಿದೆ ಎನ್ನುವುದಕ್ಕಿಂತಾ ಸಮಾಜಕ್ಕೆ ನಾವು ಏನು ಮಾಡಿದ್ದೇವೆ ಎಂದು ಚಿಂತಿಸಬೇಕು.
ಈ ವಿಚಾರದಲ್ಲಿ ಡಾ:ರಾಜ್ ಕುಮಾರ್ ಅಕಾಡಮಿ ಸಮಾಜ ಮುಖಿಯಾಗಿ ಮುನ್ನಡೆದಿದೆ. ಡಾ:ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡಮಿ ಶಿಕ್ಷಣ ಕ್ಷೇತ್ರಕ್ಕೆ ಅದರಲ್ಲೂ ಉನ್ನತ ಶಿಕ್ಷಣಕ್ಕೆ ತನ್ನದೇ ಆದ ವಿಶಿಷ್ಟವಾದ ಕೊಡುಗೆಯನ್ನ ಕೊಟ್ಟಿದೆ.ಡಾ:ರಾಜ್ ಕುಮಾರ್ ರವರ ಆಶಯದಂತೆ ರಾಘವೇಂದ್ರ ರಾಜ್ ಕುಮಾರ್ ರವರು ಅವರ ಸುಪುತ್ರರೊಂದಿಗೆ ಆರಂಭಿಸಿದ ಡಾ:ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡಮಿ, ಸಿವಿಲ್ ಸರ್ವೀಸ್ ಆಕಾಂಕ್ಷಿಗಳಿಗೆ ಉತ್ತಮ ವೇದಿಕೆಯಾಗಿದೆ.

Dr. rajkumar academy for civil services.. . .
Dr. rajkumar academy for civil services.

ಸಿವಿಲ್ ಸರ್ವೀಸ್ ಆಕಾಂಕ್ಷಿಗಳು ಹಿಂದೆ ತಮ್ಮ ಉನ್ನತ ತರಬೇತಿಗಾಗಿ ದೆಹಲಿ ಮತ್ತು ಬಾಂಬೆ ನಗರಿಗಳನ್ನು ಅವಲಂಭಿಸಬೇಕಾಗಿತ್ತು.ಸುಮಾರು ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರು ಮತ್ತು ರಾಜ್ಯದ ನಾನಾ ಭಾಗಗಳಿಂದ ದೆಹಲಿ ಅಥವಾ ಬಾಂಬೆಗೆ ಹೊಗಬೇಕಾಗಿತ್ತು.ಆದರೇ ಇಲ್ಲೇ ಡಾ:ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡಮಿ ಉನ್ನತ ತರಬೇತಿ ಕೇಂದ್ರ ಸ್ಥಾಪನೆಯಾದ ಮೇಲೆ ಅನೇಕ ಸಿವಿಲ್ ಸರ್ವೀಸ್ ಆಕಾಂಕ್ಷಿಗಳು ಉತ್ತಮ ತರಬೇತಿಯನ್ನ ಮತ್ತು ಉನ್ನತ ಭೌದಿಕತೆಯನ್ನ ಪಡೆದುಕೊಳ್ಳುತ್ತಿದ್ದಾರೆ.
Dr. rajkumar academy for civil services.. . .
Dr. rajkumar academy for civil services.. . .

ಅಂತಹಾ ಸಮಾಜ ಮುಖಿಯಾದ ಸಿವಿಲ್ ಸರ್ವೀಸ್ ಅಕಾಡಮಿಗೆ ಈಗ ದಿ ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವತಿಯಿಂದ ಶ್ರೇಷ್ಠತೆಯ ಪ್ರಮಾಣ ಪತ್ರ ಸಿಕ್ಕಿದೆ.ಇದರಿಂದ ಡಾ:ರಾಜ್ ಕುಮಾರ್ ಅಕಾಡಮಿಯ ಕೀರೀಟಕ್ಕೆ ಶ್ರೇಷ್ಟತೆಯ ಹೆಮ್ಮೆಯ ಗರಿ ಮೂಡಿದಂತಾಗಿದೆ. ಡಾ:ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡಮಿ ಹೀಗೆ ಯಶಸ್ಸಿನ ಪಥದಲ್ಲಿ ಸಾಗಲಿ ಎಂಬುದು ರಾ ನ್ಯೂಸ್ ನ ಆಶಯ.

Please follow and like us:
0

Leave a Comment