RA NEWS :Black Day Protest. . against modi. .!/ಕುಡಿಯುವ ನೀರಿಗಾಗಿ ಮಾಡುತ್ತಿರುವ ಕರಾಳ ದಿನದ ಕಾವು ನಮೋನಾಥನಿಗೆ ತಾಕುತ್ತಾ. . !

 

Black Day Protest. . against modi. .!

ರಾಜ್ಯದ ಬಿಜೆಪಿಯಲ್ಲಿ ಸಂಚಲನ ಮೂಡಿದೆ ಇದಕ್ಕೆ ಪ್ರಧಾನಿ ನರೇಂದ್ರಮೋದಿಯವರ ಹೈವೋಟೇಜ್ ಹವಾನೇ ಕಾರಣ.ಬೆಂಗಳೂರಿನ ಅರಮನೆ ಮೈದಾನದಲ್ಲಿ ಪರಿವರ್ತನಾ ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಬಿಜೆಪಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ.ರಾಜ್ಯದ ಬಿಜೆಪಿ ನಾಯಕರು ಸಮಾವೇಶದ ಸಕಲ ಸಿದ್ಧತೆಗಳನ್ನ ಮಾಡಿದ್ದಾರೆ.ಪಾಲಿಕೆ ಸದಸ್ಯರಿಂದ ಹಿಡಿದು ಶಾಸಕರಾದಿಯಾಗಿ ಸಂಸತ್ ಸದಸ್ಯರ ತನಕ ಎಲ್ಲಾ ಬಿಜೆಪಿ ಪಕ್ಷದ ಜನ ಪ್ರತಿನಿಧಿಗಳು ತಮ್ಮ ಅಪಾರವಾದ ಬೆಂಬಲಿಗರೋಂದಿಗೆ ಸೇರಿದ್ದಾರೆ.

Black Day Protest. . against modi. .!/ಕುಡಿಯುವ ನೀರಿಗಾಗಿ ಮಾಡುತ್ತಿರುವ ಕರಾಳ ದಿನದ ಕಾವು ನಮೋನಾಥನಿಗೆ ತಾಕುತ್ತಾ. . !
Black Day Protest. . against modi. .!/ಕುಡಿಯುವ ನೀರಿಗಾಗಿ ಮಾಡುತ್ತಿರುವ ಕರಾಳ ದಿನದ ಕಾವು ನಮೋನಾಥನಿಗೆ ತಾಕುತ್ತಾ. . !

ಕರಾಳ ದಿನಾಚರಣೆ. . .!

ಪ್ರಧಾನಿ ಮೋದಿಯವರು ಮಹದಾಯಿಯ ವಿಚಾರದಲ್ಲಿ ತಳೆದಿರುವ ಮೌನವನ್ನ ಮುರಿದು ಬರಬೇಕೆಂದು ಕನ್ನಡ ಚಳವಳಿಗಾರರು ಮತ್ತು ರೈತ ಹೋರಾಟಗಾರರು ಇಂದು ಬೆಂಗಳೂರು ಬಂದ್ ಗೆ ಕರೆಕೊಟ್ಟಿದ್ದರು.ಆದರೇ ನ್ಯಾಯಾಲಯ ಬಂದ್ ಮಾಡಬಾರದೆಂದು ಆದೇಶಿಸಿದಾಗ ಇದಕ್ಕೆ ತಲೆ ಬಾಗಿದ ಕನ್ನಡ ಒಕ್ಕೂಟ  ಮತ್ತು ಜನ ಸಾಮಾನ್ಯರ ಪಕ್ಷದವರು ಬಂದ್ ಗೆ ಬದಲಾಗಿ ನಗರದ ಫ್ರೀಡಮ್ ಪಾರ್ಕ್ ನಲ್ಲಿ ಕರಾಳದಿನವನ್ನಾ ಆಚರಿಸುತ್ತಿದ್ದಾರೆ.

ಚಂಪ,ವಾಟಾಳ್ ನಾಗರಾಜ್,ಸಾ.ರಾ.ಗೋವಿಂದು.ಗಿರೀಶ್ ಗೌಡ,ಕನ್ನಡ ಸೇನೆ ಕುಮಾರ್ ಮುಂತಾದವರು ಭಾಗವಹಿಸಿದ್ದಾರೆ.ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚಂಪ ರವರು ” ಯಾವುದೇ ಪಕ್ಷದಿಂದ ಅಥವಾ ಯಾವುದೇ ರಾಜ್ಯದಿಂದ ಆಯ್ಕೆಯಾಗಿ ಬಂದಿದ್ದರು ಅವರು ಒಮ್ಮೆ ಪ್ರಧಾನಿ ಪಟ್ಟಕ್ಕೆ ಏರಿದ ಮೇಲೆ ಅವರು ನಮ್ಮ ಮನೆಯ ಯಜಮಾನರ ರೀತಿ ವರ್ತನೆ ಮಾಡಬೇಕು ಅನ್ನೋ ಸದಾಶಯವಿಟ್ಟು ಕೊಂಡು ಹೇಳುತ್ತೆನೆ ಪ್ರಧಾನಿಗಳು ಒಕ್ಕೂಟದ ವ್ಯವಸ್ಥೆಯ ಪ್ರಧಾನಿಯಾಗಬೇಕು.ನಮ್ಮ ಜ್ವಲಂತ ಸಮಸ್ಯ ಮಹದಾಯಿ ಕಳಸ ಬಂಡೂರಿ ಈ ವಿಚಾರದಲ್ಲಿ ಪ್ರಧಾನ ಮಂತ್ರಿಗಳು ತಮ್ಮ ಮೌನವನ್ನ ಮುರಿಯಬೇಕು ಇದು ನಮ್ಮ ನೋವಿನ ಮಾತು” ಎಂದು ಹೇಳಿದರು.

Black Day Protest. . against modi. .! /ಕುಡಿಯುವ ನೀರಿಗಾಗಿ ಮಾಡುತ್ತಿರುವ ಕರಾಳ ದಿನದ ಕಾವು ನಮೋನಾಥನಿಗೆ ತಾಕುತ್ತಾ. . !
Black Day Protest. . against modi. .!/ಕುಡಿಯುವ ನೀರಿಗಾಗಿ ಮಾಡುತ್ತಿರುವ ಕರಾಳ ದಿನದ ಕಾವು ನಮೋನಾಥನಿಗೆ ತಾಕುತ್ತಾ. . !

ಮೆಣಸಿನಕಾಯಿ. . .!

“ಒಂದು ಮೆಣಸಿನಕಾಯಿ ಆದರೂ ಖಾರವೇ ಹತ್ತು ಮೆಣಸಿನಕಾಯಿ ಆದ್ರೂ ಖಾರವೇ,ನ್ಯಾಯಾಲಯ ಬಂದ್ ಬೇಡಾ ಅಂದಾಗ ಆ ಆದೇಶಕ್ಕೆ ಬೆಲೆ ಕೊಟ್ಟು ನಾವು ಬಂದ್ ವಿಚಾರ ಕೈಬಿಟ್ಟು ಈ ದಿನವನ್ನ ಕರಾಳ ದಿನವನ್ನಾಗಿ ಆಚರಿಸುತ್ತಿದ್ದೆವೆ.ಮೋದಿಯವರು ಮೌನ ಮುರಿಯುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತೆ” ಎಂದು ವಾಟಾಳ್ ನಾಗರಾಜ್ ಪ್ರತಿಭಟನೆಯನ್ನ ಉದ್ದೇಶಿಸಿ ಹೇಳಿದರು.

ಮಹದಾಯಿ ವಿಚಾರವಾಗಿ ನಡೆಯುತ್ತಿರುವ  ಈ ಕರಾಳ ದಿನದ ಕಾವು ಪ್ರಧಾನ ಮಂತ್ರಿ ಮೋದಿಯವರಿಗೆ ಮುಟ್ಟುತ್ತಾ .ಇಂದಿನ ಪರಿವರ್ತನಾ ಸಮಾವೇಶದಲ್ಲಿ ಮೋದಿಯವರು ಮೌನ ಮುರಿದು ಮಹದಾಯಿ ವಿಚಾರವಾಗಿ ಮಾತನಾಡುತ್ತಾರಾ ಎಂಬ ಕುತೂಹಲ ಇಡೀ ರಾಜ್ಯಕ್ಕೆ ಇದೆ ಏನಾಗುತ್ತೋ ಕಾದು ನೋಡಬೇಕು.

Please follow and like us:
0

Leave a Comment