ಚಿತ್ರ ಮಂದಿರದಲ್ಲಿ ಅಭಿಮಾನಿಗಳ ಮಹಾಪೂರವನ್ನ ನಿಯಂತ್ರಿಸಲಾಗದೇ ರೇಸ್ ಕೋರ್ಸ್‍ನಲ್ಲಿ ಟಿಕೆಟ್ ವಿತರಿಸಿದ್ದು ಯಾವ ಕನ್ನಡ ಚಿತ್ರಕ್ಕೆ ನಿಮಗೆ ಗೊತ್ತಾ. ?

images (3)
ಖಡಕ್ ಲುಕ್

ಈಗ ಕಾಲ ಬದಲಾಗಿದೆ,ಅಂಗೈಯಲ್ಲೇ ಪ್ರಪಂಚವನ್ನ ನೋಡುವ ಕಾಲ,ಒಂದು ಸಿನಿಮಾ ನೋಡಬೇಕೆಂದರೇ ಇಂಟರ್‍ನೆಟ್‍ನಲ್ಲಿ ಟಿಕೇಟ್ ಬುಕ್ ಮಾಡಬಹುದು ಆದರೇ ಆಗ ಎಪ್ಪತ್ತರ ದಶಕದಲ್ಲಿ ಇಂಟರ್‍ನೆಟ್ ಕಂಪ್ಯೂಟರ್ ಯಾವುದೂ ಇರಲಿಲ್ಲಾ.ಸಿನಿಮಾ ನೋಡಬೇಕೆಂದರೇ ಟಾಕೀಸ್‍ಗೆ ಹೋಗಿ ಕ್ಯೂನಿಂತು ಟಿಕೇಟ್ ಖರೀದಿಸಬೇಕಿತ್ತು.ಅಂದಿನ ದಿನಗಳಲ್ಲಿ ಜನಸಾಗರವೇ ಚಿತ್ರಮಂದಿರದತ್ತ ಹರಿದು ಬರುತ್ತಿದದ್ದು ಅಣ್ಣಾ ಡಾ:ರಾಜ್‍ಕುಮಾರ್ ರವರ ಚಿತ್ರಗಳಿಗೆ.

ಅಂದಿನ ದಿನಗಳಲ್ಲಿ ಡಾ:ರಾಜ್‍ಕುಮಾರ್‍ರವರ ಹೊಸ ಚಿತ್ರದ ಮಾದಲ ದಿನದ ಟಿಕೇಟ್ ಪಡೆದವರು ಅದೃಷ್ಟವಂತರು ಮಾತ್ರವಲ್ಲಾ ಅವರು ಸಾಹಸಿಗಳು,ರಾಜ್‍ರ ಹೊಸ ಚಿತ್ರ ಬಿಡುಗಡೆಯಗುವ ಕೆಲ ದಿನಗಳ ಹಿಂದೆಯೇ ಮುಂಗಡವಾಗಿ ಟಿಕೇಟ್ ನೀಡಲಾಗುತ್ತಿತ್ತು.ಮಧ್ಯರಾತ್ರಿಯಿಂದ ಕ್ಯೂ ನಿಲ್ಲುತ್ತಿದ್ದರು.ಅದು ಫರ್ಲಾಂಗುದ್ದ ಇರುತ್ತಿತ್ತು.ಮಾದಲ ದಿನದ ಮೊದಲ ಶೋ ಟಿಕೇಟ್ ಪಡೆಯಲ್ಲು ನೂಕು ನೂಗಲಲ್ಲಿ ಅಭಿಮಾನಿಗಳು ಮುನ್ನುಗುತ್ತಿದ್ದರು.ಅಭಿಮಾವಿಗಳನ್ನು ಕಂಟ್ರೋಲ್ ಮಾಡಲು ಪೊಲೀಸರು ಹರ ಸಾಹಸ ಮಾಡುತ್ತಿದ್ದರು.ಪೊಲೀಸ್ ರಿಸರ್ವ್‍ವ್ಯಾನ್‍ಗಳಿಲ್ಲದೇ ಟಿಕೇಟ್ ನೀಡಲು ಸಾಧ್ಯವಾಗುತ್ತಿರಲಿಲ್ಲ.ಟಿಕೇಟ್ ವಿಚಾರಕ್ಕೆ ಅದೆಷ್ಟೋ ಬಡಿದಾಟಗಳೂ ಆಗಿವೆ.

ನವರಂಗ್ ಚಿತ್ರಮಂದಿರದಲ್ಲಿ ಬೆಳಗಿನ ಜಾವ ಮೂರರಿಂದ ನಾಲ್ಕುಗಂಟೆಗೆ ಕ್ಯೂ ನಿಲ್ಲುತ್ತಿದದ್ದನು ನಾನೇ ಕುದ್ದು ನೊಡಿದ್ದೇನೆ.ಆ ಚಿತ್ರಮಂದಿರದ ಕಾಂಪೋಂಡಿನ ಬದಿಯಲ್ಲಿ ಮೋರಿಯೊಂದಿತ್ತು.ಫುಟ್‍ಬಾತ್ ಮೋರಿಗಳಲ್ಲಿ ಬಿದ್ದರೂ ಮೈ ಮೂಳೆ ಮುರಿದರೂ ಅಣ್ಣನ ಚಿತ್ರದ ಟಿಕೇಟ್ ಪಡೆದೇ ತೀರಬೇಕೆಂದು ಅಭಿಮಾನಿಗಳು ಪ್ರಾಣದ ಹಂಗನ್ನ ತೊರೆದು ಮುನ್ನುಗುತ್ತಿದ್ದರು.ಆ ಪರಿಯ ಟಿಕೇಟ್‍ಗಾಗಿನ ಗುದ್ದಾಟ ಇದದ್ದು ಡಾ:ರಾಜ್‍ಕುಮರ್‍ರವರ ಚಿತ್ರಗಳಿಗೆ ಮಾತ್ರ.ಇಡೀ ರಾತ್ರಿ ಚಳಿಎನ್ನದೇ ಮಳೆಎನ್ನದೆ ಅಭಿಮಾನಿಗಳು ಅಣ್ಣನ ಚಲನಚಿತ್ರದಮಾದಲ ಶೋ ನೋಡಲು ಕಾತರಿಸುತ್ತಿದ್ದರು.hqdefault fi

ಟಿಕೇಟ್‍ಗಾಗಿ ಪ್ರಾಣ ಬಿಟ್ಟ ಅಭಿಮಾನಿ:

1978 ಅದು ಡಾ:ರಾಜ್‍ಕುಮರ್ ರವರ ಯಶಸ್ವಿ ಚಿತ್ರಗಳ ಸುಗ್ಗಿಯ ಕಾಲ.ಶಂಕರ್‍ಗುರು,ಆಪರೇಶನ್ ಡೈಮೆಂಡ್ ರಾಕೇಟ್,ತಾಯಿಗೆ ತಕ್ಕ ಮಗ ಮುಂತಾದ ಯಶಸ್ವಿ ಚಿತ್ರಳ ಪರ್ವಕಾಲವದು,ತಾಯಿಗೆ ತಕ್ಕ ಮಗ ಚಿತ್ರ ಚಿತ್ರಿಕರಣವಾಗುತ್ತಿದ್ದ ಸಮಯದಲ್ಲೇ ಒಂದು ಸಂಚಲನ ಮೂಡಿತ್ತು.ಬಾಕ್ಸಿಂಗ್ ಗ್ಲೌಸ್ ತೊಟ್ಟು ಫೋಸ್ ನೀಡಿದ ಅಣ್ಣನ ಸ್ಟೈಲ್‍ಗೆ ಅಭಿಮಾನಿಗಳು ರೋಮಾಂಚನಗೊಂಡಿದ್ದರು.ಗದೆ ಹಿಡಿದು ವ್ಯಾಯಾಮ ಮಾಡುವ ಭಂಗಿಯಲ್ಲಿ ಕಬ್ಬಿಣದಂತಹಾ ದೇಹದಾಡ್ರ್ಯಕ್ಕೆ ಬೆರಗುಗೊಳ್ಳುತ್ತಿದ್ದರು.ಭಾರಿ ಕ್ರೇಸ್ಸ್ ಹುಟ್ಟಿಸಿದ್ದ ಅಣ್ಣನ ತಾಯಿಗೆ ತಕ್ಕ ಮಗ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಹಬ್ಬ ಆಚರಿಸಿದ್ದರು.ಮಾದಲ ದಿನದ ಟಿಕೇಟ್ ಪಡೆಯಲು ಅಭಿಮಾನಿಗಳು ದೊಡ್ಡ ಪೈಪೋಟಿ ನಡೆಸಿದ್ದರು.ಬೆಂಗಳೂರಿನ ವಿ.ವಿ.ಪುರಮ್ ಸಮೀಪವಿದ್ದ ಒಕ್ಕಲಿಗರ ಸಂಘದ ಆವರಣದ ಸಂಜಯ ಚಿತ್ರಮಂದಿರ ಡಾ:ರಾಜ್ ಚಿತ್ರ ಪ್ರದರ್ಶನಕ್ಕೆ ಹೆಸರಾಗಿತ್ತು.ಈ ಕಡೆ ಮಾವಳ್ಳಿ ಆ ಕಡೆ ಪಾರ್ವತಿಪುರ ಚದುರಡಿಗಳ ದೂರದ ಚಾಮರಾಜಪೇಟೆ,ಬಗಲಲ್ಲಿನ ಬಸವನಗುಡಿ, ಒಂದೆರೆಡು ರಸ್ತೆಗಳ ದೂರದ ವಿ.ವಿ.ಪುರ. . .ಹೀಗೆ ಸಂಜಯ ಚಿತ್ರಮಂದಿರದ ಸುತ್ತಲೂ ಡಾ:ರಾಜ್‍ಕುಮಾರ್ ಅಭಿಮಾನಿಗಳು ರಾರಾಜಿಸುತ್ತಿದ್ದರು.ಡಾ:ರಾಜ್‍ಕುಮಾರ್ ಹೊಸ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದ ತಕ್ಷಣ ಅಂದಿನಿಂದಲೇ ಒಂದು ದೊಡ್ಡ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳವಂತೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು.ತಾಯಿಗೆ ತಕ್ಕ ಮಗ ಚಿತ್ರ ಬಿಡುಗಡೆಯಾದಾಗ ಮಾದಲ ದಿನದ ಟಿಕೇಟ್ ಖರೀದಿಗಾಗಿ ಸಂಜಯ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಮಹಾಪೂರವೇ ನೆರಿದ್ದಿತ್ತು.ಗುದ್ದಾಟ ನೂಕು ನುಗಲು ತಳ್ಳಾಟ ಜಗ್ಗಾಟ ಹೀಗೆ ಅಲ್ಲಿ ತಾಯಿಗೆ ತಕ್ಕ ಮಗ ಚಿತ್ರಕ್ಕೆ ಮಾದಲ ದಿನದ ಪ್ರದರ್ಶನದ ಟಿಕೇಟಿಗಾಗಿ ದೊಡ್ಡ ಸಮರವೇ ನಡೆದಿತ್ತು ಆಗ ಗುಂಪಿನಲ್ಲಿದ್ದ ಒಬ್ಬ ಅಭಿಮಾನಿ ಕಾಲ್ತುಳಿತಕ್ಕೆ ಸಿಕ್ಕಿ ಪ್ರಾಣ ಬಿಟ್ಟ. .!

ದೇವಸ್ಥಾನ,ಯಾತ್ರ ಸ್ಥಳಗಳಲ್ಲಿ ದೈವ ದರುಶನಕ್ಕೆ ಜನಜುಂಗಳಿಯಾಗಿ ಭಕ್ತಾಧಿಗಳು ಕಾಲ್‍ತುಳಿತಕ್ಕೆ ಸತ್ತ ಅದೆಷ್ಟೊ ಪ್ರಕರಣಗಳ ಬಗ್ಗೆ ಕೇಳಿದ್ದೇವೇ.ಆದರೇ ಒಂದು ಚಲನಚಿತ್ರದ ಟಿಕೇಟ್‍ಗಾಗಿ ಕ್ಯೂನಲ್ಲಿ ಸತ್ತ ಉದಾಹರಣೆ ತಾಯಿಗೆ ತಕ್ಕ ಮಗ ಚಿತ್ರಕ್ಕೆ ಮಾತ್ರ.huliya_haalina_mevu

ತಾಯಿಗೆ ತಕ್ಕ ಮಗ ಚಿತ್ರದ ಅಭಿಮಾನಿಯ ದುರಂತ ಸಾವಿನ ನಂತರ ಅಂದರೇ ಅದೇ 1978ರಲ್ಲಿ ಬಿಡುಗಡೆಯಾದ ಹುಲಿಯ ಹಾಲಿನ ಮೇವು.ಈ ಚಿತ್ರಕ್ಕೆ ಮತ್ತೆ ಅದೇ ಟಿಕೇಟ್ ವಿತರಣೆಯ ಸಮಸ್ಯಯಾಯಿತು,ಡಾ:ರಾಜ್‍ಕುಮಾರ್ ರವರ ಅಭಿಮಾನಿಗಳ ಮಹಾಪೂರವನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸಮಸ್ಯಯಾಯಿತು.ಅಂತಹಾ ಸಂದರ್ಭದಲ್ಲಿ ಪೊಲೀಸರು ಒಂದು ಪ್ಲಾನ್ ಮಾಡಿದರು ಅದೇನೆಂದರೆ ಡಾ:ರಾಜ್‍ಕುಮಾರ್ ರವರ ಹುಲಿಯ ಹಾಲಿನ ಮೇವು ಚಿತ್ರದ ಮಾದಲ ದಿನದ ಟಿಕೇಟುಗಳನ್ನು ನಗರದ ರೇಸ್ ಕೊರ್ಸ್‍ನಲ್ಲಿ ಕೊಡೊಲಾಯಿತು.ಅಲ್ಲಿ ಬಂಬು ಸಾರ್ವೆಗಳನ್ನು ಬಳಸಿ ಸಾಲು ಸಾಲಾಗಿ ಅಭಿಮಾನಿಗಳು ನಿಲ್ಲುವಂತೆ ಮಾಡಿ ಟಿಕೇಟ್ ವಿತರಿಸಲಾಯಿತು.ಒಂದು ಚಲನಚಿತ್ರದ ಟಿಕೇಟುಗಳನ್ನ ನೀಡಲು ,ಅಭಿಮಾನಿಗಳನ್ನ ನಿಯಂತ್ರಿಸಲು ರೇಸ್ ಕೊರ್ಸ್‍ನಲ್ಲಿ ಟಿಕೇಟ್ ನೀಡಿದ್ದು ಅಣ್ಣಾ ಡಾ:ರಾಜ್‍ಕುಮಾರ್‍ರವರ ಚಿತ್ರಕ್ಕೆ ಮಾತ್ರ.ಅದೊಂದು ಐತಿಹಾಸಿಕ ದಾಖಲೆ.ಅಂದಿಗೆ ಟಿ.ವಿ. ಫೇಸ್‍ಬುಕ್ ವಾಟ್ಸ್ ಅಪ್ ಯಾವುದೂ ಇರಲಿಲ್ಲ.ಆದರೇ ಅಂತಹಾ ಸಂದರ್ಭದಲ್ಲಿ ದಾಖಲೆಗಳ ದಾಖಲೆ ಮುರಿದದ್ದು ಡಾ:ರಾಜ್‍ಕುಮಾರ್‍ರವರ ಜನಪ್ರಿಯತೆ.ಅಂತಹಾ ದಾಖಲೆ ಗಳನ್ನು ಮುಂದೆಯೂ ಸಹಾ ಬರೆಯುತ್ತೆನೆ.ಕನ್ನದ ಹೆಮ್ಮೆಯ ಸಂಗತಿಗಳು ಅಂತರೀಕ್ಷದಲ್ಲೆ ಅಲೆ ಅಲೆಯಾಗಿ ಮೂಡಿಬರುತ್ತದೆ.

ರಾ.ಪ್ರವೀಣ್

 

 

Please follow and like us:
0

COMMENTS

 • harishkumar

  Annavra gata vaibhava …bere yaarindalu saadhyavilla 👍👌☺

 • B.Deepak gowda

  Super informations about our Karnataka which all we didnt know all these days.All the best for this site as it is giving more information about our Karunadu

 • Suryanarayana Rao

  Nimma ee mahithigagi hruthpoorvaka dhanyavadhagalu ….

 • Suryanarayana Rao

  Nimma Mahithigagi Dhanyhavadhagalu …

 • admin

  thanks for feedback

 • ಚಂದ್ರ ಶೇಖರ್ ,ಅರ್

  ನಿಮಗೆ 101 ವಂದನೆಗಳು ಈಗಿನ ಕಂದಂಮ್ಮ ಗಳಿಗೆ ದಾಖಲೆ ಮಹಾರಾಜ ಯಾರೆಂದು ತಿಳಿದಿಲ್ಲ ವಾಟ್ಸಅಪ್ ಫಸಬೂಕ್ ಟ್ವಿಟ್ಟರ್ ಯಲ್ಲ ಇದ್ದಿದ್ದರೆ ಅಣ್ಣವರು ಆಗಲೇ ಕರ್ನಾಟಕ ರತ್ನ ಅಲ್ಲ,ಭಾರತ ರತ್ನ,ಅಲ್ಲ ವಿಶ್ವ ರತ್ನ 1976 ರಲ್ಲೆ ಯಾರೆಂದು ಈಗಿನ ಕುನ್ನಿ ಗಳಿಗೆನು ಗೊತ್ತು ನೀವು ಮತ್ತು ನಿಮ್ಮ ಅಂಕಣ ಇಡಿ ವಿಶ್ವಕ್ಕೆ ತಿಳುಸುತ್ತಿರುವ ನಿಮಗೆ ಧನ್ಯವಾದಗಳು

 • Anonymous

  ಸಾರ್ ಸೂಪರ್ ಸಾರ್…ಅದ್ಯಾರೋ ಕಬಾಲಿ ಅಂತೆ..ತುಕಾಲಿ ಅಂತೆ…ಭಾರತದಲ್ಲಿರೋ ಎಲ್ಲಾ ಮಾದ್ಯಮಗಳು ಒಂದು ವಾರ ಪ್ರಚಾರ ಕೊಟ್ರು ಫಿಲ್ಮ್ ಓಡಿದ್ದು ಮೂರೇ ದಿನ…ಆದ್ರೆ ಅಣ್ಣಾವ್ರ ಫಿಲ್ಮ್ ಗಳು ನೂರು ದಿನವೂ ಕಿಕ್ಕೆರೆದು ಪ್ರದರ್ಶನವಾಗ್ತಿತ್ತು ಅಂದ್ರೆ ಕನ್ನಡಿಗರ ಕಣ್ಮಣಿ ಅಣ್ಣಾವ್ರ ಪವರ್ ಎಷ್ಟಿತ್ತು ಅಂತಾ ಗೊತ್ತಾಗುತ್ತೆ…ಸಾರ್ ತುಂಬಾ ಧನ್ಯವಾದಗಳು ಸಾರ್…

 • Hanumantharaju

  ನಮಸ್ಕಾರ ಸರ್ ಅವತ್ತು ಅಣ್ಣಾವ್ರು ಅಭಿಮಾನಿ‌ ಧೇವರುಗಳೆ ಅಂದ್ರು. ಆದ್ರೆ ಇವತ್ತು ಅದೇ ಅಭಿಮಾನಿ ದೇವರುಗಳನ್ನ ನೇರುಪ್ಪುಡಾ ಕಬಾಲಿ ಅಂತ ಕರೆಯೋ ಜನಾನು ಇದ್ದಾರೆ ನಿಮಗೆ ನಮ್ಮ ಧನ್ಯವಾದಗಳು ಸರ್

 • Anil Kumar

  Thank you so much for the lovely article.. No one is equal to our Dr. Rajkumar.. One and only Vishwa maanava..

 • Anonymous

  He is only superstar all the film industry

 • ಜಾನಕಿ .ಆರ್

  ಅಣ್ಣಾವ್ರಿಗೆ ಸಾಟಿ ಯಾರೂ ಇಲ್ಲ..ಅವರಿಗೆ ಅವರೇ ಸಾಟಿ..ಅ೦ತಹ ಮಹಾನ್ ಚೇತನಕ್ಕೆ ಹೋಲಿಕೆಯೇ ಇಲ್ಲ…ಕನ್ನಡ ಅ೦ದ್ರೆ ರಾಜಣ್ಣ ,ರಾಜಣ್ಣ ಅ೦ದ್ರೆ ಕನ್ನಡ ಅಷ್ಟೆ…!!!!!!

 • ಜಾನಕಿ .ಆರ್

  ಧನ್ಯವಾದಗಳು

 • Anonymous

  ನಮಸ್ಕಾರ, ಜಗತ್ತಿನ ಏಕೈಕ ನಟಸಾವಭೌಮ, ಡಾ.ರಾಜಕುಮಾರ, ಬೇರೆ ಗೊಂದಲ ಬೇಡ.

 • Anonymous

  Gatha vaibhava. Anubhavavu saviyalla. Adara nenapu savi.

 • ಗಂ.ದಯಾನಂದ ಕುದೂರು

  ಇಂತಹ ಅನೇಕ ರೋಚಕ ಘಟನೆಗಳು ಕನ್ನಡ ಚಿತ್ತಗಳಲ್ಲಾಗಿದೆ.
  ಇಂತಹ ಸುದ್ದಿಗಳನ್ನು ಇಂದಿನ ತಲೆಮಾರಿಗೆ ತಿಳಿಸುತ್ತಿರುವ ನಿಮಗೆ ಧನ್ಯವಾದಗಳು.
  ಗಂ.ದಯಾನಂದ ಕುದೂರು

 • ಪ್ರವೀಣ್ ಸರ್ ನಾನು ಚಿಕ್ಕ ಹುಡುಗನಿಂದನ್ನು ನಿಮ್ಮನ್ನು ನೋಡಿ ಬೆಳೆದವನ್ನು. ಅಣ್ಣಾವ್ರ ಸಾಧನೆ ಹಾಗೂ ಅಣ್ಣಾವ್ರ ಅಭಿಮಾನಿಗಳ ಸಾಧನೆಯನ್ನು ಯಾವ ಭಾಷೆಯ ನಟ ಕೈ ಯಲ್ಲೂ ಮಾಡಕ್ಕೆ ಆಗಲ್ಲ ಸರ್. ಪ್ರವೀಣ್ ಸರ್ ನಿಮ್ಮ ನಾಯಕತ್ವದಲ್ಲಿ ಜೀವನ ಚೈತ್ರ ದ ಮೆರವಣಿಗೆ ಇಡೀ ವಿಶ್ವದಲ್ಲೇ ಒಂದು ದಾಖಲೆ ಯ ಮೆರವಣಿಗೆ. ಅಣ್ಣಾವ್ರ ರ ಹಾಗೂ ಅಣ್ಣಾವ್ರ ಅಭಿಮಾನಿಗಳ ಸಾಧನಗಳನ್ನು ಈಗಿನ ಕಾಲದ ಹುಡುಗರಿಗೆ ತಿಳಿಸುತ್ತಿದಿರ ನಿಮಗೆ ನನ್ನ ಕಡೆಯಿಂದ ಕೋಟಿ ನಮನಗಳು

 • Anonymous

  Ty very much sir super article Anna andhrea nam anna Dr.rajkumar …….

 • Chaitra gowda

  Superb article sir Anna andhrea nam anna Dr.rajkumar……

 • admin

  ಧನ್ಯವಾದಗಳು ನಿಮ್ಮ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ.
  ರಾ.ಪ್ರವೀಣ್.

 • Lokesh

  Dr.Rajkumar legend of legends.

 • Lokesh

  Dr.Rajkumar matinee idol of karnataka.

 • Prakash

  Anna great, Praveen dhanyavadhagalu

 • Anonymous

  One and only raj forever in Karnataka

 • shivram

  Navu sri krishnadevarayana kaladalli irallila, hadaru besaravilla
  Navu purandara dasarannu kannarenodilla, hadaru bejarilla
  Himmudi pulakeshiya holiyvuva chupadha katthi navu kanalilla, hadaru kamdani illa
  Kanakarige sri krishna thirugidhaga naviralilla, hadaru dhukkavilla
  Narasimhanannu kambhadindha varategedu hiranya kasyapana harbhata Hanubavisalilla, parvagilla
  Kumbarana madekeyallina neeranu saviyalilla, hadaru dhahavilla
  Kavirathna khalidhasana srungara rasavannu mukutham nodalilla, hadaru chinte illa
  Harjuna Bhabruvahana yudadha sainyadalli navu HOradalilla,
  Ramana pattabhishekadha sambramadalli PAAlgolalila
  Mayurana kannada premavannu shaviyalilla,
  HADARE YALLA YVUGAGALA MAHA PURASHARANNU VANDE YVUAGADALLI NODUVA SOWBHAGYA NAMAGE HA PARAMATHMA KOTTIDANE..
  YAKENRE
  NAVU ANNURANNU NODIDHIVI
  HAURGE INYARU SATI
  INYARU PAIPOTI……….

  JAI MUTHANNA…..

 • Ramesh s

  Mr Praveen I was your classmate at national middle school during 1974 to 76.you may not remember.but d fact is that I am a great fan of Annavru.i respect u for that reason.keep going.i have your books on Annavru.

 • vishwanath

  Dr Raj Kumar anta NATA berobba huttalu sadyavilla nimma article super

 • RAJ

  olleya mahiti praveen sir . inde yendu uttilla munde yendu uttodilla anta mahan daivathma shakti dr rajkumar avara mahiti odi bahala santosa aytu .. Innu hechhechhu mahiti kodta iri sir thank u…

 • ಕೆ.ಎಂ.ಉಮೇಶ್.

  ಪೃವೀಣ್ ರವರೆ ನಿಮ್ಮ ಅಂತರಂಗದ ಅಭಿಮಾನ ಅತ್ಯಂತ ಅದ್ಭುತವಾದ ಅಂಕಣ… ಇಂದಿನ ಅಭಿಮಾನಿಗಳು ಅಂದಿನ ಅಭಿಮಾನಿಗಳ ಅಭಿಮಾನ..ಅವರ ಭಾಷಾಬಿಮಾನ.. ನಾಡುನುಡಿಯ ಮೇಲಿನ ಅವರಿಗಿದ್ದ ಅಭಿಮಾನ…ಕನ್ನಡ ಎಂದರೆ ಡಾಕ್ಟರ್ ರಜ್ಕುಮಾರ್. ಡಾಕ್ಟರ್ ರಾಜ್ಕುಮಾರ್ ಅಂದರೆ ಕನ್ನಡ ಎಂಬ ಭಕ್ತಿ… ಡಾಕ್ಟರ್ ರಾಜ್ಕುಮಾರ್ ರವರ ಚಿತ್ರ ಬಿಡುಗಡೆಯಾದರೆ ಇಡೀ ಏರಿಯಾ ತುಂಬ ಕನ್ನಡದ ಭಾವುಟ ಕಟ್ಟಿ ..ಕಟ್ಔಟ್ಗೆ ಹಾಲಿನಾಬಿಷೇಕ ಭಾರಿ ಹುವಿನಹಾರ.. ಎಲ್ಲಕಿಂತ ಸಾವಿರಾರು ಮಂದಿ ನಕ್ಷತ್ರ ಮೆರವಣಿಗೆ ಮಾಡುತ್ತಿದ್ದ ಮೆರವಣಿಗೆ ಓಹ್ ಅದ್ಭುತವಾದ ಅನುಭವ….ಹಿಂದಿನವರ ಅಭಿಮಾನದ ಅಭಿಮಾನಕೆ ಗೌರವಿಸುವುದು ಹಾಗು ನೆನೆಯುವುದು .ಇವರಿಗೆ ನಾವು ಕೋಡುವ ಗೌರವ……. ಕನ್ನಡ ಕಸ್ತೂರಿ ಡಾಕ್ಟರ್ ರಾಜ್ಕುಮಾರ್ ಅಭಿಮಾನಿಗಳ ಸಂಘ…ಕೆ.ಆರ್.ಪುರಂ…ಬೆಂಗಳೂರು..

 • shyam

  ಅಣ್ಣಾವ್ರು ದೇವತಾ ಮನುಷ್ಯ ದೈವ ಮಾನವ ಅವರು
  ಅವರ ಕಲೆಗೆ ಸರಿಸಾಟಿ ಯಾರು ಇದ್ದಾರೆ ಈ ಭೂಮಿ ಮೇಲೆ ಆ ದೇವರು ಬಂದರು ಆಗಲ್ಲ

Leave a Comment