RA NEWS:-ಕರ್ನಾಟಕ ಬಂದ್ ಇಲ್ಲ, ಕಮಲಾ ಹಾಸನ್. . . ರಜನಿಕಾಂತ್ ಚಿತ್ರಗಳಿಗೆ ಬಹಿಷ್ಕಾರ. . .!

ಕರ್ನಾಟಕ ಬಂದ್ ಇಲ್ಲ, ಕಮಲಾ ಹಾಸನ್ ರಜನಿಕಾಂತ್ ಚಿತ್ರಗಳಿಗೆ ಬಹಿಷ್ಕಾರ. . .!
ಎಪ್ರಿಲ್ ಹನ್ನೆರೆಡರಂದು ಕರೆ ನೀಡಿದ್ದ ಕರ್ನಾಟಕ ಬಂದ್ ಮುಂದೂಡಲಾಗಿದೆ ಎಂದು ಕನ್ನಡ ಓಕ್ಕೂಟ ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ.ಬಂದ್ ಬಗ್ಗೆ ಕೆಲವರು ಬೇಸರ ವ್ಯಕ್ತ ಪಡಿಸಿದ್ದು ಇನ್ನು ಕೆಲವರು ಕೋರ್ಟ್ ಮೆಟ್ಟಿಲು ಸಹಾ ಏರಿದ್ದರು.ಕಾವೇರಿ ನಿರ್ವಾಹಣಾ ಮಂಡಳಿ ರಚನೆಯಾಗಲ್ಲೇ ಬೇಕು ಅಂತ ತಮಿಳುನಾಡು ಪಟ್ಟು ಹಿಡಿದಿದೆ.ಇತ್ತಿಚೆಗೆ ತಮಿಳು ನಾಡು ಬಂದ್ ಕೂಡಾ ಮಾಡಿದ್ದರು.ಅಲ್ಲಿ ಎಲ್ಲಾ ಕಲಾವಿದರೂ ಬಂದ್ ಗೆ ಬೆಂಬಲ ನೀಡಿದ್ದರು.

kannada chaluvali
kannada chaluvali

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಕಮಲಾ ಹಾಸನ್ ಮತ್ತು ರಜನಿಕಾಂತ್ ತಮ್ಮದೇ ಪಕ್ಷಗಳನ್ನ ಮಾಡುತ್ತಿದ್ದಾರೆ.ತಮಿಳುನಾಡಿನ ಪರ ಕಾವೇರಿ ಹೋರಾದಲ್ಲಿ ಪಾಲ್ಗೊಂಡಿದ್ದಾರೆ.ಇಲ್ಲಿ ಅವರ ಚಲನಚಿತ್ರಗಳಿಗೆ ಬಹಿಷ್ಕಾರವನ್ನ ಹಾಕುತ್ತೆವೆ,ಯಾವುದೇ ವಿತರಕರು ಅವರ ಚಿತ್ರಗಳನ್ನ ವಿತರಣೆ ಮಾಡಬಾರದು.ಯಾವ ಚಿತ್ರಮಂದಿರಗಳೂ ಪ್ರದರ್ಶನ ಮಾಡಬಾರದು.ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಮೇ ಮೂರರವರೆಗೆ ಗಡುವು ನೀಡಿ ಕರಡು ವಿಚಾರವನ್ನ ನಾಲ್ಕೂ ರಾಜ್ಯದೊಂದಿಗೆ ಚರ್ಚಿಸಿ ನೀಡುವಂತೆ ಹೇಳಿದೆ.ಆ ಕಾರಣಕ್ಕೆ ಕರ್ನಾಟಕ ಬಂದ್ ಮುಂದೂಡಲಾಗಿದೆ ಆದರೆ ರಾಜಭವನ ಮುತ್ತಿಗೆ ಚಳವಳಿಯನ್ನ ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.ಪತ್ತಿಕಾಗೊಷ್ಟಿಯಲ್ಲಿ ವಾಟಾಳ್ ನಾಗರಾಜ್,ಸಾ ರಾ ಗೋವಿಂದು,ಗಿರೀಶ್ ಗೌಡ,ಕನ್ನಡಸೇನೆ ಕುಮಾರ್,ಸತೀಶ್,ವೆಂಕಟೇಶ್ ಮುಂತಾದವರಿದ್ದರು.
ಮೇ ಮೂರರ ನಂತರ ಕಾವೇರಿ ವಿವಾದ ಯಾವ ಹಂತಕ್ಕೆ ಬಂದು ನಿಲ್ಲುತ್ತೋ ಕಾದು ನೋಡಬೇಕಿದೆ.

Please follow and like us:
0

Leave a Comment