ರಾNEWS:- ಜೆಡಿಎಸ್ ಸೇರ್ಪಡೆ ಖಚಿತ-ಎ.ಮಂಜು

MagadiSoluru A Manju fi
ನಮ್ಮರಾಮನಗರ ಜಿಲ್ಲಾಸುದ್ದಿವಿಭಾಗ
ಜೆಡಿಎಸ್ ಸೇರ್ಪಡೆ ಖಚಿತ-ಎ.ಮಂಜು
ಮಾಗಡಿ:” ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರ್ಪಡೆ ಖಚಿತ ” ಎಂದು ಕೆಪಿಸಿಸಿ ಸದಸ್ಯ ಎ.ಮಂಜು ಸ್ಪಷ್ಟಪಡಿಸಿದರು.
ಇಲ್ಲಿಗೆ ಸಮೀಪದ ಸೋಲೂರು ಸರಕಾರಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ನನ್ನ ಸ್ವಂತಹಣ,ದುಡಿಮೆಯ ಬಂಡವಾಳವನ್ನು ಎಚ್.ಎಂ.ರೇವಣ್ಣ ಕ್ಷೇತ್ರ ತೊರೆದಾಗ ಮಾಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಶ್ರಮಿಸುವಂತೆ ಹೇಳಿದ ಜಿಲ್ಲಾಉಸ್ತುವಾರಿ ಸಚಿವ ಡಿಕೆ.ಶಿವಕುಮಾರ್ ಕಳುಹಿಸಿ ಈಗ ಜೆಡಿಎಸ್‍ನಿಂದ ಉಚ್ಛಾಟಿತ ಬಾಲಕೃಷ್ಣರಿಗೆ ಟಿಕೇಟು ಕೊಡುವುದಾಗಿ ಆಹ್ವಾನಿಸಿ ನನಗೆ ಮೋಸಮಾಡಿದ ಕಾರಣ ವಿಧಿಯಿಲ್ಲದೆ ಜೆಡಿಎಸ್ ಪಕ್ಷದ ವರಿಷ್ಠರ ಆಹ್ವಾನವನ್ನು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಸೇರ್ಪಡೆಯಾಗುವುದಾಗಿ” ತಿಳಿಸಿದರು.
ಈ ಹಿಂದೆಯೂ ನಾನು ಕಾಂಗ್ರೆಸ್ ಕಚೇರಿಯನ್ನು ಸ್ಥಾಪಿಸುವಾಗ ಸಂಸದ ಡಿಕೆ ಸುರೇಶ್,ಎಂಎಲ್‍ಸಿ ರವಿಯವರನ್ನು ಕೇಳಿ ಭವ್ಯವಾದ ಕಟ್ಟಡವನ್ನು ನಿರ್ಮಿಸಿದೆ.ಅಲ್ಲಿಗೆ ಡಿಕೆಶಿ ಸೇರಿದಂತೆ ಅನೇಕ ಸಚಿವರು ಪಕ್ಷದ ಹಿರಿಯ ಮುಖಂಡರು ಬಂದು ಹೋಗಿದ್ದರು. ಮುಂದಿನ ಎಂಎಲ್‍ಎ ನೀವೇ ಆದರೆ ಮಾತ್ರ ಪಕ್ಷಕ್ಕೆ ಗೌರವ ಬೆಲೆ ಎಂದು ಹಾಡಿ ಹೊಗಳಿ ಹೋಗಿದ್ದರು.
ಇಂದಿಗೂ ಪಕ್ಷ ಸಂಘಟನೆಯ ಮೂಲಕ ಮಾಗಡಿ ವಿಧಾನ ಸಭಾಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರು,ಮುಖಂಡರುಗಳ ಪರಿಚಯವಾಯಿತು.ಇ0ದಿಗೂ ಅವರ ಅಭಿಮಾನದ ಕುರುಹಾಗಿ ನಾಯಕನಾಗಿ ಉಳಿದಿರುವೆ.ಅವರ ಮಾರ್ಗದರ್ಶನ ಸಲಹೆಗಳು ನನಗೆ ಮುಖ್ಯ. ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆ ಎದುರಿಸುವ ಶಕ್ತಿಯುಳ್ಳ ಮುಖಂಡರಿಗೆ ಕೊರತೆಯಿಲ್ಲ.ಜೆಡಿಎಸ್‍ನಿಂದ ಎರವಲು ಪಡೆದು ಗೆಲ್ಲುವ ಅವಶ್ಯಕತೆಯಿಲ್ಲ.ಈಗ ಬಾಲಕೃಷ್ಣ ಜೆಡಿಎಸ್ ಪಕ್ಷಕ್ಕೆ ನಿಷ್ಠೆಯಿಲ್ಲವೆಂದು ಉಚ್ಛಾಟಿಸಿಕೊಂಡು ಹೊರಬಂದವರನ್ನು ಕಾಂಗ್ರೆಸ್ ಯಾವ ಆಧಾರದ ಮೇಲೆ ಪಕ್ಷಕ್ಕೆ ಸೇರಿಸಿಕೊಂಡು ಟಿಕೇಟು ಕೊಡಲು ಮುಂದಾಗಿದೆ ಎಂಬುದರ ಬಗ್ಗೆ ಡಿಕೆಶಿಯವರ ಬಳಿ ಪ್ರಸ್ತಾಪಿಸಿದಾಗ “ನಾನು ಈಗ ಅಸಹಾಯಕ ಟಿಕೇಟು ಕೊಡುವುದು ಬಿಡುವುದು ಹೈಕಮಾಂಡ್‍ಗೆ ಬಿಟ್ಟದ್ದು”ಎಂದು ಕೈಚೆಲ್ಲುವಾಗ ನಾನು ತಾನೆ ಏನುಮಾಡಬೇಕು.ನನ್ನ ನಂಬಿದ ಕಾರ್ಯಕರ್ತರನ್ನು ಅವರು ನನ್ನನ್ನು ನಡುನೀರಿನಲ್ಲಿ ಕೈಬಿಟ್ಟಂತೆ ನಾನು ಬಿಡಲು ಸಾದ್ಯವಿಲ್ಲ ಎಂದು ತನ್ನ ನಾಯಕತ್ವದ ಗುಣಗಳನ್ನು ಸಮರ್ಥಿಸಿಕೊಂಡರು.
ಹೇಮಾವತಿ ಹೋರಾಟ:
ಶಾಸಕ ಎಚ್.ಸಿ.ಬಾಲಕೃಷ್ಣ 1995 ರಿಂದಲೂ ಹೇಮಾವತಿಯ ವಿರುದ್ಧವಾಗಿ ಮಾತನಾಡಿದರೆ ವಿನಹ ಇದುವರೆವಿಗೂ ಅವರು ಹೇಮಾವತಿ ವಿಚಾರವಾಗಿ ಗೇಲಿಮಾಡಿದ್ದೆ ಹೆಚ್ಚು.ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾಗಡಿ ಪಟ್ಟಣಕ್ಕೆ ಮಂಚನಬೆಲೆ ಕುಡಿಯುವ ನೀರಿನ ಯೋಜನೆಯನ್ನು ತಂದಾಗ ವಿರೋಧಿಸಿದ ಮಹಾನುಭಾವ ಬಾಲಕೃಷ್ಣರಿಗೆ ಇದುವರೆವಿಗೂ ಅಧಿಕ ಮತ ಮಾಗಡಿ ಪಟ್ಟಣದ ಜನತೆ ನೀಡಿಲ್ಲ ಅದೇರೀತಿ ಮಾಗಡಿಯ ನೆಲದ ಮಣ್ಣಿನ ಮಕ್ಕಳು ರೈತರು ಸಂಪದ್ಭರಿತವಾಗಿ ಕೃಷಿ ಮಾಡಲು ಅನುಕೂಲವಾಗಲಿ ಎಂದು ಹೇಮಾವತಿಯ ವಿಚಾರವಾಗಿ ರೇವಣ್ಣನವರ ಬಳಿ ಹೋಗಿ ಚಾಲನೆ ನೀಡಲು ಸಂಸದರಾದ ಡಿಕೆ ಸುರೇಶ್ ಸಿಎಂ ಸಿದ್ಧರಾಮಯ್ಯನವರ ಬಳಿ ನಮ್ಮನ್ನು ಕರೆದು ಅನುದಾನ ಮಂಜೂರು ಮಾಡಿಸಿದರು. ಸುರೇಶ್ ಸಾಹೇಬರಿಂದ ನಿಜವಾದ ರಾಜಕಾರಣದ ಮಜಲುಗಳನ್ನು ಅರಿತೆ.ಅವರ್ಯಾರಿಗೂ ಬಾಲಕೃಷ್ಣ ಕಾಂಗ್ರೆಸ್ ಸೇರ್ಪಡೆಗೆ ಮತ್ತು ಟಿಕೇಟು ಕೊಡಿಸಲು ಇಷ್ಟವಿಲ್ಲ.ನನಗೂ ಹೈಕಮಾಂಡ್ ಬಳಿ ಹೋಗಿ ಟಿಕೇಟು ಪಡೆದು ಸ್ಪರ್ಧಿಸುವ ಇಷ್ಟವಿದೆ.ಅಲ್ಲಿಂದ ಟಿಕೇಟು ತಂದು ಇಲ್ಲಿ ಸ್ಥಳೀಯವಾಗಿ ಹಿರಿಯ ಮುಖಂಡರು ಟಾಂಗ್ ಕೊಟ್ಟರೆ ನಮ್ಮ ಕಾರ್ಯಕರ್ತರ ಪರವಾಗಿ ರಕ್ಷಣೆ ಕೆಲಸಮಾಡುವವರು ಯಾರು? ಅದರಿಂದ ಜೆಡಿಎಸ್‍ನ ದೇವೇಗೌಡರು ಎಚ್.ಡಿ.ಕುಮಾರಸ್ವಾಮಿ ನನಗೆ ಅನುಕೂಲ ಮಾಡಿಕೊಡುವುದರ ಖಾತ್ರಿಯ ನಂತರ ಈ ನಿರ್ಧಾರ ತಳೆದಿರುವುದಾಗಿ ತಿಳಿಸಿದರು.
ಪಕ್ಷ ಬಿಟ್ಟರು ಕ್ಷೇತ್ರದ ರೈತರಿಗಾಗಿ ಹೇಮಾವತಿ ಹೋರಾಟವನ್ನು ಮುಂದುವರೆಸುವೆ.ಪಕ್ಷದ ಕಚೇರಿಯ ಬೋರ್ಡು,ಫೊಟೊಗಳನ್ನು ಬದಲಿಸುವೆ.ಚುನಾವಣೆಯ ವೇಳೆ ಬೂತಿನ ಕಾಂಗ್ರೆಸ್ ಪಕ್ಷದ ಏಜೆಂಟರುಗಳ ಮೇಲೆ ವಿನಾಕಾರಣ ಸುಳ್ಳು ಪೊಲೀಸು ಕೇಸು ಹಾಕಿಸಿ ಬೆದರಿಸುವ ಬಾಲಕೃಷ್ಣರ ವಿರುದ್ಧವಾಗಿ ನಮ್ಮ ಪರವಾಗಿ ಕೆಲಸ ಮಾಡಿದವರ ಪರವಾಗಿ ನಾನು ಜೆಡಿಎಸ್‍ನಿಂದಲಾದರೂ ಸರಿ ಸ್ಪರ್ಧಿಸಿ ಕಾರ್ಯಕರ್ತರ ಯೋಗಕ್ಷೇಮಕ್ಕೆ ನಾನಿರುವುದನ್ನು ತೋರಿಸಲೆ ಬೇಕಿದೆ ಎಂದರು.
ಶುಭದಿನದಂದು ನಾನು ಜೆಡಿಎಸ್ ಸೇರ್ಪಡೆಯಾದನಂತರ ನಾಗಮಂಗಲ ಮತ್ತು ಚಾಮರಾಜಪೇಟೆಯಲ್ಲಿ ಚೆಲುವರಾಯಸ್ವಾಮಿ,ಜಮೀರ್ ವಿರುದ್ಧ ಬೃಹತ್ ಸಮಾವೇಶ ನಡೆಸಿದ ರೀತಿಯೆ ಇಲ್ಲಿಯೂ ಮಾಗಡಿ ವಿಧಾನ ಸಭಾಕ್ಷೇತ್ರದ ಬೃಹತ್ ಜೆಡಿಎಸ್ ಬೆಂಬಲಿಗರು ಮತ್ತು ಬಾಲಕೃಷ್ಣರ ವಿರೋಧಿ ಸಮಾವೇಶವನ್ನು ಖಂಡಿತ ನಡೆಸುವುದಾಗಿ ತಿಳಿಸಿದರು.ಹೇಮಾವತಿ ನೀರು ಮಾಗಡಿ ಕೆರೆಗಳಿಗೆ ಹರಿಸುವುದಿಲ್ಲ ಎಲ್ಲಾಸುಳ್ಳು ಎಂದು ಖುದ್ದು ಶಾಸಕರು ಪೈಪ್ ಲೈನ್ ಹಾದುಹೋಗುವ ಕಡೆ ರೈತರನ್ನು ಹುಯಿಲೆಬ್ಬಿಸಿ ಹೇಮಾವತಿ ಕಾಮಗಾರಿಗೆ ಪರೋಕ್ಷವಾಗಿ ಅಡ್ಡಿ ಪಡಿಸುತ್ತಿದ್ದಾರೆ.ಇದರ ಫಲವನ್ನು ಮುಂಬರುವ ಚುನಾವನೆಯಲ್ಲಿ ಜನರೆ ಬುದ್ದಿ ಪಾಠಕಲಿಸುತ್ತಾರೆ ಎಂದರು.
ಟಿಕೇಟು ಕೊಡಿಸುವಿರಾ?
ರಾಮನಗರ ಜಿಲ್ಲಾಪಂಚಾಯಿತಿ ಅಧ್ಯಕ್ಷರು ಎಂದು ಬಿಂಬಿಸಿ ಅಲ್ಲಿಯೂ ಮೋಸಮಾಡಿ ಚನ್ನಪಟ್ಟಣದ ನಮ್ಮ ಕಾಂಗ್ರೆಸ್ ರವರನ್ನು ಅಧ್ಯಕ್ಷರನ್ನಾಗಿಸಿದ ಸಂದರ್ಭದಲ್ಲಿ ಮನೆಯಲಿ ಬೇಸರದಿಂದ ಎರಡು ತಿಂಗಳು ಸುಮ್ಮನಿದ್ದಾಗ ಖುದ್ದು ಮನೆಗೆ ಬಂದ ಸ0ಸದರು ಸಮಾಧಾನಪಡಿಸಲು ಬಂದಾಗ ನನಗೆ ಅರಿವಿಲ್ಲದೆ ಆರನೆ ಜ್ಞಾನ ಎಂಬಂತೆ ಮುಂದಿನ 2018 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟು ಕೊಡಿ ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಆ ಬಗ್ಗೆ ಒಂದು ಕಾರ್ಯಕ್ರಮದಲ್ಲಿ ಸಂಸದರು ಸಾರ್ವಜನಿಕವಾಗಿ ಪ್ರಸ್ತಾವನೆ ಮಾಡಿ ಮಾತನಾಡಿದ್ದರು.

ರಾNEWS:- ಇಂದಿರಾ ಇಡ್ಲಿ ಬರುವ ಮುನ್ನವೇ ದೇವೇಗೌಡರ ಬಿಸಿ ಬಿಸಿ ಮುದ್ದೆ ರೆಡಿ, ಇದು ಶರವಣ ಸ್ಪೆಷಲ್…!

ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಾಮೆಂಟ್ ಬಾಕ್ಸ್‍ನಲ್ಲಿ ಬರೆದು,ಆನಂತರ ಆ್ಯಡ್ ಕಾಮೆಂಟ್ ಬಟನ್ ಒತ್ತಿ.ನಿಮ್ಮ ಬರಹ ಮತ್ತು ಸ್ಪರ್ಶ ವೆಬ್ ಸೈಟ್‍ಗೆ ಹಾರೈಕೆಯಾಗುತ್ತೆ.

Please follow and like us:
0

COMMENTS

  • L prasanna kumar

    we’ll support you Sri please send message when your joining JDS prasanna Kumar from magadi JAY JAS JAY MANJU SRI

Leave a Comment