ಕನ್ನಡಿಗರಿಗೆ ಒಲಿದ ಕಾವೇರಿ . .!Cauvery water dispute verdict karnataka Happy

ಕನ್ನಡಿಗರಿಗೆ ಒಲಿದ ಕಾವೇರಿ . .!
ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಯಿತು. .!
ಎಲ್ಲಿ ನಮ್ಮ ಕಾವೇರಿ ತಾಯಿಯನ್ನ ನಮ್ಮ ಮಡಿಲು ತುಂಬದೇ ಪರರಾಜ್ಯಕ್ಕೆ ಹೋಗುತ್ತಾಳೋ ಎಂಬ ಆತಂಕ ಮಾಯವಾಯಿತು.ಹೊತ್ತಿ ಉರಿಯಬೇಕಿದ್ದ ಕನ್ನಡಿಗರ ಕಿಚ್ಚು ಶಮನವಾಯಿತು. .ಎಲ್ಲದಕ್ಕೂ ಒಂದೇ ಕಾರಣ . .!
ಐತಿಹಾಸಿಕ ತೀರ್ಪು,. .!
1990 ರಲ್ಲಿ ಕಾವೇರಿ ಜಲವಿವಾದ ನ್ಯಾಯಮಂಡಳಿ ರಚಿಸಿದ್ದು, 17 ವರ್ಷಗಳ ಕಾಲ ವಿಚಾರಣೆ ನಡೆಸಿ 2007 ರಲ್ಲಿ ಐತೀರ್ಪು ನೀಡಿತ್ತು. ಈ ಐತೀರ್ಪಿನಲ್ಲಿದ್ದ ಅಂಶಗಳನ್ನು ಒಪ್ಪದೇ ಕಾವೇರಿ ಕಣಿವೆಯ ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಕೇರಳ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದವು.
ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.
ಕರ್ನಾಟಕಕ್ಕೆ 14.75 ಟಿ.ಎಂ.ಸಿ. ನೀರು ಹೆಚ್ಚುವರಿಯಾಗಿ ನೀಡಿದೆ. ಜೊತೆಗೆ ಕರ್ನಾಟಕ ನೀರಾವರಿ ಪ್ರದೇಶವನ್ನು ಹೆಚ್ಚುವರಿ ಮಾಡಿಕೊಳ್ಳಬಹುದು ಎಂದು ಹೇಳಿದೆ. 1924 ರ ಒಪ್ಪಂದ ಸಂವಿಧಾನಾತ್ಮಕವಾಗಿದೆ ಎಂದು ಹೇಳಿದೆ.

kaveri river.
kaveri river.

ನದಿಗಳು ರಾಷ್ಟ್ರೀಯ ಸಂಪತ್ತು. ಯಾವುದೇ ರಾಜ್ಯಗಳು ಸಂಪೂರ್ಣ ಹಕ್ಕು ಹೊಂದಿರುವುದಿಲ್ಲ. ಸಮಾನ ಹಂಚಿಕೆ ತತ್ವ ಪಾಲಿಸಬೇಕೆಂದು ನ್ಯಾಯಾಲಯ ಹೇಳಿದೆ. ಕುಡಿಯುವ ನೀರಿನ ಬಳಕೆಗೂ ನ್ಯಾಯಾಲ;ಯ ಸಮ್ಮತಿಸಿದೆ.
ಕಳೆದ 5 ತಿಂಗಳಿಂದ ಕಾವೇರಿ ಕಣಿವೆಯ ರಾಜ್ಯಗಳು ತೀರ್ಪಿಗಾಗಿ ಕಾದಿದ್ದವು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಅಮಿತವ್ ರಾಯ್, ಎ.ಎಂ. ಖನ್ವೀಲ್ಕರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿದೆ.
ಕಾವೇರಿ ನಿರ್ವಾಹಣಾ ಮಂಡಳಿಯ ರಚನೆಯನ್ನ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ವಹಿಸಿದೆ.ಈ ನಿಟ್ಟಿನಲ್ಲಿ ;ಇದೂ ಸಹಾ ಕನ್ನಡಿಗರ ನೆಮ್ಮದಿಯ ನೆಲೆ ಗೆ ಕಾರಣವಾಗಿದೆ.
ಇಂದಿನ ತೀರ್ಪು ಮುಂದಿನ ಹದಿನೈದು ವರ್ಷಗಳವರೆಗೆ ಮುಂದುವರೆಯುತ್ತೆ. ಪಾಂಡಿಚೇರಿ ಮತ್ತು ಕೇರಳಕ್ಕೆ ಕೊಟ್ಟಿರುವ ನೀರಿನ ಪ್ರಮಾಣ ಸರಿ ಇದೆ. 20 ಟಿ.ಎಂ.ಸಿ. ಅಂತರ್ಜಲವನ್ನು ತಮಿಳುನಾಡು ಪರಿಗಣಿಸಬೇಕು. ಕರ್ನಾಟಕಕ್ಕೆ 14.5 ಟಿ.ಎಂ.ಸಿ. ಹೆಚ್ಚುವರಿ ನೀರು ನೀಡಬೇಕೆಂದು ತಿಳಿಸಲಾಗಿದೆ.

Please follow and like us:
0

Leave a Comment