ರಾNEWS:- ಗೋಪಾಲಯ್ಯನವರ ನಡಿಗೆ ಎತ್ತ ಕಡೆಗೆ

  • 404884_159447764166163_912126648_nಅದು ಎರೆಡುಸಾವಿರದ ಹದಿಮೂರು, ವಿಧಾನಸಭೆ ಚುನಾವಣೆಯ ಸಮಯ ಆಗ ಜನ ಗೋಪಾಲಯ್ಯನವರ ಬಗ್ಗೆ ಏನೆಂದು ಕೊಂಡಿದ್ದರು.ಈಗ ನಾಲ್ಕು ವರ್ಷಗಳ ನಂತರ ಅದೇ ಮಹಾಲಕ್ಷಿಪುರ ವಿಧಾನಸಭಾ ಕ್ಷೇತ್ರದ ಬಗ್ಗೆ ಏನು ಹೇಳುತ್ತಿದ್ದಾರೆ.ಅಂದುಕೊಂಡಿದ್ದೇ ಒಂದು ಈಗ ಹೇಳುತ್ತಿರುವುದೇ ಒಂದು ಯಾಕೆಂದರೇ ಗೋಪಾಲಯ್ಯನವರು ಎರೆಡೂ ಬಾವನೆಗಳ ನಡುವೆ ನಡೆದು ಬಂದಿದ್ದಾರೆ.ಆಗಿನ ಅಂದರೇ ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರದ ಸ್ಥಿತಿಗತಿಗಳಿಗೂ ಇಂದಿಗೂ ಬಹಳ ವ್ಯತ್ಯಾಸಗಳಿವೆ.ಈ ಕ್ಷೇತ್ರದಲ್ಲಿ ಅಭಿವೃದ್ಧಿ ಅನ್ನೊದು ಶರವೇಗದಲ್ಲಿ ಸಾಗಿದೆ.ಅದಕ್ಕೆ ಆಗಿರುವ ಕೆಲಸಗಳೇ ಸಾಕ್ಷಿ.ಸುಮಾರು ಹದಿನೈದು ಇಪ್ಪತ್ತು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಕೆಲಸಗಳನ್ನು ಗೋಪಾಲ್ಯನವರು ಮಾಡಿ ಮುಗಿಸಿದ್ದಾರೆ.
    ಒಬ್ಬ ಶಾಸಕನಿಗೆ ಕ್ಷೇತ್ರದ ಬಗ್ಗೆ ಮುಂದಾಲೋಚನೆ ಇರಬೇಕು.ಯಾವ ಕೆಲಸ ಹೇಗೆ ಯಾವ ಪರಿಯಲ್ಲಿ ಸಾಗಬೇಕೆಂಬ ಯೋಜನೆಗಳ ಅರಿವಿರಬೇಕು.ಆಗ ಕೆಲಸಗಳು ಕ್ರಮಬದ್ದವಾಗಿ ಸಾಗುತ್ತೆ.ಆ ಕ್ರಮಬದ್ದ ಕ್ರಿಯಾಶೀಲತೆ ಗೋಪಾಲಯ್ಯನವರಿಗೆ ಚನ್ನಾಗಿದೆ.ಇವತ್ತು ಕೆಲ ಕ್ಷೇತ್ರದಲ್ಲಿ ಕೆಲವು ಶಾಸಕರಿದ್ದಾರೆ ಅವರು ಕೆಲವೂಂದು ಬಡಾವಣೆಗಳಿಗೆ ತಲೆ ಹಾಕೊಲ್ಲಾ ಯಾಕೆಂದರೇ ಜನರ ಪ್ರೆಶ್ನೆಗಳಿಗೆ ಅವರಲ್ಲಿ ಉತ್ತರವಿರುವುದಿಲ್ಲಾ.ಆದರೇ ಗೋಪಾಲಯ್ಯನವರು ಹಾಗಲ್ಲಾ ಅವರು ಇಡೀ ಕ್ಷೇತ್ರದಲ್ಲಿ ಓಡಾಡುತ್ತಾರೆ ಯಾಕೆಂದರೆ ಜನ ಅವರನ್ನ ತುಂಬು ಹೃದಯದಿಂದ ಸ್ವಾಗತಿಸುತ್ತಾರೆ.
    ಗೋಪಾಲಯ್ಯನವರು ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕ್ಷೇತ್ರದ ಜನಕ್ಕಾಗಿ ಉತ್ತಮ ಆರೋಗ್ಯಕ್ಕಾಗಿ ಅನೇಕ ಮೆಡಿಕಲ್ ಕ್ಯಾಂಪ್‍ಗಳನ್ನು ಮಾಡಿ ನೋಂದವರಿಗೆ ನೆರವಾಗಿದ್ದಾರೆ.ಆ ಬಗ್ಗೆ ಅವರನ್ನ ಕೇಳಿದಾಗ. . .ಅವರು ಹೇಳಿದ್ದು ಹೀಗೆ. . .
    “ಸಾರ್ ನಾನು ಮೊದ್ಲಿಂದಲ್ಲೂ ಅಂದ್ರೆ ಶಾಸಕನಾಗುವುದಕ್ಕೆ ಮುಂಚ್ಚೆಯಿಂದಲ್ಲೂ ಹೆಲ್ತ್ ಕ್ಯಾಂಪ್ ಮಾಡಿಕೊಂಡು ಬಂದಿದ್ದೇನೆ,ಹಿಂದೆ ನಾನು ಮನೆನಲ್ಲಿ ನಮ್ಮ ಏರಿಯಾದಲ್ಲಿ ಕಮಲಾನಗರದಲ್ಲಿ. . .ಆರೋಗ್ಯ ಶಿಬಿರ ನಡೆಸುತ್ತಿದ್ದೆ.ಶಾಸಕನಾದ ಮೇಲೆ ನಮ್ಮ ಆಫಿಸ್ಸ್‍ನಲ್ಲಿ ಶುರು ಮಾಡಿದೆ ಎಲ್ಲ ಅಂದಾಜು ಹತ್ರತ್ರ ಸುಮಾರು ನೂರು ಆರೋಗ್ಯ ಶಿಬಿರಗಳನ್ನ ಮಾಡಿದ್ದೀನಿ. ಸುಮಾರು ಒಂದು ಐದು ಸಾವಿರ ಜನಕ್ಕೆ ಕಣ್ಣಾಪರೇಶನ್ ಆಗಿದೆ,ಯಶಸ್ವಿನಿ ಕಾರ್ಡ್‍ಗಳನ್ನ ಮಾಡಿಸಿದ್ದೀನಿ,ಹಾರ್ಟ್ ಆಪರೇಶನ್ ಕೂಡಾ ಲೆಕ್ಕ ಇಲ್ಲದಂತೆ ಆಗಿವೆ. ನಂದೇನೂ ಇಲ್ಲಾಣ್ಣ ಎಲ್ಲಾ ಜನರ ಆಶೀರ್ವಾದ.ನಾನು ಮಾಡಿದ್ದನ್ನ ಹೇಳ್ಕೋಳೋಕೆ ಇಷ್ಟ ಪಡೋಲ್ಲಾ.

ಗೋಪಾಲಯ್ಯನವರು ಶಾಸಕರಾಗಿ 49 ತಿಂಗಳನ್ನ ಮುಗಿಸಿದ್ದಾರೆ ಅವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಅವರ ಕ್ಷೇತ್ರಾಭಿವೃದ್ಧಿಯ ಬಗೆ ಕೇಳಿದಾಗ ಅವರು ಅವರದೇ ಅನುಭವವನ್ನ ಹಂಚ್ಚಿಕೊಂಡಿದ್ದು ಹೀಗೆ.. . . .
“ನೋಡೀ ಪ್ರವೀಣ್‍ರವರೇ ಈ ಕ್ಷೇತ್ರದಲ್ಲಿ ಜ್ವಲಾಂತ ಸಮಸ್ಯಗಳಿದ್ದೋ,ರಾಜ್‍ಕುಮಾರ್ ರಸ್ತೆ ನವರಂಗ್ ರೋಡು ಸ್ಯಾನೇಟರಿ ವ್ಯವಸ್ಥೆ ಸರಿ ಇರಲಿಲ್ಲಾ.ಕೇತಮಾರನಹಳ್ಳಿನಲ್ಲಿ ಮಳೆ ಬಿದ್ದಾಗ ಸುಮಾರು ಮನೆಗೆ ನೀರು ನುಗ್ಗುತ್ತಿತ್ತು ಆಮೇಲೆ ಫಸ್ಟ್ ಬ್ಲಾಕ್ ರೋಡ್ ಇಲ್ಲೆಲ್ಲಾ ಹದಿನೈದು ವರ್ಷದ ಹಿಂದೇನೆ ದುರಸ್ತಿ ಆಗಬೇಕಿತ್ತು,ಆಗಿರಲಿಲ್ಲಾ, ಅದೆಲ್ಲಾ ಮಾಡಿಸಿದೆ,ನಾನು ಗೆದ್ದ ವಾರನೇ ಮೊದ್ಲು ಕೈಗೆತ್ತಿಕೊಂಡಿದ್ದ ಕೆಲಸ ಅಂದ್ರೆ ಸ್ಯಾನೇಟರಿ ಆಮೇಲೆ ವಾಟರ್ ಲೈನ್.ಸುಮಾರು ಕಡೆ ಆರಿಚ್ಚು ಪೈಪ್‍ಗಳನ್ನ ತಗೆಸಿ ಒಂಬತಿಂಚ್ಚು ಮಾಡಿಸಿದೆ.ಬೇಜಾರ್ ವಿಚರ ಅಂದ್ರ ಇದೆಲ್ಲಾ ಕೆಲಸ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಆಗಬೇಕಿತ್ತು,ಸುಮಾರು 55ವರ್ಷದ ಪೈಪ್‍ಗಳು ಕಿಲುಲಬಿಡಿದು ಹಾಳಾಗಿತ್ತು,ಅದೆಲ್ಲ ಜೇಂಜ್ ಮಾಡಿಸಿದೆ.ಪಾಪ ಜನ ಅಷ್ಟು ವರ್ಷಗಳಿಂದ ಕಷ್ಟ ಅನುಭವಿಸಿದ್ದಾರೆ.ಕಮಲಾನಗರದಲ್ಲಿ ಬಹಳಷ್ಟು ಕೆಲಸಗಳು ಆಗಿದ್ದು ನಮ್ಮ ಅಲ್ಲಿನ ಕೌಂಸ್ಸಿಲರ್ ಗೆದ್ದಾದ ಮೇಲೆ.ಒಟ್ಟು ಕ್ಷೇತ್ರದಲ್ಲಿ ತ್ವರಿತಗತಿಯಲ್ಲಿ ಕೆಲಸ ಆಗಿದೆ.ಈ ನಾಲ್ಕು ವರ್ಷಗಳಿಂದ ಏನು ಕೆಲಸ ಮಾಡಿದ್ದೀನೋ ಇನ್ನು ಆರು ತಿಂಗಳಲ್ಲಿ ಇನ್ನೂ ಹೆಚ್ಚು ವೇಗದಲ್ಲಿ ಕೆಲಸ ಆಗಲಿದೆ,ನನ್ನ ಕ್ಷೇತ್ರದಲ್ಲಿ ಬಾಕಿ ಉಳಿದ ಕೆಲಸಗಳನ್ನ ಪಟ್ಟಿ ಮಾಡಿ ಬಜೆಟ್ ಅಪ್ಪ್ರೋವಲ್ ತಗೊಂಡಿದ್ದೀನಿ,ಇಗಾಗಲ್ಲೇ ಅಧಿಕಾರಿಗಳೊಂದಿಗೆ ಚರ್ಚೆಕೂಡಾ ಮಾಡಿದ್ದೀನಿ,ಜನರಿಗೆ ನೀರಿನ ಸಮಸ್ಯಗೆ ಬಿಸ್ಲರಿ ಪ್ಲಾಂಟ್‍ಗಳು,ಫಸ್ಟ್ ಬ್ಲಾಕ್ ಫ್ಲೈ ಓವರ್,ವಿವೇಕಾನಂದ ಕಾಲೇಜ್ ಅಂಡರ್ ಪಾಸ್,ಮತ್ತೆ ರಾಜ್‍ಕುಮಾರ್ ಒಳಾಂಗಣ ಕ್ರೀಡಾಂಗಣ ನೆನೆಗುದಿಗೆ ಬಿದ್ದಿತ್ತು,ಇನ್ನ ಒಂದು ವರೆ ತಿಂಗಳಲ್ಲಿ ಕಂಪ್ಲೀಟ್ ಮಾಡ್ತಿವಿ,ಸರ್ಕುಲರ್ ಪಾರ್ಕ್‍ನಲ್ಲಿ ಒಂದು ಒಳೆ ಜಿಮ್ ಮಾಡಿದೀವಿ ಸ್ವಲ್ಪ ದಿವಸದಲ್ಲಿ ಇದೋಂದು ಮಾದರೀ ಕ್ಷೇತ್ರವಾಗೊದು ಗ್ಯಾರೆಂಟಿ.

  • “ ಗೋಪಾಲಯ್ಯನವರ ಕ್ಷೇತ್ರಾಭಿವೃದ್ದಿಯ ನಡಿಗೆ ನಿರಂತರವಾಗಿ ಸಾಗಲಿ ಅಂತ ಹೇಳಿ ಅವರಿಗೆ ಮುಂಗಡವಾಗಿ ಹುಟು ಹಬ್ಬದ ಶುಭಾಷಯ ಹೇಳಿ ಬಂದೆ.
    ರಾ.17523344_1188659104578352_8219530111128676329_n
Please follow and like us:
0

COMMENTS

Leave a Comment