RA NEWS :-ಕಾರ್ಗಿಲ್ ವೀರ ಕರ್ನಲ್ ರವೀಂದ್ರನಾಥ್ ನಿಧನ. .! ಅವರ ಹಳೆಯ ಯುದ್ಧದ ಅನುಭವದ ಸಂದರ್ಶನ ಇಲ್ಲಿದೆ ಓದಿ. ..!

ಕಾರ್ಗಿಲ್ ವೀರ ಕರ್ನಲ್ ರವೀಂದ್ರನಾಥ್ ನಿಧನ. .! ಅವರ ಹಳೆಯ ಯುದ್ಧದ ಅನುಭವದ ಸಂದರ್ಶನ ಇಲ್ಲಿದೆ ಓದಿ. ..!
ನಿಜಕ್ಕೂ ಅವರು ವೀರ ಸೇನಾನಿ. ಕಾರ್ಗಿಲ್ ಯುದ್ಧದಲ್ಲಿ ಟೈಗರ್ ಹಿಲ್ಸ್ ನ ಧೈರ್ಯದಿಂದ ಪ್ರಾಣದ ಹಂಗನ್ನು ತೊರೆದು ಏರಿದ ಪಡೆಯನ್ನ ಲೀಡ್ ಮಾಡಿದ್ದು ಇದೇ ರವೀಂದ್ರನಾಥ್ ರವರು.ಇಂದು ಅವರು ಹೃಯಾಘಾತದಿಂದ ನಿಧನ ಹೊಂದಿದ ಸುದ್ಧಿ ಬಂದಿದೆ ನಿಜಕ್ಕೂ ಇದು ದುರಂತ.
ಅವರ ಅಂದಿನ ಯುದ್ಧದದ ಅನುಭವದ ಬಗ್ಗೆ ಬಹು ಹಿಂದೆ ಸಂದರ್ಶನ ಮಾಡಿದ್ದೆ ಆ ಲೇಖನ ಇಲ್ಲಿದೆ ಓದಿ. ..!

colonel ravindranath
colonel ravindranath

ಕರ್ನಲ್ ರವೀಂದ್ರನಾಥ್
“ಸಾರ್..ನಮಸ್ಕಾರ’’ಅಂದೆ
ಅವರು ಕೈ ಕುಲುಕಿ..ಕುಳಿತುಕೊಳ್ಳಲು ಹೇಳಿದರು. ಅವರ ಅಮೃತ ಹಸ್ತವನ್ನ ಮುಟ್ಟಿದಾಗ ನನ್ನಲ್ಲಿ ಏನೋ ಸಂಚಲನ. ಯಾಕೆಂದರೇ ಅವರ ಅದೇ ಕೈಗಳಲ್ಲವೇ ಟೋಲೋಲಿಂಗ್ ಪರ್ವತ ಶಿಖರವನ್ನೇರಿದ್ದು. 14 ವರ್ಷಗಳ ಹಿಂದೆ ಇವರು ಒಂದು ದೊಡ್ಡ ಸೈನ್ಯವನ್ನ ಲೀಡ್ ಮಾಡಿದ್ದರು. ಉಡದಂತೆ ಪರ್ವತವನ್ನೇರಿದ್ದರು. ಚಿರತೆಯಂತೆ ಜಿಗಿದಿದ್ದರು. ಹದ್ದಿನಂತೆ ಶತ್ರುಗಳನ್ನ ಹುಡುಕಿದ್ದರು. ಸಾವಿನ ಸಂಕೇತದಂತೆ ಶತ್ರುಗಳ ಗುಂಡುಗಳು ಅವರ ಸಮೀಪವೇ ಸಾಗಿ ಹೋಗಿವೆ. ಆಕಸ್ಮಿಕವಾಗಿ ಸಹಜವಾಗಿ ಬಗ್ಗಿ ಮಾತನಾಡಿದಾಗ ಅವರ ತಲೆಯ ಸಮೀಪವೇ ಕೆಲವೇ ಇಂಚುಗಳಲ್ಲಿ ಗುಂಡುಗಳು ನುಗ್ಗಿವೆ. ಅವರು ರಣರಂಗವೆಂಬ ಸಾವಿನಾಟದಲ್ಲಿ ಗೆದ್ದು ಬಂದಿದ್ದಾರೆ ಅಂತಹವರ ಪಕ್ಕದಲ್ಲಿ ಕುಳಿತು ಮಾತನಾಡುವುದು ಒಂದು ಪುಣ್ಯ..!
ಕರ್ನಲ್ ರವೀಂದ್ರನಾಥ್..!
ಕಾರ್ಗಿಲ್ ಕದನ ಇದು ಭಾರತ-ಪಾಕಿಸ್ತಾನಗಳ ನಡುವೆ ನಡೆದ ನಾಲ್ಕನೇ ಯುದ್ಧ. ಇದು ಭಾರತದ ಇತಿಹಾಸಲ್ಲಿ ಮರೆಯಲಾಗದ ಯುದ್ಧ ಯುದ್ಧದ ತೀವ್ರತೆ ಹೇಗಿತ್ತೆಂದರೆ ಆಗ ಅಂದರೇ 1999ರಲ್ಲಿ ಅಂದಿನ ಪ್ರಧಾನಿಗಳಾಗಿದ್ದ ವಾಜಪೇಯಿಯವರು ಕುದ್ದು ಯುದ್ಧ ಕ್ಷೇತ್ರಕ್ಕೆ ಬಂದು ಹೋಗಿದ್ದರು. ಕಾರ್ಗಿಲ್ ವಲಯದ ಆ ಯುದ್ಧದಲ್ಲಿ ಕರ್ನಲ್ ರವೀಂದ್ರನಾಥ್ರ್ವರದು ಬಹು ದೊಡ್ಡ ಪಾತ್ರ. ಯುದ್ಧ ತಂತ್ರಗಾರಿಕೆಯಲ್ಲಿ ಅವರು ತೋರಿದ ನೈಪುಣ್ಯತೆ ತಂಡಗಳನ್ನ ಸಜ್ಜುಗೊಳಿಸಿದ ರೀತಿ, ಶತ್ರುಗಳ ಸಂಚನ್ನ ನುಚ್ಚುನೂರು ಮಾಡಿದ ಚಾಣಾಕ್ಷತನ, ಸಹಪಾಠಿ ಸೈನಿಕರೊಂದಿಗೆ ಸಮರ ಸಾರಿ ಪರಾಕ್ರಮ ಮೆರೆದ ದಿರೋದ್ಧತನ..ಹೀಗೆ ಒಂದಾ ಎರಡಾ..ಅವರ ಯುದ್ಧದ ಅನುಭವ ರೋಮಾಂಚನ ದಿನದ ಕಥೆಗಳೆಲ್ಲಾ ಕ್ಷಣ ಕ್ಷಣದ ಪರಸ್ಥಿತಿಗಳ ದಿನಚರಿಗಳು ಅನೇಕ ಆ ಬಗ್ಗೆ ಬರೆಯುವ ಮೊದಲು ಕರ್ನಲ್ ರವೀಂದ್ರನಾಥ್ ರವರ ಶಿಕ್ಷಣ ಮತ್ತು ಸೇನಾ ತರಬೇತಿಗಳ ಬಗ್ಗೆ ಒಂದು ಅವಲೋಕನ.
ದಾವಣಗೆರೆಯ ಹರಿಹರ ತಾಲೋಕು ಹೊಳಸಿರಿಗೆರೆ ಗ್ರಾಮದ ಮಾಗೋಡು ಬಸಪ್ಪ ಮತ್ತು ಸರೋಜಮ್ಮನವರ ಹಿರಿಯ ಪುತ್ರ ರವೀಂದ್ರನಾಥ್ 4ನೇ ತರಗತಿಯವರೆಗೆ ದಾವಣಗೆರೆಯಲ್ಲಿ ಓದಿ..ಆನಂತರ ಬಿಜಾಪುರದ ಸೈನಿಕ ಶಾಲೆಗೆ ಸೇರಿದರು. ಶಾಲೆಯಲ್ಲಿ ಬಂದು ಹೋಗುತ್ತಿದ್ದ ಮಿಲಿಟರಿ ಅಧಿಕಾರಿಗಳನ್ನ ಗಮನಿಸುತ್ತಾ ಬೆಳೆದ ರವೀಂದ್ರನಾಥ್ ಆ ಅಧಿಕಾರಿಗಳ ನಡೆ ನುಡಿ..ಹಾವಾಬಾವಗಳಿಂದ ಪ್ರೇರಿತವಾದರು.
kargil
kargil

ಲಾಲ್ಬರಹದ್ದೂರ್ ಶಾಸ್ತ್ರಿ..!
ಪಿ.ಯು.ಸಿ ಮುಗಿಸಿ.ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾದ ರವೀಂದ್ರನಾಥ್ರಡವರು ಪೂಣೆಯ ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ತಲಸೈನ್ಯ ವಿಭಾಗದಲ್ಲಿ ಮೂರುವರ್ಷ ತರಭೇತಿ ಪಡೆದರು. ಆನಂತರ ಡೆಹರಾಡ್ಯೂನ್ನ ಇಂಡಿಯನ್ ಮಿಲಿಟರಿ ಅಕಾಡಮಿಯಲ್ಲಿ 1 ವರ್ಷವಿದ್ದರು 1980ಕ್ಕೆ ರವೀಂದ್ರನಾಥ್ರಭವರು ಸ್ವೀಕರಿಸಿದ ಪ್ರಥಮ ಹುದ್ದೆ ಎಂದರೇ ಸೆಕೆಂಡ್ ಲೆಫ್ಟಿನೆಂಟ್ ಅರುಣಾಚಲ ಪ್ರದೇಶದಲ್ಲಿ ಮೂರು ವರ್ಷ ಹೈದರಾಬಾದ್ನಸಲ್ಲಿ 2 ವರ್ಷ ಪೂರೈಸಿದಾಗ..ದೆಹಲಿಯ 21 ರಾಜಪುತಾನ್ ರೈಫಲ್ಸ್ನ್ಲ್ಲಿ ಕಾರ್ಯನಿರ್ವಹಿಸಿದರು. 1986ರಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಬ್ಯಾಟಲಿಯನ್ ಕ್ಯಾಪ್ಟನ್ ಆಗಿ ಒಂದು ವರ್ಷವಿದ್ದು ಆನಂತರ ಮಧ್ಯಪ್ರದೇಶದ ಇನ್ಫೆಂ ಟರಿ ಶಾಲೆಯಲ್ಲಿ 2 ವರ್ಷ ಶಿಕ್ಷಕರಾಗಿದ್ದರು 1989ಕ್ಕೆ ಮರಳಿ ಶ್ರೀನಗರಕ್ಕೆ ಬಂದರು 2 ವರ್ಷವಿದ್ದು ಮತ್ತೆ ಜಲಂಧರ್ನಆ ಡಿಫೆನ್ಸ್ ಸ್ಟ್ಯಾಫ್ಕಾ ಲೇಜ್ಗೆ ಬಂದು ಊಟಿಯ ವೆಲಿಂಗ್ಟ್ನ್ನವಲ್ಲಿ ತರಬೇತಿ ಪಡೆದರು..ಅಲ್ಲಿ ತೇರ್ಗಡೆಯಾಗಿ 1992ರಲ್ಲಿ ಮಧ್ಯಪ್ರದೇಶದ ಮಾಹೂವಿನಲ್ಲಿ ವಾರ್ ಗೇಮ್ ಸೆಷನ್ಗೆ. ಸೇರಿದರು. ಅಲ್ಲಿ ಯುದ್ಧ ತಂತ್ರಗಾರಿಕೆಗಳ ತರಬೇತಿ ಪಡೆದರು ಆಧುನಿಕ ತಂತ್ರಜ್ಞದ ಯುದ್ಧ ನೀತಿಗಳನ್ನ ಕರಗತ ಮಾಡಿಕೊಂಡರು..ಯುದ್ಧದಲ್ಲಿ ದಳಗಳನ್ನ ರಚಿಸುವುದರಿಂದ ಹಿಡಿದು ರಣರಂಗದ ಶತ್ರುಗಳನ್ನ ಸೆದೆ ಬಡಿಯಲು ಹೇಗೆ ತಂಡಗಳನ್ನ ಸಜ್ಜು ಗೊಳಿಸಬೇಕೆಂಬುದರಲ್ಲಿಯ ತನಕ ಎಲ್ಲಾ ರೀತಿಯ ವಾರ್ ಸ್ಟ್ಯಾಟಜಿಗಳನ್ನ ಕಲಿತರು. 1994ರಲ್ಲಿ ಮತ್ತೆ ಕಾಶ್ಮೀರಕ್ಕೆ ಬಂದರು ಅಲ್ಲಿ ಕುಪಾಡ ಜಿಲ್ಲೆಯಲ್ಲಿ 19 ರಾಷ್ಟ್ರಿಯ ರೈಫೆನ್ಸ್ ಎಂಬ ಹೊಸ ತಂಡದ ಆರಂಭವಾಗಿತ್ತು. ಇಲ್ಲಿ ವಿಶೇಷವಾದ ತರಬೇತಿ ಆರಂಭವಾಗಿತ್ತು ಪ್ಯಾಟ್ರೋಲಿಂಗ್,ಆ್ಯಂಬುಷನ್ಗಗಳನ್ನು ಒಳಗೊಂಡ ಅನೇಕ ಆಪರೇಶನ್ಸ್ಗಭಳ ತರಬೇತಿ ನಡೆಯಿತು. 1997ರ ನಂತರ ಬೆಂಗಳೂರಿನ ಟ್ರಾನ್ಪೊೇರ್ಟ್ ಮ್ಯಾನೆಜ್ಮೆಂವಟ್ ಶಾಲೆಯಲ್ಲಿ ಹಿರಿಯ ಶಿಕ್ಷಕರಾಗಿ ಸೇವೆ ಸಲ್ಲಿಸಿದರು ಒಂದು ವರ್ಷದ ನಂತರ ಗ್ವಾಲಿಯರ್ನತಲ್ಲಿದ್ದ 2 ರಜಪುತಾನ್ ರೈಫಲ್ಸ್ನಲ ಕಮ್ಯಾಂಡರ್ ಆದರು. 1999ರ ಫೆಬ್ರವರಿಯಲ್ಲಿ ಭಾರತ ಪಾಕಿಸ್ತಾನದ ನಡುವೆ ಎರಡು ವೈರುಧ್ಯ ಘಟನೆಗಳು ನಡೆಯುತ್ತವೆ ಅದೇನೆಂದರೇ..ಅಂದಿನ ಪ್ರದಾನಿ ಅಟಲ್ಬಿ ಹಾರಿ ವಾಜಪೇಯಿಯವರು ಫೆಬ್ರವರಿ 21 ಬಸ್ಸಿನಲ್ಲಿ ಸೀದಾ ಲಾಹೋರ್ಗೆನ ಹೋಗುತ್ತಾರೆ ಅಲ್ಲಿ ನವಾಜ್ ಷÀರೀಫ್ ಜೊತೆ ಸ್ನೇಹ ಹಸ್ತಕಲಾಪ ಮಾಡುತ್ತಾರೆ. ಉಭಯ ದೇಶಗಳ ನಡುವೆ ಇದೊಂದು ಚಾರಿತ್ರಾರ್ಹ ಘಟನೆ..ಎರಡೂ ದೇಶಗಳ ನಡುವೆ ಸ್ನೇಹ ಸೌಹಾರ್ದ ಸೇತುವೆಯಂತಿದೆ ಈ ಘಟನೆ ಎಂಬುದಾಗಿ ಎಲ್ಲರೂ ನಂಬಿದರು..ಮಾತ್ರವಲ್ಲಾ ಅಂತರರಾಷ್ಟ್ರೀಯ ಸಮುದಾಯಗಳು ಈ ಬೆಳವಣಿಗೆಯನ್ನು ಮೆಚ್ಚಿಕೊಂಡಿತು. ಆದರೇ..!
colonel ravindranath
colonel ravindranath

ಪಾಕಿಸ್ತಾನ..ಪಾರ್ಟು ಬದಲಾಯಿಸಿತು..! ಬರೀ..ಎರಡೇ..ತಿಂಗಳು..1 ನವಾಜ್ ಷರೀಫ್ನರ ಮಾತಿಗಿಂತಾ ಪಾಕಿಸ್ತಾನದ ನಯವಂಚನೆಯ ಜಾಲವೇ ಜಾಸ್ತಿ ಗಡಿ ಪ್ರದೇಶದಲ್ಲಿ ಹಿಮಪಾತ ಶುರುವಾದಾಗಲೆಲ್ಲಾ..ಪಾಕಿಸ್ತಾನಿ ಮೂಲದ ಭಯೋತ್ಪಾದಕರು ಎಚ್ಚರಗೊಳ್ಳುತ್ತಾರೆ..ಮಲಗಿದ್ದ ಮುಜಾಹಿದೀನ್ಗಮಳು ಬಿಲದಿಂದ ಹೊರ ಬರುತ್ತಾರೆ. ಅಡಗಿಕುಳಿತ ಅಫಘನ್ಗೆಳು ಅಮರಿಕೊಂಡು ಬರುತ್ತಾರೆ..ಯಾಕೆಂದರೇ ಅದೊಂದು ಅಲಿಖಿತ ನಿಯಮವಿದೆ ಅದೇನೆಂದರೇ ಹಿಮಪಾತದ ವೇಳೆ ಕಾರ್ಗಿಲ್,ದ್ರಾಸ್,ಮುಷ್ಕೋ ಕಣಿವೆಗಳ ಗಡಿ ಪ್ರದೇಶಗಳಲ್ಲಿ ಹಿಮಪಾತದ ಕಾರಣ ಉಭಯ ದೇಶಗಳ ಸೈನಿಕ ಪಹರೆ ಇರುವುದಿಲ್ಲಾ..ಅಂತಹಾ ಸಂದರ್ಭದಲ್ಲೆ ಪಾಕಿಸ್ತಾನದ ಪಡಸಾಲೆಯಿಂದ ಎದ್ದು ಬರುತ್ತಾರೆ ಆಕ್ರಮಣಕಾರರು..ಅದು ಅವರ ನಿರಂತರ ಕದನವಿರಾಮದ ಉಲ್ಲಂಘನೆ.
ಅಂತಹ ಸಂದರ್ಭದಲ್ಲಿ ಅಂದರೇ 1999ರ ಏಪ್ರಿಲ್ನಮಲ್ಲಿ ಉತ್ತರ ಕಾಶ್ಮೀರದ ಕುಪ್ವಾ ಡ ಜಿಲ್ಲೆಯ ಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಮ್ಯಾಂಡರ್ ರವೀಂದ್ರನಾಥ್ರತವರಿಗೆ ಮೇ ಅಂತ್ಯದ ವೇಳೆಗೆ ದ್ರಾಸ್ನಿಂಿದ ಕರೆಬರುತ್ತದೆ. ಯಾಕೆಂದರೆ ಮೇ ತಿಂಗಳ ಕಡೆವಾರದಲ್ಲಿ ಕಾರ್ಗಿಲ್-ದ್ರಾಸ್-ಬಟಾಲಿಕ್ ವಲಯಗಳಲ್ಲಿ 800ಕ್ಕೂ ಹೆಚ್ಚು ಆಕ್ರಮಣಕಾರರು ನುಸುಳಿ ಬಂದಿದ್ದರು. ಉಗ್ರಗಾಮಿಗಳು ಕಾರ್ಗಿಲ್ ವಲಯದ ಗಿರಿ ಶಿಖರಗಳ ಮೇಲೆ ಬೀಡು ಬಿಟ್ಟಿದ್ದರು. ಭಾರತದ ನೆತ್ತಿಯ ಮೇಲೆ ಅವರು ರುದ್ರತಾಂಡವ ಆಡುವ ಕಾಲ ಸಮೀಪಿಸಿತ್ತು ಆ ಕ್ಷಣ ಎಚ್ಚೆತ್ತುಕೊಂಡ ಭಾರತ ಸೇನೆ ವಾಯುಪಡೆಗಳನ್ನ ಬಿಟ್ಟು ಯುದ್ಧ ಆರಂಭಿಸಿತು ಆ ದಾಳಿಯಲ್ಲಿ 160 ಮಂದಿ ಪಾಕ್-ಬೆಂಬಲಿತ ಉಗ್ರಗಾಮಿಗಳು ಬಲಿಯಾದರು. 17 ಮಂದಿ ಭಾರತದ ಯೋಧರು ಮೃತಪಟ್ಟರು.
ra praveen interviews colonel ravindranath (2)
ra praveen interviews colonel ravindranath

ಇಡೀ..ಕಾರ್ಗಿಲ್ ವಲಯವೇ ಹೊತ್ತಿ ಉರಿಯುತ್ತಿದ್ದ ಸಮಯದಲ್ಲಿ ದ್ರಾಸ್ನಿಂಗದ ದಾವಿಸಿ ಬಂದವರು ಕಮ್ಯಾಂಡರ್ ರವೀಂದ್ರನಾಥ್ ಜೂನ್ 4 ರಂದು ಬಂದ ಆದೇಶದ ಮೇರೆಗೆ ರವೀಂದ್ರನಾಥ್ರಂವರು ಒಂದು ಭೀಕರ ಯುದ್ಧಕ್ಕೆ ಅಣಿಯಾದರು. ಇಲ್ಲಿ ಒಂದು ವಿಚಾರ ಅದೇನೆಂದರೇ ರಣರಂಗಕ್ಕೆ ಇಳಿದು ಯುದ್ಧ ಮಾಡೋದು ಅಂತಿಮ ಹಂತ ಆದರೇ ಅದಕ್ಕೂ ಮುನ್ನ ಕಾರ್ಯಾಚರಣೆ ಹೇಗಿರಬೇಕೆಂಬುದನ್ನ ಸಜ್ಜುಗೊಳಿಸೋದು ತುಂಬಾ ಮುಖ್ಯ ಅಂತಹಾ ಜವಾಬ್ದಾರಿ ಕಮ್ಯಾಂಡರ್ ರವೀಂದ್ರನಾಥ್ರಜವರ ಮೇಲಿತ್ತು..ಶತ್ರುಗಳು 16 ಸಾವಿರ ಅಡಿ ಎತ್ತರದ ಟೋಲೋಲಿಂಗ್ ಪರ್ವತದ ಮೇಲಿದ್ದರು. ಅವರನ್ನ ಬಗ್ಗು ಬಡಿಯಲು ಕೆಳಗಿನಿಂದಾ ಸಾಗಬೇಕು. ಬೆಟ್ಟಗುಡ್ಡಗಳನ್ನ ಹತ್ತ ಬೇಕು ಹಾಗೆ ಸಾಗುವುದು ಶÀತ್ರುಗಳಿಗೆ ಗೊತ್ತಾಗಬಾರದು ಎಷ್ಟು ತುಕ್ಕಡಿಗಳು ಸಾಗಬೇಕು..ಊಟದ ಸರಬರಾಜು ಹೇಗೆ..ಯಾವ ಮಾರ್ಗದಲ್ಲಿ ಸಾಗಬೇಕು..ಯಾವ ತುಕ್ಕಡಿ ಯಾವ ದಿಕ್ಕಿನಲ್ಲಿ ಚಲಿಸಬೇಕು. ಮದ್ದುಗುಂಡುಗಳ ಶೇಖರಣೆ ಹೇಗೆ..ಹೀಗೆ ಒಂದು ದೊಡ್ಡ ರಣತಂತ್ರವನ್ನ ರೂಪಿಸುವ ಮಹತ್ತರವಾದ ಜವಾಬ್ದಾರಿ ಕಮ್ಯಾಂಡರ್ ರವೀಂದ್ರನಾಥ್ರಡ ಮೇಲಿತ್ತು ಆ ಅನುಭವದ ಬಗ್ಗೆ ಅವರ ಮಾತಿನಲ್ಲೇ ಕೇಳಿ..!
“4ನೇ ತಾರಿಕು ನಮಗೆ ಆದೇಶ ಸಿಕ್ತು ಟೋಲೋಲಿಂಗ್ ಕ್ಯಾಚ್ಪರ್ ಮಾಡಬೇಕು ಅಂತ ಫಸ್ಟ್ ಅದರ ಬಗ್ಗೆ ಸಂಪೂರ್ಣ ತಿಳಿದಿರಲಿಲ್ಲಾ..ರಿನೊಸನ್ಸ್ ಅಂತಾರೆ ಫಸ್ಟ್ ಪ್ಲಾನ್ ಮಾಡಬೇಕು. ಶಿಖರದ ಎತ್ತರ ಮತ್ತು ಅದನ್ನ ಹತ್ತುವ ಪ್ಲಾನ್ ಎಷ್ಟು ದಾರಿಗಳಿವೆ..ಯಾವ ಕಡೆಯಿಂದ ಹತ್ತಬೇಕು ಹತ್ತಿ..ಎಲ್ಲೆಲ್ಲಿ ಬೇಸ್ ಮಾಡ್ಕೋಬೇಕು..ಹೀಗೆ ಅನೇಕ ವಿಚಾರಗಳು ಇರುತ್ತೆ. ನಾವು ದುರ್ಭಿನ್ನ್ಲ್ಲಿ ನೋಡಿ ಒಂದು ಪ್ಲಾನ್ ಮಾಡಿದ್ವಿ. ಈ ಪ್ಲಾನ್ ನಂತರ ಅಮ್ಯುನೇಶನ್ಸ್ ಅಂತಾರೆ ಅಂದರೇ ಒಂದು ಯುದ್ಧಕ್ಕೆ ಹೊರಡುವ ಮುನ್ನ ಏನೆಲ್ಲಾ ಮದ್ದು ಗುಂಡುಗಳು..ಗನ್ನುಗಳನ್ನ ನಾವು ರೆಡಿ ಮಾಡ್ಕೋಬೇಕು ಅಂತ ಸೋ..ಆ ಕೆಲಸವನ್ನ ಮುಗಿಸಿದೆವು..ಕಡೆಗೆ ಮುಖ್ಯವಾದ ವಿಚಾರ ಅಂದ್ರೆ ಅವರು ಮೇಲಿದ್ದರು ನಮ್ಮ ಚಲನವಲನಗಳು ಅವರಿಗೆ ಸುಲಭವಾಗಿ ಕಾಣಿಸುತಿತ್ತು..Sಔ..ನಾವು ಏನೇ ಆ್ಯಕ್ಟಿವಿಟಿಸ್ ಮಾಡಿದರೂ ಬರೀ ರಾತ್ರಿ ಮಾತ್ರ ಮಾಡಬೇಕಿತ್ತು..ಆ..ದಿನ..ನಾವು ಮರೆಯೋಹಾಗಿಲ್ಲಾ..ಏನಾಯ್ತು ಅಂದ್ರೆ’’
ಕರ್ನಲ್ ರವೀಂದ್ರನಾಥ್ರಮವರ ಇಡೀ ಸೇನಾವೃತ್ತಿಯ ಅನುಭವದಲ್ಲಿ ಈ ಹಂತ ತುಂಬಾ ಮುಖ್ಯವಾದದ್ದು ಟೋಲೊಲಿಂಗ್ ಯುದ್ಧದ ಬಗ್ಗೆ ಅವರು ಪ್ರತಿ ಕ್ಷಣವನ್ನ ವಿವರಿಸಿದ್ದಾರೆ. ಮೈ ಜುಂ ಎನಿಸುವಂತಹಾ ಸನ್ನಿವೇಶಗಳನ್ನ ವಿವರಿಸಿದ್ದಾರೆ.. ಆ ಲೇಖನವನ್ನ ಓದಲು ಕೆಳಗಿನ ಲಿಂಕ್ ಓತ್ತಿ. . .!

RA NEWS:- ಕರ್ನಲ್ ರವೀಂದ್ರನಾಥ್ ರವರ ರಣರಂಗದ ಅನುಭವ-ಭಾಗ 2

Please follow and like us:
0

COMMENTS

Leave a Comment