RA NEWS:-ಅಮೇರಿಕಾಗೆ ಪ್ರತಿಭಾವಂತರು ಮಾತ್ರ ಬೇಕಂತೆ. .ಅಂದ್ರೆ ಮಿಕ್ಕೆಲಾ ಕಡೆ ಇರೋರು ದಡ್ಡರಾ. . ?

ಪ್ರತಿಭೆನ ಡಿಸೈಡ್ ಮಾಡೋಕ್ಕೆ ನೀವ್ಯಾರೀ. .!
ನೀವು ಸೆಲೆಕ್ಟ್ ಮಾಡೋರು ಮಾತ್ರ ಪ್ರತಿಭಾವಂತರು ಮಿಕ್ಕವರೆಲ್ಲಾ ದಡ್ಡರಾ. .? ಒಂದು ಪ್ರತಿಭೇ ಬರೋದು ತನ್ನ ಹುಟ್ಟು. . . ಶಿಕ್ಷಣ. . . ಅಧ್ಯಾಯನ ಪರಿಸರಗಳಿಂದ ಹಾಗೆ ಪಡೆದುಕೊಂಡ ಪ್ರತಿಭೆಯನ್ನ ಅಮೇರಿಕಕ್ಕೆ ಹೋಗಿ ಯಾಕೆ ಟ್ರಂಪ್ ಪಾದಕ್ಕೆ ಸುರಿದು ಜೈ ಅಮೇರಿಕಾ ಅನ್ನ ಬೇಕು.ಬರೀ ಪ್ರತಿಭಾವಂತರು ಮಾತ್ರ ಅಮೇರಿಕಾಕ್ಕೆ ಬರಬೇಕು ಎನ್ನುವ ಟ್ರಂಪ್ ಪ್ರಕಾರ ಮಿಕ್ಕವರೆಲ್ಲಾ ಏನು ದಡ್ಡರಾ. .?

donald trump america president
donald trump america president

ಟ್ರಂಪ್ ನಿರ್ಧಾರವೇ ಪ್ರತಿಭೆಯ ಮಾನದಂಡವಾ. . ?
” ಅಮೇರಿಕಾದಲ್ಲಿ ಕೆಲಸ ಗಿಟ್ಟಿಸ ಗಿಟ್ಟಿಸಬೇಕಾದರೆ ಅತ್ಯುನ್ನತ ಜ್ಞಾನ,ಪರಿಣೀತಿ,ಪ್ತರಿಭೆಯನ್ನು ಹೊಂದಿರ ಬೇಕು.ಈ ವಿಷಯದಲ್ಲಿ ನಾವು ಕೆಲವು ಗಡಿ ರೇಖೆ ಹಾಕುತ್ತಿದ್ದೇವೆ.ಈ ವಿಷಯದಲ್ಲಿ ಯಾವುದೇ ರಾಜೀ ಇಲ್ಲ ” ಇದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಹೊಸ ಫಾರ್ಮಾನು.ಇದೇ ಫಾರ್ಮಾನಿನಲ್ಲಿ ” ನೀವು ಅಮೇರಿಕಾಕ್ಕೆ ಬರಬೇಕಾದರೆ ಇತರರಿಗಿಂತ ನೀವು ಪ್ರತಿಭಾವಂತರಾಗಿರಬೇಕು.ವಿಭಿನ್ನ ಆಲೋಚನೆ ಹೊಂದಿರಬೇಕು,ತಂತ್ರಜ್ಞದಲ್ಲಿ ಪರಿಣೀತರಾಗಿರಬೇಕು ” ಎಂದು ಹೇಳಿದ್ದಾರೆ.
ಇವರು ಪ್ರತಿಭಾವಂತರು ಇವರು ಸಾಧಾರಣ ಇವರು ದಡ್ಡರು ಅಂತ ನಿರ್ಧರಿಸೋಕ್ಕೆ ಟ್ರಂಪ್ ಏನು ಜಗದೊಡಯನಾ. . ? ಅಮೇರಿಕಾದ ವ್ಯಾಮೋಹಿಗಳು ಈ ಬಗ್ಗೆ ಚಿಂತಿಸಬೇಕು.ಕಲಿತು ಬಲಿತು ಬೆಳೆದ ಮಾತೃಭೂಮಿಯ ಮರೆತು ಹಣದಾಸೆಯ ಒಂದೇ ಮಾನದಂಡದಿಂದ ಅಮೇರಿಕಾಕ್ಕೆ ಹೊಗುವವರು ಒಮ್ಮೆ ತಮ್ಮದೇ ಆತ್ಮಸಾಕ್ಷಿಯನ್ನ ಪರಾಮರ್ಶಿಸಿಕೊಳ್ಳಬೇಕು.ಟ್ರಂಪ್ ಪ್ರಕಾರ ಅಮೇರಿಕಾಗೆ ಹೊಗೋರು ಮಾತ್ರಾ ಪ್ರತಿಭಾವಂತರಾದರೇ ಮಿಕ್ಕವರೇನು ದಡ್ಡರಾ. .?
ಸೀಮೆಗಿಲ್ಲದ ಅಮೇರಿಕಾ. . .!

Please follow and like us:
0

Leave a Comment