RA NEWS:-ಪದವೀಧರರ ಕ್ಷೇತ್ರದಲ್ಲಿ ರಾರಾಜಿಸುತ್ತಿರುವ ರಾಮೋಜಿ ಗೌಡ. . . !

ಪದವೀಧರರ ಕ್ಷೇತ್ರದಲ್ಲಿ ರಾರಾಜಿಸುತ್ತಿರುವ ರಾಮೋಜಿ ಗೌಡ. . . !
ಹದಿನಾಲ್ಕು ವರ್ಷಗಳಿಂದ ಶಿಕ್ಷಕರ ಹಾಗು ನೌಕರರ ಸಂಘಟನೆಗಳ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಯಾಗಿ ಸೇವೆ ಸಲ್ಲಿಕೆ,ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿದಾಯಕ ಬದಲಾವಣೆಗಾಗಿ ಸತತ ಪರಿಶ್ರಮ,ದೀನ ದಲಿತರ,ಶೋಷಿತರ ಹಾಗು ಅಸಹಾಯಕರಿಗೆ ನೆರವಾಗುವ ಹಂಬಲ. . . .ಇದಿಷ್ಟೂ ಸೇರಿದರೇ ರೂಪ ಗೊಳ್ಳುವ ವ್ಯಕ್ತಿಯೇ. .!
ರಾಮೋಜಿ ಗೌಡ. . !

Ramoji Gowda
Ramoji Gowda

ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ರಾಮೋಜಿ ಗೌಡರವರು ಬಿರುಸಿನಿಂದ ಓಡಾಡುತ್ತಿದ್ದಾರೆ.ಹಲವೆಡೆ ಪದವೀಧರರ ಗುಂಪುಗಳು ಅವರನ್ನ ಬರಮಾಡಿಕೊಂಡು ಪದವೀಧರರ ಸಮಗ್ರ ಸಮಸ್ಯಗಳ ಬಗ್ಗೆ ಚರ್ಚಿಸುತ್ತಿದ್ದಾರೆ.ಎಲ್ಲದಕ್ಕೂ ಸ್ಪಂಧಿಸಿ ಎಲ್ಲರೊಂದಿಗೂ ಸೌಜನ್ಯದಿಂದ ಸಾಗುತ್ತಾ ಮತ ಯಾಚಿಸುತ್ತಿರುವವರು ರಾಮೋಜಿ ಗೌಡ.
ಪದವೀಧರರ ಕ್ಷೇತ್ರದ ಬಗ್ಗೆ ಅಲ್ಲಿನ ಚುನಾವಣೆಯ ಬಗ್ಗೆ ರಾಮೋಜಿ ಗೌಡ ರವರಿಗೆ ಸಾಕಷ್ಟು ಅನುಭವ ಆಗಿದೆ ಆ ಕೂರಿತು ಅವರು ಹೇಳುವುದು ಹೀಗೆ. . .” ಈ ಹಿಂದೆ ನಾನು ಕೇವಲ ಮುನ್ನೂರು ಓಟುಗಳಿಂದ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸೋತರೂ ನಮ್ಮದೆ ಕಾಂಗ್ರೆಸ್ ಸರಕಾರವಿದ್ದಾಗ ಅನೇಕ ಕೆಲಸಕಾರ್ಯಗಳನ್ನು ಮಾಡುವುದರ ಮೂಲಕ ನಿರಂತರವಾಗಿ ನಿಮ್ಮಜೊತೆಯಲ್ಲಿದ್ದೇನೆ.ಸ್ಪರ್ಧೆಗಿಳಿದ ಅನೇಕರು ನೀವೆ ಸೂಕ್ತ ವ್ಯಕ್ತಿ ಎಂದು ತಮ್ಮ ನಾಮಪತ್ರಗಳನ್ನು ಸುಲಭಮಾಡಿಕೊಟ್ಟಿರುವುದು ನಿಜಕ್ಕೂ ನನ್ನ ಗೆಲುವಿಗೆ ಅವರೆಲ್ಲರ ಸಹಕಾರವನ್ನು ಸ್ವಾಗತಿಸುತ್ತೇನೆ.”
ಕೆಲವು ವ್ಯಕ್ತಿಗಳು ಸೋಲು ಕಂಡಾಗ ಕುಗ್ಗಿ ಸ್ವರಗಿ ಹೋಗುತ್ತಾರೆ,ಆದರೇ ರಾಮೋಜಿ ಗೌಡರು ಹಾಗಲ್ಲಾ ಅವರು ಸೋಲೇ ಗೆಲುವಿನ ಮೆಟ್ಟಿಲು ಎಂದು ಮುಂದೆ ಸಾಗುತ್ತಾರೆ ಈ ವಿಚಾರವಾಗಿ ಅವರು ಹೇಳುವುದು ಹೀಗೆ. . . .. ” ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಪದವೀಧರರ ಪರವಾಗಿ ಅಧ್ಯಯನ ಮಾಡಿ ನಾನು ಗೆದ್ದ ಮೇಲೆ ಏನು ಮಾಡಬೇಕು ಎಂಬ ಕಲ್ಪನೆಯೊಂದಿಗೆ, ಹಿಂದೆ ಸೋತಾಗ ನಾನು ಮಾಡಿದ ದೋಷಗಳನ್ನು ಸಮಗ್ರವಾಗಿ ಆರುವರ್ಷಗಳ ಕಾಲ ಪರಿಶೀಲನೆಗೊಳಪಡಿಸಿ ಈಗ ಎರಡನೆಯ ಬಾರಿ ಗೆಲುವಿನ ಹೆಜ್ಜೆಗೆ ಮುಂದಾಗಿರುವೆ.”
Ramoji Gowda
Ramoji Gowda

ಬೆಂಗಳೂರು ಪದವೀಧರರ ಕ್ಷೇತ್ರ ಹಬ್ಬಿ ಹರಡಿ ನಗರವನ್ನ ಮೀರಿ ಗ್ರಾಮಾಂತರದ ಗಡಿ ಮುಟ್ಟಿದೆ ಈ ಅಲ್ಪ ಕಾಲದಲ್ಲಿ ಇಡೀ ಕ್ಷೇತ್ರದ ಸಂಚಾರ ಕಷ್ಟವೆ ಈ ನಿಟ್ಟಿನಲ್ಲಿ ರಾಮೋಜಿ ಗೌಡರು ಮಾತನಾಡುತ್ತಾ. . . . ” 36 ವಿಧಾನ ಸಭಾಕ್ಷೇತ್ರಗಳನ್ನು ಸುತ್ತಾಡುವುದು ದುಸ್ತರವೆಂದು ಭಾವಿಸಿ ಈಗ ನಾನು ಒಂದು ತಾಲೂಕು ಕ್ಷೇತ್ರದಲ್ಲಿ ಸಮರ್ಥ ಮುಖಂಡರು ಸಾಮಾನ್ಯ ಸದಸ್ಯರ ಭೇಟಿ ಮಾಡಿ ಮತಯಾಚನೆ ಮಾಡುತ್ತಿರುವೆ.”
ಗೋಲ್ಡನ್ ಬ್ರೀಜ್ ಸಭಾಂಗಣದಲ್ಲಿ ಪದವೀಧರರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಅಲ್ಲಿ ನೆರೆದ ಜನರನ್ನ ನೋಡಿ ರಾಮೋಜಿ ಗೌಡರಿಗೆ ಸಂತಸವಾಯಿತು ಮಾತ್ರವಲ್ಲ ಅವರ ಗೆಲುವಿನ ನಿರೀಕ್ಷೆಯೂ ಹೆಚ್ಚಾಯಿತು.ಆ ಸಂದರ್ಭದಲ್ಲಿ ಅವರ ಪರವಾಗಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದ ಮತದಾರರನ್ನು ಉದ್ಧೇಶಿಷಿ ಮಾತನಾಡಿದರು. .” ಈ ಬಾರಿಯ ವಿಶೇಷವೆಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಇತರೆ ಪಕ್ಷಗಳ ಮುಖಂಡರು ಬೆಂಬಲಿಸುತ್ತಿರುವುದು ನಾನು ಗೆಲುವು ಸಾಧಿಸುವ ವಿಶ್ವಾಸವನ್ನು ಹೊಂದಿರುವೆ. ನಿರೀಕ್ಷೆಗೆ ಮೀರಿ ಇಲ್ಲಿ ಭಾಗವಹಿಸಿರುವ ಮತದಾರರು ಇದಕ್ಕೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.”
ಕಾಂಗ್ರೆಸ್ ಮುಖಂಡ ಡಿಸಿ ಶಿವಣ್ಣ,ಮಾಡಬಾಳ್ ಸಿ.ಜಯರಾಮು,ಪ್ರಾರ್ಥಮಿಕ ಶಾಲಾ ರಾಜ್ಯ ಸಂಘದ ಉಪಾಧ್ಯಕ್ಷ ಮಾಡಬಾಳ್ ಕೆಂಪೇಗೌಡ,ಶಿಕ್ಷಕರ ಪ್ರತಿನಿಧಿಗಳಾದ ಕೆ.ಪಿ.ರಂಗಸ್ವಾಮಿ,ಬಿಎನ್.ಜಯರಾಮು,ಮಣಿಗನಹಳ್ಳಿ ನರಸಿಂಹಮೂರ್ತಿ,ಚಿಕ್ಕವೀರಯ್ಯ,ನಿವೃತ್ತ ಮುಖ್ಯಶಿಕ್ಷಕ ವೆಂಕಟೇಶಮೂರ್ತಿ,ಪ್ರೌಢಶಾಲಾ ಮುಖ್ಯಶಿಕ್ಷಕರಸಂಘದ ಕುದೂರು ಎಂ.ಎಸ್.ನಾಗರಾಜು, ಯುವಮುಖಂಡರಾದ ಮರೂರುಸಾಗರಗೌಡ,ಕನ್ನಸಂದ್ರವೆಂಕಟೇಶ್,ಮಾದಿಗೊಂಡನಹಳ್ಳಿ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಚೇಗೌಡ,ಬಸವನಗುಡಿಪಾಳ್ಯಸೋಮಯ್ಯ,ಹೊಸಪಾಳ್ಯ ಶ್ರೀನಿವಾಸ್,ಗಂಗಮಾರೇಗೌಡ,ತಿಪ್ಪಸಂದ್ರ ಹರೀಶ್,ತಟವಾಳು ರಾಜು,ದೇವರಾಜ್ವೆಂಗಕಟೇಶ್ ಪ್ರಮುಖವಾಗಿ ಭಾಗವಹಿಸಿದ್ದರು.

Please follow and like us:
0

Leave a Comment