RA NEWS:- ಕರ್ನಲ್ ರವೀಂದ್ರನಾಥ್ ರವರ ರಣರಂಗದ ಅನುಭವ-ಭಾಗ 2

ಕರ್ನಲ್ ರವೀಂದ್ರನಾಥ್ ರವರ ರಣರಂಗದ ಅನುಭವ-ಭಾಗ 2
16 ಸಾವಿರ ಅಡಿ ಎತ್ತರದ ಪರ್ವತ.
ಕಾರ್ಗಿಲ್ ಕದನದ ಸಂದರ್ಭದಲ್ಲಿ `ಆಪರೇಶನ್ ವಿಜಯ್’ ಕಾರ್ಯಾಚರಣೆಯಲ್ಲಿ ಆರಂಭಿಕ ಘಟ್ಟವೇ ಟೊಲೋಲಿಂಗ್ ವಿಮೋಚನೆ, ಟೊಲೋಲಿಂಗ್ ಎಂಬುದು ದೊಡ್ಡ ಪರ್ವತ, ಭಾರತದ ದ್ರಾಸ್-ಕಾರ್ಗಿಲ್ ಸೆಕ್ಟರ್ನೊ ಹತ್ತಾರು ಪರ್ವತಗಳ ಪೈಕಿ ಟೊಲೋಲಿಂಗ್ ಪರ್ವತವೂ ಒಂದು. ಅಂತಹಾ ಪರ್ವತದ ಮೇಲೆ ಪಾಕಿ ಸೈನಿಕರು ಮತ್ತು ಉಗ್ರರು ಮದ್ದುಗುಂಡುಗಳ ಸಮೇತ ಬೀಡುಬಿಟ್ಟಿದ್ದರು. ಟೊಲೋಲಿಂಗ್ ಪರ್ವತ ಎಷ್ಟು ಮುಖ್ಯವೆಂದರೇ ಅಲ್ಲಿ ನೆಲೆಗೊಂಡಿದ್ದ ಸೈನ್ಯವನ್ನ ಹಾಗೆಯೇ ಬಿಟ್ಟಿದ್ದರೆ ಮುಂದೆ ಘೋರ ಪರಿಣಾಮವನ್ನ ಎದುರಿಸಬೇಕಾಗಿತ್ತು. ಯಾಕೆಂದರೆ ಅದು ಎಂತಹಾ ಸೂಕ್ಷ್ಮ ಪ್ರದೇಶವೆಂದರೇ ಕಾಶ್ಮೀರದ ಅತ್ಯಂತ ಮುಖ್ಯ ರಸ್ತೆ ಅಂದರೇ ಶ್ರೀನಗರ ಮತ್ತು ಲಡಾಕ್ನಪ ಹೆದ್ದಾರಿ.ಹೈವೇ ಆಲ್ಛಾ1.ಇದೊಂದೇ ಒಂದು ದೊಡ್ಡ ಹಾದಿ ಪಾಕಿ ಸೈನ್ಯದ ಪಾಲಾದರೆ ಮುಂದೆ ದ್ರಾಸ್,ಕಾರ್ಗಿಲ್ ಬಟಾಲಿಕ್ ಎಲ್ಲವೂ ಅವರ ಪಾಲಾಗುತ್ತದೆ.

colonel ravindranath
colonel ravindranath

ಅಂತಹಾ ಡೇಂಜರ್ ಜಾಗದಲ್ಲಿ ಕುಳಿತಿತ್ತು ಪಾಕಿಸೈನ್ಯ..!
ಕುಳಿತರೇನಂತೆ..! ಬೆಟ್ಟದ ತುದಿಯಲ್ಲಿರುವ ಪಾಕಿಸೈನ್ಯವನ್ನ ಒಂದೇ ಒಂದು ಫೈನ್ ಹಾರಿಸಿ ಬಾಂಬುಗಳ ಮಳೆಗರೆದರೆ..ಅವರೆಲ್ಲಾ ಸರ್ವನಾಶವಲ್ಲವೇ..! ಅದೇನು ಮಹಾ..ಎನ್ನುವ ಹಾಗಿರಲಿಲ್ಲ. ಯಾಕೆಂದರೆ ಆ ಪಾಕಿ ಸೈನಿಕರು ಪರ್ವತದ ನೆತ್ತಿಯ ಮೇಲೆ ಕಾಣುವ ಹಾಗೆ ನಿಲ್ಲುವುದಿಲ್ಲ..ಪೊದೆ ಪೊಟರೆಗಳಲ್ಲಿ ಹೆಬ್ಬಂಡೆಗಳ ಕೆಳಗೆ ಹೊಂಚಿನಿಂದ ಸಂಚು ಮಾಡಿ ಕಾದಿರುತ್ತಾರೆ. ಹಾಗಾಗಿ ಅಂತಹಾ ನಯವಂಚಕ ನರಿಗಳ ಬೇಟೆಗೆ ನಮ್ಮ ಯೋಧರು ಪರ್ವತದ ಕೆಳಗಿನಿಂದಲೇ ಸಾಗಬೇಕು..!
ಅವರಿಗೆ ಕಾಣದಹಾಗೆ..!
ಟೊಲೋಲಿಂಗ್ ಯದ್ಧದಲ್ಲಿ ಪ್ರಮುಖ ಪಾತ್ರವಹಿಸಿದ್ದವರು ನಮ್ಮ ವೀರಕನ್ನಡಿಗರಾದ ರವೀಂದ್ರನಾಥ್ರ್ವರು. ಅಂದಿನ ಅವರ ಅನುಭವವನ್ನ ಹೀಗೆ ಹೇಳುತ್ತಾರೆ “4ನೇ ತಾರಿಕು ನಮಗೆ ಆದೇಶ ಸಿಕ್ತು ಟೋಲೋಲಿಂಗ್ ಕ್ಯಾಚ್ಪರ್ ಮಾಡಬೇಕು ಅಂತ ಫಸ್ಟ್ ಅದರ ಬಗ್ಗೆ ಸಂಪೂರ್ಣ ತಿಳಿದಿರಲಿಲ್ಲಾ..ರಿನೊಸನ್ಸ್ ಅಂತಾರೆ ಫಸ್ಟ್ ಪ್ಲಾನ್ ಮಾಡಬೇಕು. ಶಿಖರದ ಎತ್ತರ ಮತ್ತು ಅದನ್ನ ಹತ್ತುವ ಪ್ಲಾನ್ ಎಷ್ಟು ದಾರಿಗಳಿವೆ..ಯಾವ ಕಡೆಯಿಂದ ಹತ್ತಬೇಕು ಹತ್ತಿ..ಎಲ್ಲೆಲ್ಲಿ ಬೇಸ್ ಮಾಡ್ಕೋಬೇಕು..ಹೀಗೆ ಅನೇಕ ವಿಚಾರಗಳು ಇರುತ್ತೆ. ನಾವು ದುರ್ಭಿನ್ನ.ಲ್ಲಿ ನೋಡಿ ಒಂದು ಪ್ಲಾನ್ ಮಾಡಿದ್ವಿ. ಈ ಪ್ಲಾನ್ ನಂತರ ಅಮ್ಯುನೇಶನ್ಸ್ ಅಂತಾರೆ ಅಂದರೇ ಒಂದು ಯುದ್ಧಕ್ಕೆ ಹೊರಡುವ ಮುನ್ನ ಏನೆಲ್ಲಾ ಮದ್ದು ಗುಂಡುಗಳು..ಗನ್ನುಗಳನ್ನ ನಾವು ರೆಡಿ ಮಾಡ್ಕೋಬೇಕು ಅಂತ ಸೋ..ಆ ಕೆಲಸವನ್ನ ಮುಗಿಸಿದೆವು..ಕಡೆಗೆ ಮುಖ್ಯವಾದ ವಿಚಾರ ಅಂದ್ರೆ ಅವರು ಮೇಲಿದ್ದರು ನಮ್ಮ ಚಲನವಲನಗಳು ಅವರಿಗೆ ಸುಲಭವಾಗಿ ಕಾಣಿಸುತಿತ್ತು..Sಔ..ನಾವು ಏನೇ ಆ್ಯಕ್ಟಿವಿಟಿಸ್ ಮಾಡಿದರೂ ಬರೀ ರಾತ್ರಿ ಮಾತ್ರ ಮಾಡಬೇಕಿತ್ತು..
ra praveen interviews colonel ravindranath (1)
ra praveen interviews colonel ravindranath

ಪ್ರತಿರಾತ್ರಿ 300-ರಿಂದ400 ಸೈನಿಕರು ಮದ್ದು ಗುಂಡುಗಳನ್ನ ಹೊತ್ತುಕೊಂಡು ರಾತ್ರಿ ಹೊತ್ತು ಬೆಟ್ಟ ಹತ್ತಬೇಕಿತ್ತು..ಅದನ್ನೆಲ್ಲಾ ಒಂದು ಫೈರ್ ಬೇಸ್ ಅಂತ ಕರೆಯುತ್ತಾರೆ ಹಗಲಿನಲ್ಲಿ ನಾವು ಏನೂ ಮಾಡೋ ಹಾಗಿರಲಿಲ್ಲಾ ಏಕೆಂದರೆ ಪ್ರತಿ ಮೂಮೆಂಟ್ ಮೇಲಿದ್ದ ಅವರಿಗೆ ಕಾಣಿಸುತಿತ್ತು So ನಾವು ರಾತ್ರಿ ಹೊತ್ತು ಮಾತ್ರ ಕಾರ್ಯಾಚರಣೆ ಮಾಡಿದ್ವಿ. ಮೊದಲು ನಾವು ಒಂದು ಫೈರ್ ಬೇಸ್ ಮಾಡ್ಕೊಂಡ್ವಿ..ರಾತ್ರಿ ಹೊತ್ತು ಶೇಖರಣೆ ಮಾಡಿ ಮತ್ತೆ ವಾಪಸ್ ಬೆಳಗಿನ ಜಾವದ ಹೊತ್ತಿಗೆ ಬಂದು ಬಿಡ್ತಿದ್ವಿ. ಯಾಕಂದ್ರೆ ನಮ್ಮ ತಯಾರಿಗಳು ಅವರಿಗೆ ಗೊತ್ತಾಗಬಾರದಿತ್ತು..ಆ ನಿಗೂಡತೆಯನ್ನ ಕಾಪಾಡಿಕೊಳ್ಳುತಿದ್ದೆವು. ಮೊದಲ ಆ ದಿನ ನಾವು ಬರಿ ಮದ್ದುಗುಂಡುಗಳ ಸಾಗಾಣಿಕೆಯನ್ನ ಮಾಡಿದೆವು. ಅದರ ಜೊತೆಗೆ ನಾವು ನೋಡಿ ಬಂದ ಜಾಗದ ಬಗ್ಗೆ ಮರುದಿನ ನಮ್ಮ ಕ್ಯಾಂಪ್ನಾಲ್ಲಿ ಡಿಸ್ಕ್ರ್ಸನ್ ಮಾಡಿ..ಹೇಗೆ ನಾವು ಶಿಖರದ ತುದಿಯನ್ನ ತಲುಪಬೇಕು. ತಲುಪುವ ದಾರಿಗಳೆÉೀನು..ಅಂತ ಎಲ್ಲವನ್ನ ಚರ್ಚೆಮಾಡಿ ಪ್ಲಾನ್ ಮಾಡುತ್ತಿದ್ದೆವು. ಅಷ್ಟೆ ಅಲ್ಲಾ ಬರುವ ಅಪಾಯಗಳನ್ನು ಎದುರಿಸುವುದು ಹೇಗೆಂದು ಕುದ್ದು ಪ್ರಾಕ್ಟಿಾಸ್ ಮಾಡ್ತಿದ್ವಿ. ಅದೆಂತಹಾ ದೊಡ್ಡ ಟಾಸ್ಕ್ ಎಂದರೇ ನಾವು ಹತ್ತುವಾಗ ನಮ್ಮ ವೈರಿಗಳು ಮೇಲಿಂದ ಬರೀ ಬಂಡೆಕಲ್ಲುಗಳನ್ನ ತಳ್ಳಿದ್ದರೇ ನಮ್ಮವರು ಸಾಯಬೇಕಿತ್ತು. ಹಾಗಾಗಿ ನಾವು ದಿನ ನಿತ್ಯ ಪ್ಲಾನಿಂಗ್ನುಲ್ಲಿ ತೊಡಗಿದೆವು. ಟನ್ಗಕಟ್ಟಲೆ ಮದ್ದುಗುಂಡುಗಳನ್ನ ಬಂದೂಕುಗಳನ್ನ ನಟ್ಟನಡುರಾತ್ರಿ ಸಾಗಿಸಬೇಕಿತ್ತು..ನಾವು ಮಾಡಿದ ಮೊದಲ ಕೆಲಸವೆಂದರೇ ಫೈರ್ ಬೇಸ್.ಅದೊಂದು ಫೈರ್ ಬೇಸ್ ನಮ್ಮ ಗೆಲುವಿಗೆ ಮುಖ್ಯವಾಯಿತು.
ಕರ್ನಲ್ ರವೀಂದ್ರನಾಥ್ ರವರು ಈಗ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಆದರೇ ಅವರ ಸಾಹಸ ಗಾಥೆ ಭಾರತದ ಇತಿಹಾಸದಲ್ಲಿ ಅಚ್ಚಳಿಯದೆ ನಿರಂತರವಾಗಿರುತ್ತೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ.
ರಾ.ಪ್ರವೀಣ್.

Please follow and like us:
0

Leave a Comment