RA NEWS:-ಅಟಲ್ ಅಮರ. . !

ಒಂದು ಮಾತಂತೂ ನಿಜ. .!
ಇಡೀ ಬಿಜೆಪಿಯ ಕಡಲಿನಾಳದಲ್ಲಿ ಹುಡುಕಿ ಶೋಧಿಸಿ ಸಂಶೋಧಿಸಿದರೂ ಅದೊಂದು ಮುತ್ತು ರತ್ನ ಮಾತ್ರ ಇನ್ನೆಂದೂ ಸಿಗಲಾರದು.ಆ ಮುತ್ತಿನ ಹೆಸರು. . !
ಅಟಲ್ ಬಿಹಾರಿ ವಾಜಪೇಯಿ. .!
ಸಾಧಕರು ಹೇಗೆ ಸಾವನ್ನಪ್ಪಿದರು ಎಂಬುದಕ್ಕಿಂತಾ ಹೇಗೆ ಬದುಕಿದ್ದರು ಎಂದು ಬರೆಯುವುದು ಸೂಕ್ತ ಎಂದು ಕೊಳ್ಳುತ್ತೆನೆ.ಒಬ್ಬ ಮನುಷ್ಯ ಹೇಗೆ ಬದುಕಬೇಕೆಂಬುದಕ್ಕೆ ಉತ್ತಮ ಉದಾಹರಣೆ ಎಂದರೇ ಅದು ಅಟಲ್ ಬಿಹಾರಿ ವಾಜಪೇಯಿ.ಅವರ ಬದುಕಿನ ಪ್ರತಿ ಹಂತವೂ ಒಂದೊಂದು ಸಾಧನೆಯ ಶಿಖರಗಳು.
ಮನುಷ್ಯ ಎನೇನನ್ನೋ ಸಾಧಿಸಲು ಹೋಗುತ್ತಾನೆ,ಎನೇನೆಲ್ಲಾ ಆಗಬೇಕೆಂದು ಹೋರಾಡುತ್ತಾನೆ.ಹುದ್ದೆ ಅಧಿಕಾರಗಳನ್ನ ತನ್ನದಾಗಿಸಿಕೊಳ್ಳಬೇಕೆಂದು ಶ್ರಮಿಸುತ್ತಾನೆ.ಎಲ್ಲವನ್ನೂ ಸಾಧಸಿ ಸಿಂಹಾಸನವನ್ನೂ ಏರಬಹುದು.ಆದರೇ ಅವನು ಮನುಷ್ಯನಾಗೇ ಉಳಿದಿರುವುದಿಲ್ಲಾ.ತನ್ನಲ್ಲಿನ ಮನುಷ್ಯತ್ವವನ್ನ ಕಳೆದುಕೊಂಡು ಮಿಕ್ಕೆಲ್ಲಾದನ್ನೂ ಪಡೆದುಕೊಳ್ಳುತ್ತಾನೆ.ನಾವು ಗಾಳಿಯನ್ನ ಸೇವಿಸುತ್ತೆವೆ.ಬಿಸಿಲನ್ನು ನೋಡುತ್ತೆವೆ. .ಇಡೀ ಪ್ರಕೃತಿಯನ್ನ ನೋಡುತ್ತೆವೆ.ಆದರೇ ಅಪ್ಪಟ ಮನುಷ್ಯನನ್ನು ನೋಡುವುದು ವಿರಳ ಅಂತಹಾ ಅಪ್ಪಟ ಮನುಷ್ಯರೇ ಇವರು. .!
ಅಟಲ್ ಬಿಹಾರಿ ವಾಜಪೇಯಿ. . !

atal bihari vajpayee
atal bihari vajpayee

ನಿಮಗೊಂದು ವಿಷಯ ಹೇಳಿದ್ರೆ ಆಶ್ಚರ್ಯವಾಗುವುದು ಖಚಿತ.ಐವತ್ತು ವರ್ಷಗಳ ಸುಧೀರ್ಘ ರಾಜಕಾರಣವನ್ನ ಮಾಡಿದ್ದರೂ ಸಹಾ ಅವರು ಅವರಿಗೆಂದು ಒಂದು ಸ್ವಂತ ಮನೆಯನ್ನ ಮಾಡಿಕೊಂಡಿರಲಿಲ್ಲ.ಸಂಸತ್ ಭವನದ ಮೇಲೆ ಉಗ್ರರು ಗುಂಡು ಹಾರಿಸಿದಾಗ. ಅಲ್ಲೆ ಓಳಗಿದ್ದ ವಾಜಪೇಯಿಯವರು ಮಾಡಿದ ಮೊದಲ ಕೆಲಸವೆಂದರೇ,ಅವರು ಸೋನಿಯಾಗಾಂಧಿಯವರಿಗೆ ಫೋನ್ ಮಾಡಿ ನೀವು ಮನೆ ತಲುಪಿದ್ರ ಎಂದು ಕೇಳಿದ್ದರು.ಯಾಕೆಂದರೇ ಆಗ ತಾನೇ ಸೋನಿಯಾ ಗಾಂಧಿ ಅಲ್ಲಿಂದ ಹೊರಟಿದ್ದರು.
ಸಂಸತ್ ಭವನವೇ ದೇಗುಲ. .!
ನಮ್ಮ ಸಂಸತ್ ಭವನ ನಮ್ಮ ದೇಶದ ಬಹುಮುಖ್ಯ ಕೇಂದ್ರ,ಯಾಕೆಂದರೇ ದೇಶದ ಆಗು ಹೋಗುಗಳಿಗೆ ಮುಕ್ಯ ಕೇಂದ್ರವೇ ಸಂಸತ್ ಭವನ.ಅಂತಹಾ ಸಂಸತ್ ಭವನವನ್ನ ವಾಜಪೇಯಿಯವರು ದೇವಾಯದಂತೆ ಬಾವಿಸುತ್ತಿದ್ದರು.ಅವರು ಮಂಡಿಸುತ್ತಿದ್ದ ವಿಚಾರಗಳನ್ನ ಪಕ್ಷಾತೀತವಾಗಿ ಎಲ್ಲರೂ ತದೇಕಚಿತ್ತದಿಂದ ಕೇಳುತ್ತಿದ್ದರು.
ವಾಜಪೇಯಿಯವರ ರಾಜಕೀಯ ಸಂಚಾರದ ಪಕ್ಷಿ ನೋಟ. .!
• ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1968 ಹಾಗೂ 1973ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು. ಶ್ರೀ ವಾಜಪೇಯಿ ಯವರು ಲೋಕಸಭೆಗೆ 1957ರಲ್ಲಿ ಮೊದಲು ಆಯ್ಕೆಯಾದರು. [೪]1977ರಲ್ಲಿ ಜನತಾ ಪಕ್ಷ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು.
• ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ 1977 ರಿಂದ ಜುಲೈ 1979 ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು.
• ಬಿಜೆಪಿಯ ಸಂಸದೀಯ ನಾಯಕರಾಗಿ ವಾಜಪೇಯಿಯವರು 1980ರಿಂದ 1984 ರವರೆಗೆ ಹಾಗೂ 1986 ರಿಂದ 1993 ಮತ್ತು 1996ರಲ್ಲಿ ಕಾರ್ಯ ನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ನಂತರ ಪಂಡಿತ ಜವಹಾರಲಾಲ್ ನೆಹರು ಹಾಗೂ ಇಂದಿರಾ ಗಾಂಧಿ ನಂತರ ಈ ದೇಶದ ಜನಮಾನಸವನ್ನು ಅಷ್ಟೊಂದು ವ್ಯಾಪಕವಾಗಿ ಮುಟ್ಟಿದ, ತಟ್ಟಿದ ಮತ್ತೊಬ್ಬ ವ್ಯಕ್ತಿಯಿದ್ದರೆ ಅವರು ವಾಜಪೇಯಿ.
ಪ್ರಧಾನಮಂತ್ರಿಯಾಗಿ ಮೊದಲ ಕಾರ್ಯಾವಧಿ
• 1996ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರ ಹೊಮ್ಮಿತು. 519 ಸೀಟುಗಳ ಪೈಕಿ ಬಿ ಜೆ ಪಿ 187 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ 140 ಹಾಗು ಬಿ ಜೆ ಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿ ಜೆ ಪಿ ಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು.
• ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿ ಜೆ ಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿ ಜೆ ಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು.
• ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ H.D.ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು.
atal bihari vajpayee
atal bihari vajpayee

ಪ್ರಧಾನಮಂತ್ರಿಯಾಗಿ ಎರಡನೇ ಕಾರ್ಯಾವಧಿ
• 1998 ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿ ಜೆ ಪಿ ಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನ ಮನಸ್ಕ ಪಕ್ಷಗಳ ಒಡಗೂಡಿ ಎನ್ ಡಿ ಎ ಮೈತ್ರಿ ಕೂಟ ರಚಿಸಿತು.ಮೈತ್ರಿ ಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು.
• ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು. ಎನ್ ಡಿ ಎ ಮೈತ್ರಿ ಕೂಟದಲ್ಲಿದ್ದ ಒಂದು ಮುಖ್ಯ ಪಕ್ಷ ತಮಿಳುನಾಡಿನ ಎ ಐ ಎ ಡಿ ಎಂ ಕೆ. 1999 ರಲ್ಲಿ ಬಿ ಜೆ ಪಿ ಪಕ್ಷವು ಜಯಲಲಿತಾ ಕೆಲವು ಭ್ರಷ್ಟಾಚಾರ ಸಂಬಂಧಿ ದೂರುಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳಲು ಹವಣಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿತು. ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಪತನವಾಗುವಂತಹ ಯಾವ ಒಪ್ಪಂದಗಳಿಗೂ ಅವಕಾಶವಿಲ್ಲ ಎಂದಿತು.
• ಕೂಡಲೇ ಜಯಲಿತಾ ಸರ್ಕಾರಕ್ಕೆ ಕೊಟ್ಟಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳ ಸಂಖ್ಯೆಯನ್ನು ವಾಜಪೇಯಿ ಸರ್ಕಾರ ಹೊಂದಿಲ್ಲದ ಕಾರಣ ವಿಶ್ವಾಸ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಲಾಯಿತು. ಆದರೆ ವಿಶ್ವಾಸ ಮತಗಳಲ್ಲಿಯೂ ಅವಶ್ಯ ಸಂಖ್ಯೆಯನ್ನು ತಲುಪಲು ಸಾಧ್ಯವಾಗದ ಕಾರಣ ವಾಜಪೇಯಿ ಸರ್ಕಾರ ಪತನವಾಯಿತು.
• ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚಿಸಲು ಸಾಧ್ಯವಾದ ಪಕ್ಷದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡಲು ಸೂಚಿಸಿದರು, ಆದರೆ ಕಾಂಗ್ರೆಸ್ ಪಕ್ಷವು ಬಹುಮತಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿತು.
• ಯಾವ ಪಕ್ಷಗಳಿಗೂ ಬಹುಮತವಾಗದ ಕಾರಣ ಹನ್ನೆರಡನೆ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದರು. ಹಾಗೂ ಮುಂದಿನ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾಗುವ ವರೆವಿಗೂ ವಾಜಪೇಯಿ ಕಾರ್ಯ ನಿರ್ವಾಹಕ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು.
ದೇಶ ಕಂಡ ಅಪರೂಪ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ ನಮ್ಮ ಇತಿಹಾಸದ ಪುಟಗಳಲ್ಲಿ ಇತಿಹಾಸವಾಗಿ ಉಳಿಯುತ್ತಾರೆ,

Please follow and like us:
0

Leave a Comment