ಓಪನಿಂಗ್ ಶಾಟ್

ಸಂಪಾದಕೀಯ

ನೆಲ ಮತ್ತು ಗೋಡೆಯ ನಡುವೆ ಸಣ್ಣ ಸಣ್ಣ ಮಣ್ಣ ಹೆಂಟೆಗಳನ್ನ ಹೊತ್ತು ಕೊಂಡು ಓಡಾಡುವ ಇರುವೆಗಳು,ಕೋಣೆಯ ಸಜ್ಜಾದ ಮೇಲೆ ಮೂಲೆಯಲ್ಲಿ ಪರಪರ ಶಭ್ಧಮಾಡುತ್ತಾ ಸರಸರನೆ ಸರಿದು ಹೋಗುವ ಜಿರಳೆಗಳು.ನೀರವ ಮೌನದಲ್ಲಿ ಕಿಚ್ಚ ಕಿಚ್ಚ ಅಂತ ಶಭ್ಧಮಾಡಿ ಗೋಡೆಯ ಹಿಡಿತವೇ ನನ್ನ ಜೀವಾಳ ಅಂತ ಹುಳ್ಳಕ್ಕಾಗಿ ಹೊಂಚ್ಚು ಹಾಕುವ ಹಲ್ಲಿಗಳು.ದಟ್ಟ ಅರಣ್ಯದಲ್ಲಿ ಘರ್ಜಿಸುವ ಹುಲಿ ಸಿಂಹಗಳು,ಕಿವಿ ಇಲ್ಲದಿದ್ದರೂ ಬರೀ ಕಂಪನದಿಂದ ಸರಸರನೆ ಸರಿದು ಹೆಡೆ ಎತ್ತುವ ಸರ್ಪಗಳು,ಇಂದಿನ ಕಾಲಕ್ಕೆ ಸ್ಯಾನೇಟರಿ ಚೆಂಬರ್ಗಳೇ ನಮಗೆ ಸ್ವರ್ಗ ಸುರಂಗಗಳು ಅಂತ ನೆಲ ಅಗೆಯುವ ಹೆಗ್ಗಣಗಳು,ಇತ್ತಿಚಿನ ಮೊಬೈಲ್ ಆಕ್ರಮಣದಿಂದ ನಮ್ಮ ಸಂತತಿಯೇ ಅಳಿವಿನಂಚಿಗೆ ಬಂತು ಅಂತ ಆಧುನಿಕತೆಯನ್ನ ಶಪಿಸುವ ಗುಬ್ಬಚ್ಚಿಗಳು. . . . ಇವೆಲ್ಲಾ ಹೇಗೆ ಪ್ರಕೃತಿಯ ಸಹಜ ಸೃಷ್ಟಿಗಳೋ ಹಾಗೆ ನಾನೂ ಕೂಡ ಮಾನವಾರಣ್ಯದಲ್ಲಿನ ಒಂದು ಅಣು. ಅಂದ ಹಾಗೆ ನನ್ನ ಹೆಸರು ರಾ.ಪ್ರವೀಣ್. ಹಲೋ ನನ್ನ ಪ್ರಿತಿಯ ಓದುಗರೇ. . . ..

ನನ್ನ ಬರಹದ ಬದುಕು ಸಿಲ್ವರ್ ಜೂಬಲಿ ಮುಟ್ಟಿದೆ.ಬರವಣಿಗೆಯ ಭಾಂಧವ್ಯಕ್ಕೆ 25ವರ್ಷಗಳು ತುಂಬಿವೆ.ಅದೇನು ತೀರಾ ದೊಡ್ಡ ವಿಚಾರವೇನಲ್ಲಾ ನಾನಿನ್ನೂ ಮೆಟ್ಟಿಲಿನ ಮೇಲೆ ಇದ್ದೇನೆ.ಹತ್ತುವ ಶಕ್ತಿ ಇರುವ ತನಕ ಹತ್ತುತ್ತಲ್ಲೇ ಇರುತ್ತೆನೆ ಮುದ್ರಣ ಮಾಧ್ಯಮ. . .ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡಿಕೊಂಡು ಬಂದಿರುವ ನಾನು ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದೆನೆ.

www.rapraveen.com

ಪ್ರಪ್ರಧಮ ಬಾರಿಗೆ ಒಂದು ಸ್ವಂತ ವೆಬ್ ಸೈಟ್ ಮಾಡಿರುವೆ. ನನ್ನ ವೆಬ್ ಸೈಟ್ನ ಅಂತರಂಗಕ್ಕೆ ಬಂದಿದ್ದೀರಿ.ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ.ನಿಮ್ಮ ಸಲಹೆ ಸಹಕಾರಗಳಿಗೆ ನನ್ನ ಹೃದಯದ ಬಾಗಿಲು ಸದಾ ತೆರೆದಿರುತ್ತೆ.ಪತ್ರಿಕೋದ್ಯಮದಲ್ಲಿ ಏನೇ ಅನುಭವವಿದ್ದರೂ ಅಂತರೀಕ್ಷ ಮಾಧ್ಯಮಕ್ಕೆ ನಾನು ಹೊಸಬ.ಅಂಬೆಗಾಲಿನ ಪುಟ್ಟ ಹೆಜ್ಜೆಗಳಿಗೆ ನಿಮ್ಮ ಅಂಗೈನ ಆಸರೇ ಅತ್ಯಗತ್ಯ.ಎಡವಿದರೂ ತೊದಲಿದರೂ ಕೃಪೆ ಮಾಡಿ ಕೈಹಿಡಿಯಿರಿ.

ನೆನಪಿನ ರಸ್ತೆಯಲ್ಲಿ ಬರವಣಿಗೆಯ ಬದುಕಿನ ಬಂಡಿಯ ಚಕ್ರದ ಗುರುತು.

ನನ್ನ ಬದುಕು ಹೇಗಾಗಿದೆ ಎಂದರೇ ಬರೆಯದೇ ಬದುಕಲು ನನ್ನಿಂದ ಸಾಧ್ಯವಾಗುವುದಿಲ್ಲ.ಬರವಣಿಗೆ ಅನ್ನೋದು ನನ್ನ ಬದುಕಿನ ಭಾಗವಾಗಿದೆ.ಇಂಗ್ಲೀಷ್ ಕಾಂನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದ ನನಗೆ ಕನ್ನಡದ ಬರವಣಿಗೆಯ ಅಭ್ಯಾಸ ಬಂದದ್ದು ಹೇಗೆ ಅಂತ ಕೆದಕುತ್ತಾ ಹೋದರೆ ಮೂರು ದಶಕಗಳ ಹಿಂದಕ್ಕೆ ಹೋಗಬೇಕು. . .! ಬನ್ನಿ.

ಹಳೆಯ ಕಾಲದ ಜನ ದಿನಾಂಕ ತಿಂಗಳನ್ನ ನೆನಪಿಟ್ಟುಕೊಳ್ಳುವುದು ಕಷ್ಟ ಅಂತ ಹಬ್ಬಗಳ ಸಂದರ್ಭಗಳ ಮಾನದಂಡವನ್ನ ಅನುಸರಿಸಿ ಹೀಗೆ ಮಾತನಾಡುತ್ತಿದ್ದರು “ಮಾರ್ನಾಮಿ ಹಬ್ಬ್ದಿಂದೀಚ್ಗೆ .ಆಮೇಲೆ ಸಂಕ್ರಾಂತಿ ಕಳೆದ್ಮೇಲ್ಲೆ ಅಮಾವಾಸ್ಯ ಆಚ್ಗೆ,” ಇದು ಅಂದಿನವರ ನೆನಪಿನ ಬಾಷೆ.ನನ್ನ ನೆನಪಿನ ಬುತ್ತಿಯ ಗಂಟು ಬಿಚ್ಚಬೇಕಾದರೇ ನಾನು ಮುಖ್ಯವಾಗಿ ಅವಲಂಬಿಸೋದು ಅಣ್ಣಾ ಡಾ:ರಾಜ್ಕುಮಾರ್ರವರನ್ನ.ನನಗೆ ಕಾಲ ಸಂದರ್ಭ. . .ಘಟನೆಗಳ ನೆನಪು ಮಾಡಿಕೊಳ್ಳಲು ಇರುವುದೊಂದೇ ಮಾರ್ಗ ಅದೇನೆಂದರೇ ನನ್ನ ಮನಸ್ಸಿನ ಮಂದಿರದಲ್ಲಿ ನೆಲೆಗೊಂಡಿರುವ ನನ್ನ ಆರಾಧ್ಯದೈವ ಡಾ:ರಾಜ್ಕುಮಾರ್..ನನ್ನ ನೆನಪಿನ ಅಂಗಳದ ಪ್ರತಿ ಘಟ್ಟದ ಗೋಡೆಯ ಮೇಲೆ ಡಾ:ರಾಜ್ರ ಚಲನಚಿತ್ರಗಳ ಪೋಸ್ಟರ್ಗಳಿವೆ.ಅದೇ ಆದಾರಗಳಿಂದ ನಾನು ನನ್ನ ಹಳೆಯ ದಿನಗಳನ್ನ ಮೆಲುಕು ಹಾಕುತ್ತೆನೆ.

1985 ಧ್ರುವತಾರೆ

ಅಣ್ಣಾ ಡಾ:ರಾಜ್ಕುಮಾರ್ರವರ ನೂರಾನಾಲ್ಕನೆಯ ಚಿತ್ರ ಧ್ರುವತಾರೆ ಚಿತ್ರದ ಬಿಡುಗಡೆಯ ಸಂದರ್ಭ.ಈ ಕಾಲಘಟ್ಟದಲ್ಲಿ ನಾನು ಪಿಯೂಸಿಯ ಮೊದಲ ಘಟ್ಟವೇÉರುತ್ತಿದ್ದೆ.ನಮ್ಮ ಮನೆ ಇದದ್ದು ವೆಸ್ಟ ಆಫ್ ಕಾರ್ಡ್ ರೋಡ್ನಲ್ಲಿ.ಆದರೇ ನನ್ನ ಬಾಲ್ಯದ ಮುಖ್ಯ ಕೇಂದ್ರ ಬಿಂದುವಾಗಿದದ್ದು ಆ ಹಳ್ಳಿ. . .!

ಕೇತಮಾರನಹಳ್ಳಿ

ಬೆಂಗಳೂರಿನ ರಾಜಾಜಿನಗರದಲ್ಲಿ ನವರಂಗ್ ಚಿತ್ರಮಂದಿರವಿರುವ ಡಾ:ರಾಜ್ಕುಮಾರ್ ರಸ್ತೆಗೆ ಅಂಟಿಕೊಂಡು ಪುಟ್ಟದಾಗಿ ಹರಡಿಕೊಂಡ ಒಂದು ಹಳ್ಳಿಯಿದೆ.ಎಡಕ್ಕೆ ಸೆಕೆಂಡ್ಸ್ಟೇಜು,ಬಲಕ್ಕೆ ಕಾರ್ಡ್ ರೋಡು ಹಿಂದಕ್ಕೆ ಫಸ್ಟ್ ಬ್ಲಾಕು ಮುಂದಕ್ಕೆ ನವರಂಗು ಈ ಎಲ್ಲದರ ನಡುವೆ ಇರುವುದೇ ಕೇತಮಾರನಹಳ್ಳಿ. ಇದು ನನ್ನ ತಾಯಿಯ ತವರೂರು.ನನ್ನ ತಾತನ ಮನೆ ಇರುವುದು ಇಲ್ಲೆ.ನನ್ನ ತಾತ ಸಿ.ಮದ್ದಯ್ಯನವರ ಬಗ್ಗೆ ಮುಂದೊಂದು ದಿನ ಬರೆಯುತ್ತೇನೆ ಅಂದ ಹಾಗೆ ಕಮ್ಮಿಂಗ್ ಟು ಕೇತಮಾರನಹಳ್ಳಿ. . .ನನ್ನ ಬರವಣಿಗೆಯ ವೃಕ್ಷದ ಬೀಜ ಮೊಳಕೆ ಒಡೆದದ್ದು ಇಲ್ಲೇ.ಅಂದಿನ ದಿನಗಳಲ್ಲಿ ಕೇತಮಾರನಹಳ್ಳಿಯಲ್ಲಿ ನಮ್ಮದೊಂದು ಗೆಳೆಯರ ಗುಂಪಿತ್ತು. ಕುಮಾರ್, ನಾರಾಯಣ, ರಾಮಿ,ನಾಗರಾಜ್, ಸುಧಿ, ಸತೀಶ, ಮೋಯಿ,ಕಡ್ಡಿಪುಡಿ ಕೃಷ್ಣ,ಜೈಶೀಲ,ಹನುಮಂತ,ನಾಗಪುರದ ಮಂಜುನಾಥ್ ಮುಂತಾದವರಿದ್ದರು.ಎಲ್ಲರೂ ಸೇರಿ ಡಾ:ರಾಜಣ್ಣನವರ ಧ್ರುವತಾರೆ ಚಿತ್ರಕ್ಕೆ ಶುಭಕೊರುವ ಸಲುವಾಗಿ ಎನನ್ನಾದರೂ ಮಾಡಬೇಕು ಅಂತ ನಿರ್ಧರಿಸಿದೆವು.ಆಗ ನನ್ನ ಕಜ್ಸಿಂಸ್ಸಗಳಾದ ಪವನ್ ಮತ್ತು ಮಧು ತಮ್ಮ ವಿನೋದ್ ಇಂಜಿನಿಯರಿಂಗ್ ವಕ್ರ್ಸ್ನಿಂದ ಒಂದು ಕಬ್ಬಿಣದ ದೊಡ್ಡ ನಕ್ಷತ್ರವನ್ನ ತಯಾರಿಸಿದರು.ಸಾಮಾನ್ಯವಾಗಿ ಬಿದಿರು ಕಡ್ಡಿಗಳಿಂದ ಸ್ಟಾರ್ಗಳನ್ನ ಮಾಡುತ್ತಾರೆ.ಆದರೇ ಅಂದಿಗೆ ಮೊದಲಬಾರಿಗೆ ಕಬ್ಬಿಣದಲ್ಲಿ ಮಾಡಲಾಗಿತ್ತು.ಎಲ್ಲಾ ಸೇರಿ ಕಬ್ಬಿಣದ ನಕ್ಷತ್ರದ ಆಕಾರಕ್ಕೆ ನ್ಯೂಸ್ಸ್ ಪೇಪರ್ಗಳನ್ನ ಮೆತ್ತಿಸಿ,ಅದಕ್ಕೆ ಕೆಂಪು ಮತ್ತು ಹಳದಿ ಬಣ್ಣದ ಬಣ್ಣದ ಕಾಗದಗಳನ್ನ ಅಂಟಿಸಿ ಒಂದು ವರ್ಣರಂಜಿತ ಸ್ಟಾರ್ನ ಸಿದ್ಧಪಡಿಸಿದೆವು.ಅದೇ ಸ್ಟಾರ್ನ ಮೆರವಣಿಗೆಯಲ್ಲಿ ಕೊಂಡು ನವರಂಗ್ ಚಿತ್ರಮಂದಿರಕ್ಕೆ ಹಾಕಬೇಕೆಂಬುದೇ ನಮ್ಮ ಒಂದು ಅಭಿಮಾನದ ಯೋಜನೆಯಾಗಿತ್ತು.ಆದರೇ ಎಲ್ಲದಕ್ಕೂ ಮುನ್ನ ಧ್ರುವತಾರೆ ಚಿತ್ರಕ್ಕೆ ಶುಭಕೋರುವ ಒಂದು ಕರಪತ್ರವನ್ನ ಮುದ್ರಿಸಬೇಕು ಅದರಲ್ಲಿ ನಕ್ಷತ್ರದ ಮೆರವಣಿಗೆಯ ಬಗ್ಗೆ ಸೊಚಿಸಬೇಕು.ಮೊದಲನೆಯದಾಗಿ ನಮ್ಮ ಗುಂಪಿಗೆ ಅಂದರೇ ಸಂಘಟನೆಗೆ ಒಂದು ಹೆಸರಿಡಬೇಕು. ಇದೆಲ್ಲಾ ವಿಚಾರಗಳನ್ನ ಯೋಚಿಸುತ್ತಾ,ಮಂಜುನಾಥನಗರದ ರಾಘವೇಂದ್ರ ಪ್ರೆಸ್ಸ್ಗೆ ಹೋದೆವು,ಆಗ ಕಂಪ್ಯೂಟರ್ರು. . .ಕಂಪೋಸ್ಸಿಂಗ್. .ಯಾವುದೂ ಇಲಿಲ್ಲಾ.ಅಕ್ಷರಗಳ ಮೊಳೆಗಳನ್ನ ಜೋಡಿಸಿ ಮುದ್ರಿಸುವ ಯಂತ್ರವಿತ್ತು.ಅದನ್ನ ಲೆಟರ್ಪ್ರೆಸ್ಸ್ ಎನ್ನುತ್ತಿದ್ದರು.ಮುದ್ರಣದ ಮಾಲೀಕರಾದ ರವೀಕುಮಾರ್ರವರ ಬಳಿ ನಮ್ಮ ಕರಪತ್ರದ ಬಗ್ಗೆ ಹೇಳಿದೆವು.ಆಗ ಅವರು “ನಾವೇನಿದ್ರೂ ಪ್ರಿಂಟ್ ಮಾಡ್ತೀವಿ,ಮ್ಯಾಟರ್ ನೀವೆ ಬರ್ಕೋಡ್ ಬೇಕು”ಅಂದರು.ಆದರೇ ಬರೆಯೊರು ಯಾರು. .? ಆಗಲ್ಲೇ ನನ್ನ ಅಂತರಂಗದಲ್ಲಿ ಆರಂಭವಾಗಿದ್ದು .!

ಆರಾಧ್ಯದೈವನಿಗೆ ಅಕ್ಷರಗಳ ಆರಾಧನೆ.. . .

ನನ್ನ ಹೃದಯದಲ್ಲಿ ಹುದುಗಿದ್ದ ನನ್ನ ಆರಾಧ್ಯದೈವ ಡಾ:ರಾಜಣ್ಣನವರ ಮೇಲಿನ ಅಭಿಮಾನ ಅಕ್ಷರಗಳಿಂದ ಅಂಕೃತವಾಗಿ ಹೊರಹೊಮ್ಮಿತು.ನಮ್ಮ ಸಂಘಟನೆಗೆ ನಾನು ಸೂಚಿಸಿದ ಹೆಸರು `ವಿಶ್ವ ಕಲಾ ಸಾರ್ವಭೌಮ ಡಾ:ರಾಜ್ಕುಮಾರ್ ಅಭಿಮಾನಿಗಳ ಬಳಗ`.ಧ್ರುವತಾರೆ ಚಿತ್ರಕ್ಕೆ ಶುಭಕೊರುವ ಒಂದು ಲೇಖನವನ್ನ ಬರೆದೆ. ಅದೇ ನನ್ನ ಮೊದಲ ಲೇಖನ.ಹಾಗೆ ಶುರುವಾದ ನನ್ನ ಬರವಣಿಗೆಯ ಬದುಕು ಇನ್ನಾದರೂ ಸಾಗುತ್ತೇ ಇದೆ.

ಮೊದಲ ಪುಸ್ತಕ.

ನಮ್ಮ ಮನೆಯ ಸಮೀಪವೇ ಒಂದು ತಿರುಮಲ ಪ್ರಿಂಟರ್ಸ್ ಎಂಬ ಲೆಟರ್ ಪ್ರೆಸ್ಸ್ ಮುದ್ರಣಾಲಯ ಆರಂಭವಾಗಿತ್ತು.ಕನ್ನಡ ಚಳವಳಿಗಾರರಾಗಿದ್ದ ಸತ್ಯನಾರಾಯಣ್ ಅವರ ಮಗ ಸುರೇಶ್ ಅದರ ಮಾಲೀಕ.ಸುರೇಶ್ ಮತ್ತು ನಾನು ತುಂಬಾ ಆತ್ಮೀಯರಾಗಿದ್ದೆವು.ಅವನು ಕೂಡಾ ಅಣ್ಣವೃ ಅಭಿಮಾನಿ.ಮೋಳೆ ಜೋಡಿಸುವ ಆ ಪ್ರೆಸ್ಸನಲ್ಲೇ ನಾನು ಹೆಚ್ಚು ಕಾಲ ಕಳೆಯುತ್ತಿದ್ದೆ.ಅಲ್ಲಿ ನಾಮಕರಣದಿಂದ ಹಿಡಿದು ಮದುವೆ. . .ವೈಕುಂಠಸಮಾರಾಧನೆಗಳ ತನಕ ಅನೇಕ ಬಗೆಯ ಕಾರ್ಡ್ಗಳ ಮುದ್ರಣವಾಗುತ್ತಿತ್ತು.ಅದೇ ಸಮಯದಲ್ಲಿ 1989 ಡಾ:ರಾಜ್ಕುಮಾರ್ ರವರ ನೇ ಹುಟ್ಟುಹಬ್ಬದ ಸಮಾರಂಭವನ್ನ ಎರ್ಪಡಿಸಲಾಗಿತ್ತು.ಅಣ್ಣನ ಹುಟ್ಟುಹಬ್ಬಕ್ಕೆ ನಾನು ಎನನ್ನಾದರೂ ಮಾಡಲೇಬೇಕೆಂದು ಚಡಪಡಿಸುತ್ತಿದ್ದೆ.ಆಗ ನಮ್ಮ ಸರೇಶ್ ಒಂದು ಐಡಿಯಾ ಕೋಟ್ಟ “ಅಣ್ಣವೃ ಮೇಲೆ ಒಂದು ಬುಕ್ ಬರೀ,ನಮ್ ಪ್ರೆಸ್ಸ್ನಲ್ಲೇ ಪ್ರಿಂಟ್ ಮಾಡಿಕೊಡ್ತಿನಿ”ಅಂದ.ನಾನು ಪುಸ್ತಕ ಬರೆಯೋದಾ. .?.ಆ ಶಕ್ತಿನನ್ನಲ್ಲಿದೆಯಾ,ಒಂದು ರೀತಿ ಆತಂಕ,ಭಯ ಮತ್ತು ಕುತೂಹಲ ನನ್ನನ ಆವರಿಸಿತು.ಅಣ್ಣನ ಆಶೀರ್ವಾದ ನನಗೆ ಇದ್ದೇ ಇರುತ್ತೆ ಅಂತ ಧೈರ್ಯಮಾಡಿ `ಕರ್ನಾಟಕದ ಕಲಾ ಶಿಲ್ಪಿ` ಎಂಬ ಪುಸ್ತಕವನ್ನ ಬರೆದೇಬಿಟ್ಟೆ.ಅಂದಿಗೆ ಆ ಪುಸ್ತಕದ ಬೆಲೆ ಎಷ್ಟು ಗೋತ್ತೆ.? ಕೇವಲ ಎರೆಡುವರೆ ರೂಪಾಯಿ.ನಮ್ಮ ಸುರೇಶ್ ತಲೆ ಉಪಯೋಗಿಸಿ ಮುಖಪುಟವನ್ನ ವರ್ಣದಲ್ಲಿ ಮುದ್ರಿಸಿದ್ದರು.ಆ ಪುಸ್ತಕವನ್ನ ಅಣ್ಣ ಡಾ:ರಾಜ್ಕುಮಾರ್ ರವರ ಹುಟ್ಟುಹಬ್ಬದ ಸಮಾರಂಭದಲ್ಲಿ ಆದಿಚುಂಚನಗಿರಿ ಸ್ವಾಮೀಜಿಗಳು ಬಿಡುಗಡೆ ಮಾಡಿದರು.ವಿಜಯನಗರದ ನ್ಯೂ ಪಬ್ಲಿಕ್ ಇಂಗ್ಲೀಶ್ ಶಾಲೆಯ ಹತ್ತಿರವಿದ್ದ ಆಟದ ಮೈದಾನದಲ್ಲಿ ಆ ಸಮಾರಂಭವನ್ನ ಎರ್ಪಡಿಸಲಾಗಿತ್ತು.

ಅಂದಿನ ದಿನಗಳಲ್ಲಿ ನನ್ನ ಬದುಕಿನ ಬಹುಪಾಲು ಸಮಯವನ್ನ ಕಳೆದದ್ದು ಎರೆಡು ಪ್ರಮುಖ ವಿಷಯಗಳಲ್ಲಿ ಒಂದು ಕನ್ನಡ ಚಳವಳಿ ಮತ್ತೋಂದು ಡಾ:ರಾಜ್ಕುಮಾರ್ ಅಭಿಮಾನಿಯಾಗಿ ಮಾಡಿದ ಚಟುವಟಿಕೆಗಳು,ಮುಂದೆ ಬದುಕು ಹೇಗೆ ವಿದ್ಯಾಭ್ಯಾಸದ ದಿಕ್ಕೆನು,ಯಾವ ಕ್ಷೇತ್ರವನ್ನ ಆಯ್ಕೆ ಮಾಡಬೇಕು ಲೈಫ್ನಲ್ಲಿ ಸೆಟಲ್ ಆಗೋದು ಹೇಗೆ. . .ಉಹುಂ ನವರ್ ನಾನು ನನ್ನ ಭವಿಷ್ಯದ ಬಗ್ಗೆ ಯೋಜನೆ ಹಾಗಿರಲಿ ಆ ನಿಟ್ಟಿನಲ್ಲಿ ನಾನು ಚಿಂತಿಸಲೇಇಲಾ.್ಲಫ್ಯೂಚರ್ ಬಗ್ಗೆ ಯೋಚಿಸುವ ನೇಚರ್ನನಗಿರಲಿಲ್ಲಾ.ನನ್ನ ಲೈಫ್ ಬಗ್ಗೆ ನಾನು ಕೇರ್ಲೆಸ್ಸ್ ಮಾಡಿದ್ದು ದೊಡ್ಡ ತಪ್ಪು ಅಂತ ಅರಿವಾಗುವ ಹೋತ್ತಿಗೆ ಕಾಲ ಬಹುದೂರ ಸರಿದಿತ್ತು.ನೆನಪುಗಳ ಮಾತು ಮಧುರವಿರಬಹುದು ಆದರೇ ವಾಸ್ತವದ ಬದುಕು ಬವಣೆಗಳ ಬೀಡು.ಓಕೆ. . .ಒಕೇ. .ಬರೀತಾ ಬರೀತಾ ಸೆಂಟರ್ನಲ್ಲಿ ಸೆಂಟಿಮೆಂಟ್ಸೇರ್ಕೊಂಡು ಬಿಡ್ತು.ಆ ವಿಚಾರ ಬಿಡಿ. ನನ್ನ ಬರಹದ ಬದುಕಿನ ಬಂಡಿಯ ಚಕ್ರದ ಗುರುತುಗಳನ್ನ ನಿಮಗೆ ಗೊತ್ತುಪಡಿಸುತ್ತೆನೆ.

ಜಾಣಗೆರೆ ವೆಂಕಟರಾಮಯ್ಯನವರ ಚಳವಳಿಯ ಚಾವಡಿ ಮೇಲೆ ಚಕಳಮಕಳ ಹಾಕಿ ಕುಳಿತ್ತಿದ್ದೆ.

ಬರೀತಾ 1990

ಕನ್ನಡ ನಾಡು ನುಡಿ,ನೆಲ ಜಲದ ಪರವಾಗಿ ಅನೇಕ ಚಳವಳಿಗಳು ನಡೆಯುತ್ತಿದ್ದವು.ಜಾಣಗೆರೆ ವೆಂಕಟರಾಮಯ್ಯನವರ ನೇತೃತ್ವದಲ್ಲಿ ಕನ್ನಡಿಗರ ಹೋರಾಟ ರಂಗ ಎಂಬ ಸಂಘಟನೆಯಲ್ಲಿ ರಾ.ಸೋಮನನಾಥ್,ಲಕ್ಷೀನಾರಾಯಣ್,ಜ್ಞನೇಶ್ ಮುಂತಾದ ಅನೇಕ ಹೋರಾಟಗಾರರಿದ್ದರು.ಅವರೋಂದಿಗೆ ನಾನೂ ಅನೇಕ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದೆ.ವಾಟಾಳ್ ನಾಗರಾಜ್,ನಾರಾಯಣಕುಮಾರ್,ಅಖಿಲ ಕರ್ನಾಟಕ ಡಾ:ರಾಜ್ಕುಮಾರ್ ಅಭಿಮಾನಿಗಳ ಸಂಘ,ಆರ್.ಎಸ್.ಎನ್ ಗೌಡರ ಕನ್ನಡ ರಣಧೀರರ ಪಡೆ. . .ಹೀಗೆ ಯಾವುದೇ ಸಂಘಟನೆಗಳ ಹೋರಾಟವಾದರೂ ನಾನು ಸಕ್ರೀಯವಾಗಿ ಭಾಗವಹಿಸುತ್ತಿದ್ದೆ.

ಜಾಣಗೆರೆ ವೆಂಕಟರಾಮಯ್ಯನವರು `ಮಾರ್ಧನಿ` ವಾರ ಪತ್ರಿಕೆಯನ್ನ ಆರಂಭಿಸಿದಾಗ ನಾನು ಕ್ರೈಮ್ ಮತ್ತು ಸಿನಿಮಾ ಲೇಖನಗಳನ್ನು ಬರೆಯುತ್ತಿದ್ದೆ.ಆನಂತರ ಪ್ರವೀಣ್ನಾಯಕ್ರ ಕಲಾಕೌಸ್ತುಭ ಮಾಸ ಪತ್ರಿಕೆಯಲ್ಲಿ ಅಣ್ಣ ಡಾ:ರಾಜ್ಕುಮಾರ್ರವರ ಕುರಿತು ಲೇಖನ ಬರೆಯುತ್ತಿದ್ದೆ.ಅದೇ ಪ್ರವೀಣ್ ನಾಯಕ್ ರವರು ಕ್ರೇಜಿಃ ಸ್ಟಾರ್ ಎಂಬ ಸಿನಿಮಾ ವಾರ ಪತ್ರಿಕೆಯನ್ನ ಆರಂಭಿಸಿದ್ದರು.ಅಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಚಿತ್ರ ಬಿಡುಗಡೆಯಾಯಿತು. . .!

ಓಂ. . . .!

ಬೆಂಗಳೂರು ಭೂಗತಜಗತ್ತಿನ ಹಿನ್ನಲೆಯಲ್ಲಿ ಪ್ರೇಮ ಕಥೆಯ ಸಮ್ಮಿಲನದಲ್ಲಿ ಮೂಡಿ ಬಂದ ಓಂ ಚಿತ್ರ ಅಭೂತಪೂರ್ವ ಯಶಸ್ಸನ್ನÀಗಳಿಸಿತು.ಶಿವಣ್ಣನವರ ಮೈನವಿರೇಳಿಸುವ ಅಭಿನಯ ಉಪೇಂದ್ರರ ಮನಮುಟ್ಟುವ ನಿರ್ದೇಶನ ಚಿತ್ರರಂಗದಲ್ಲಿ ಒಂದು ದಾಖಲೆಯನ್ನ ಸೃಷ್ಟಿಸಿತು.

ಅದೇವೇಳೆ ನಾನು ಓಂ ಚಿತ್ರದಲ್ಲಿ ನಟಿಸಿದ್ದ ಜೇಡರಹಳ್ಳಿ ಕೃಷ್ಣಪ್ಪನನ್ನ ಸಂದರ್ಶನ ಮಾಡಿದ್ದೆ.ಆನಂತರ ಅದೇ ಓಂ ಚಿತ್ರದಲ್ಲಿ ನಟಿಸಿದ್ದ ಮತ್ತೊಬ್ಬ ರೌಡಿಯನ್ನ ಸಂದರ್ಶನ ಮಾಡಲು ಕೋರ್ಟ್ ಬಳಿ ಹೋಗಿದ್ದೆ `ಈಗ ಬೇಡಾ ಸ್ವಲ್ಪ ದಿನ ಬಿಟ್ಟು ಬನ್ನಿ`ಅಂದ,ಯಾಕೆ ಹೀಗೆ ಹೇಳಿದ ಅಂತ ಸುಮ್ಮನಾದೆ.ಕೆಲವು ದಿನಗಳ ನಂತರ ಅದೇ ರೌಡಿಯಿಂದ ಕರೆ ಬಂತ್ತು,ಆಗ ಅವನು ಒಂದು ಭೀಕರ ರಹಸ್ಯವನ್ನ ಹೇಳಿದ ಅದೋಂದು ವರದಿ ನನ್ನ ಬರವಣಿಗೆ ಬದುಕಿನ ವೇಗವನ್ನ ಹೆಚ್ಚಿಸಿತು.ಅಂತಹಾ ರೋಚಕ ಸಂದÀರ್ಶನವನ್ನ ನೀಡಿದ್ದು ಮತ್ಯಾರೂ ಅಲ್ಲ ಅಂದಿನ ಖತರ್ನಾಕ್ ರೌಡಿ. . .!

ಕೊರಂಗು ಕೃಷ್ಣ. . .!

ಬೆಂಗಳೂರು ಭೂಗತ ಜಗತ್ತಿನ ಇತಿಹಾಸದಲ್ಲೇ ಎಂದೂ ನಡೆದಿರದಿದ್ದ ಒಂದು ಭಯಾನಕ ಕೊಲೆಯ ರಹಸ್ಯವನ್ನ ಕೊರಂಗು ಕೃಷ್ಣ ಬಯಲಿಗೆಳೆದಿದ್ದ.ಅದು ಬೆಂಗಳೂರು ಜೈಲಿನಲ್ಲಾಗಿದ್ದ ರೌಡಿ ಬಲರಾಮನ ಕೊಲೆಯ ಭೀಕರ ರಹಸ್ಯ.ಅಂತಹಾ ಸೆನ್ಸ್ಸ್ಸೇಶನಲ್ ಸ್ಟೋರಿಸಿಕ್ಕ ಮೇಲೆ ನಾನು ಕುತೂಹಲಗೊಂಡಿದ್ದೆ.ಕೈಯಲ್ಲಿ ರೋಚಕ ವರದಿ ಇದೆ ಆದರೇ ಅದನ್ನ ಪ್ರಕಟಿಸುವ ಪತ್ರಿಕೆ. .? ನಾನು ನಿಜಕ್ಕು ಆ ಸಂಧರ್ಶನವನ್ನ ಮಾಡಿದ್ದು ಕ್ರೇಜಿಃ ಸ್ಟಾರ್ ಪತ್ರಿಕೆಗೆ ಆದರೇ ಆ ಪತ್ರಿಕೆ ಆ ವೇಳೆಗೆ ನಿಂತು ಹೋಗಿತ್ತು.ಬರೀ ಓಂ ಚಿತ್ರದಲ್ಲಿನ ನಟನೆಯ ಬಗ್ಗಿ ರೌಡಿ ಕೃಷ್ಣನನ್ನು ಕೇಳಲು ಹೋಗಿದ್ದ ನನಗೆ ಬೆಂಗಳೂರಿನ ಅಂಡರ್ವಲ್ರ್ಡ್ನ ಬ್ರೇಕಿಂಗ್ ನ್ಯೂಸ್ಸಿಕ್ಕಿತ್ತು.ಅಂದಿಗೆ ಅನೇಕ ಪತ್ರಿಕೆಗಳು ಅನೇಕ ಬಗೆಯಲ್ಲಿ ಬಲರಾಮನ ಜೈಲ್ ಮರ್ಡರ್ ಬಗ್ಗೆ ಬರೆದಿದ್ದರು.ಆದರೇ ರಿಯಲ್ ಫ್ಯಾಕ್ಟ್ ಎಲ್ಲೂ ಬಂದಿರಲಿಲ್ಲ.ನನ್ನ ಕೈಯಲ್ಲಿ ಹಾಟ್ ನ್ಯೂಸ್ಸ್ ಇದೇ ಆದರೇ ಅದನ್ನ ಯಾರಿಗೆ ಕೊಡೋದು,ಯಾವ ಪತ್ರಿಕೆ ಅದನ್ನ ಪ್ರಕಟಿಸುತ್ತೆ.ನಾನು ಮೊದಲು ಹೋದದ್ದು ಅಂದಿನ ಟ್ಯಾಬಲಾಯಿಡ್ ಯುಗದ ಲೆಜೆಂಡ್ ಎನಿಸಿದ ಲಂಕೇಶ್ ಪತ್ರಿಕೆಗೆ,ಆನಂತರ ಈ ವಾರ ಕರ್ನಾಟಕ. ಎಲಾ ಕಡೆ `ನೋ ವೀ ಕಾಂಟ್ ಪಬ್ಲಿಶ್` ಎಂಬ ಉತ್ತರ ಬಂತ್ತು.ಎಂಥ ಕೆಲ್ಸ ಆಯ್ತು, ವಾಟ್ ಟು ಡೂ ? ಅನ್ನೋ ಚಿಂತೆಯಲ್ಲಿದ್ದೆ,. . .ಹೀಗೆ ಒಂದು ಕುತೂಹಲ ಮತ್ತು ಆತಂಕದಲ್ಲಿ ನಾನಿದ್ದಾಗ ಕೆ.ಆರ್.ರೂಡ್ನ ಶಾಸ್ರ್ತಿನಗರದ ನಮ್ಮ ಮಂಜನ ಮುಖಾಂತರ ಎನ್.ಆರ್.ರಮೇಶ್ ಪರಿಚಯವಾಯಿತು. ಅಂದಿಗೆ ರಮೇಶ್ ಯೂತ್ ಕಾಂಗೈನಲ್ಲಿದ್ದರು.ಈಗ ಅವರು ಬಿಜೆಪಿ ಮುಖಂಡರು.ಅದೇ ರಮೇಶ್ ಬಳಿ ನನ್ನ ಸುಡುವ ಲೇಖನದ ಬಗ್ಗೆ ಹೇಳಿದೆ ಆ ಪುಣ್ಯತ್ಮ ನನ್ನನ್ನ ಒಂದು ಮಿಂಚಿನ ಬಳಿ ಕರೆದುಕೊಂಡು ಹೋಗಿ ನಿಲ್ಲಿಸಿದರು.ನಾನು ಬೆಚ್ಚಿ ಬೆರಗಾದೆ. . .!

ಆ ಸಮಯದಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ಮಿಂಚು ಸಂಚಲನವನ್ನ ಮೂಡಿಸಿತು.ಅದೇ ಮಿಂಚು ಪತ್ರಿಕೋದ್ಯಮದಲ್ಲಿ ಪ್ರಖರವಾಗಿ ಬೆಳೆದು ಇತಿಹಾಸವನ್ನೆ ಸೃಷ್ಟಿಸಿತು. ಯುದ್ಧೋಪಾದಿಯಲ್ಲಿ ಮಿಂಚಿನಂತೆ ಬಂದ ಆ ರಥದ ಸಾರಥಿಯನ್ನ ಬೇಟಿಯಾದೆ ಅಲ್ಲಿಂದ ನನ್ನಲ್ಲಿ ಯುದ್ಧೋತ್ಸಹ ಜ್ವಾಲಾಮುಖಿಯಾಗಿ ಸಿಡಿದೇಳಿತು.ಆ ಸಕ್ಸಸ್ಫುಲ್ ಸಾರಥಿಯಲ್ಲಿನ ಸೂರ್ಯನ ಕಿರಣಗಳು ನನ್ನÀಲ್ಲಿ ದೇದೀಪ್ಯಮಾನವಾಗಿ ಬೆಳಗಿದವು.ಆ ಮಿಂಚು ಬೆರ್ಯಾರೂ ಅಲ್ಲ

It was he who created History in journalism. . . .that is. . !

Ravibelagere. . !

1995

ಬೆಂಗಳೂರಿನ ಓದುಗರು ಬೆರಗುಗಣಿನಿಂದ ಬೆಸುಗೆಯಾದಗಿ ಹೋದದ್ದು `ಹಾಯ್ ಬೆಂಗಳೂರ್` ಪತ್ರಿಕೆಗೆ.ಮೋದಲ ಸಂಚಿಕೆ ಮಾರುಕಟ್ಟೆಯಲ್ಲಿ ಹಾಟ್ ಹಾಟ್ ಕೇಕ್ನಂತೆ ಮಾರಾಟವಾಗುತ್ತಿತ್ತು.ಎರಡನೇ ಸಂಚಿಕೆ ಸಿದ್ದವಾಗುತ್ತಿತ್ತು.ಅದೇ ಸಮಯದಲ್ಲಿ ಕೆ.ಆರ್.ರೋಡ್ನ ನಂದಿ ಪ್ರೋಸಸ್ಸ್ನಲ್ಲಿ ರಮೇಶ್ ನನ್ನನು ರವಿಬೆಳಗೆರೆಯವರಿಗೆ ಪರಿಚಯ ಮಾಡಿಕೊಟ್ಟರು,ಅಲ್ಲಿ ನಿವೇದಿತಾ ಮೇಡಂ ಕೂಡಾ ಇದ್ದರು.ನಂದಿ ಪ್ರೋಸಸ್ಸ್ ಎಂದರೇ ಅಲ್ಲಿ ಪಾಜಿಃಟೀವ್ಸ್ ಮಾಡುತ್ತಿದ್ದರು,ಪತ್ರಿಕೆಯಲ್ಲಿ ಫೋಟೋಗಳು ಮುದ್ರಣವಾಗಬೇಕಾದರೆ ಪಾಜಿಃಟೀವ್ಸ್ ಮಾಡಿಸುತ್ತಿದ್ದರು.ಒಂದು ಕಾಲಕ್ಕೆ ಬ್ಲಾಕ್ಸ್,ನಂತರ ಪಾಜಿಃಟೀವ್ಸ್, ಟ್ರೇಸಿಂಗ್ ಶೀಟ್ ಈಗ ಪಿ.ಟು.ಪಿ .ಅಂದರೇ ಕಂಪ್ಯೂಟರ್ ಟು ಪ್ರಿಂಟ್. .ಓಕೆ ಅದೆಲ್ಲಾ ಪ್ರಿಂಟಿಂಗ್ ಟೆಕ್ನಾಲಜಿ.ರವೀಬೆಳಗೆರೆಯವರ ಬೇಟಿಯಿಂದ ನಾನು ಸಂತಸಗೊಂಡಿದ್ದೆ.ಅವರು ನನ್ನ ಮಾತನಾಡಿಸಿದ ರೀತಿ,ಎನ್ಕರೇಜ್ ಮಾಡಿದ ಪರಿ ಎಲ್ಲವೂ ಗ್ರೇಟ್.ಅಲ್ಲಿಂದಾಚೆಗೆ ಅವರು ನನ್ನಲ್ಲಿ ಹುರುಪು ತುಂಬಿ ಬರವಣಿಗೆಯ ಬಯಲಿಗೆ ಬಿಟ್ಟರು. ಹುಲಿಯ ತಲೆ ಸವರಿ ಬೇಟೆಗೆ ಬಿಟ್ಟಂತೆ. . .! ಅದೆಲ್ಲಾ ಇಂಟರೆಸ್ಟಿಂಗ್ ಡೇಸ್ಸ್ನ ರೋಚಕ ವಿಚಾರಗಳನ್ನ ವಿವರವಾಗಿ ಬರೆಯಲ್ಲಿದ್ದೇನೆ,ಮಾತ್ರವಲ್ಲಾ ಮುಂದೆ ಶ್ರೀಧರ್ರವರ ಅಗ್ನಿ ಪತ್ರಿಕೆಯಲ್ಲಿ ಕ್ರೈಮ್ ರಿಪೋಟ್ರರ್ ಆಗಿ ಕೆಲಸ ಮಾಡಿದ್ದು,ಆನಂತರ ಬಾಲಕೃಷ್ಣ ಕಾಕತ್ಕರ್ ರವರ ಆಶೀರ್ವಾದದಿಂದ ದೃಶ್ಯ ಮಾಧ್ಯಮಕ್ಕೆ ಬಂದಿದ್ದು ಕೈಮ್ ಡೈರಿ,ಕ್ರೈಮ್ ಸ್ಟೋರಿ. . .ಹೀಗೆ ಅದೆಲ್ಲಾ ಸುಧೀರ್ಘ ಸಮರ Its a Big story no DEAD END. . . .! . . .ಮುಂದುವರೆಯುತ್ತದೆ

Dead end

`ಡೆಡ್ ಎಂಡ್` ಹಾಗೆಂದರೇನು. . .? ಸಾಮಾನ್ಯವಾಗಿ ನಾವು ಯಾರಿಗಾದ್ರೂ ಅಡ್ರಸ್ಸ್ ಹೇಳಬೇಕಾದರೆ, ‘ನೀವು ಸೀದಾ ಹೋಗಿ ಹಾಗೇ ಡೌನ್ ಇಳಿದ್ರೆ,ಡೆಡ್ಎಂಡ್ಸಿಗುತ್ತೆ ಅಲ್ಲಿಂದ ರೈಟ್ಗೆ ಕಟ್ ಮಾಡಿ,ಅಲ್ಲೇ ಇದೆ ನೀವು ಹೇಳೋ ಜಾಗ.ಅಂದರೇ ಒಂದು ಮಾರ್ಗ ಅಂತ್ಯವಾದರೆ ಅದಕ್ಕೆ ಡೆಡ್ಎಂಡ್ ಅಂತಾರೆ.ನಮ್ಮ ಬದುಕಿನ ಮಾರ್ಗದಲ್ಲೂ ಕೆಲವು ಡೆಡ್ ಎಂಡ್ಗಳಿರುತ್ತೆ.ಅಟ್ ದ ಸೇಮ್ ಟೈಮ್ ರೈಟ್ ಟರ್ನ್ಕೂಡಾ ಇರುತ್ತೆ.ಟೋಟಲೀ ಕೊನೆ ಅನ್ನೋದು ಇರೋಲ್ಲಾ. ನನ್ನ ಪ್ರಕಾರ ಕೊನೆ ಅನ್ನೋದು ನಾನು ಕೊನೆಯಾದಾಗ ಮಾತ್ರ.

ಅಸಲಿಗೆ ಈ ಡೆಡ್ಎಂಡ್ ವಿಚಾರ ಯಾಕೆ ಅನ್ನೋ ಪ್ರಶ್ನೆ ಮೂಡಿರಬಹುದು.ಪ್ರಜಾ ಟಿ.ವಿಯ ವ್ಯವಸ್ಧಾಪಕ ನಿರ್ದೇಶಕರಾದ ರವಿಕುಮಾರ್ರವರು ನನಗೊಂದು ಕಾರ್ಯಕ್ರಮ ಮಾಡುವ ಅವಕಾಶವನ್ನ ನೀಡಿದ್ದರು.ಅದಕ್ಕೆ ನಾನೆಂದಿಗೂ ಚಿರಋಣಿ.ನಾನು ಮಾಡುವ ಕಾರ್ಯಕ್ರಮ ಸಹಜವಾಗಿಯೇ ಭೂಗತಲೋಕದ್ದು.ಸ್ಟೇಶನದ ಶೇಖರ್,ಸಾಧು ಶೆಟ್ಟಿ,ನಸ್ರು,ರಕ್ತ ಚರಿತ್ರೆ,ಮಾರ್ಕೇಟ್ ಮಾಫಿಯಾ,ಬೆತ್ತನಗೆರೆಯ ಸಹೋದರರ ಸವಾಲ್,ಕೆಜಿಎಫ್ನ ರೌಡಿ ಬ್ರದರ್ಸ್,ವೀರಪ್ಪನ್ ದಿ ಫೈನಲ್ ಡೆಸ್ಟಿನೇಶನ್,ಶಿವಮೊಗ್ಗ ರೌಡಿಗಳು,ಮಂಗಳೂರು ಭೂಗತ ಲೋಕ. . . .. .ಹೀಗೆ 28 ಸಂಚಿಕೆಗಳನ್ನ ಮಾಡಿದೆ.ಅನೇಕ ದಿನಗಳಿಂದ ನನ್ನ ಶಸ್ರ್ತಚಿಕಿತ್ಸ್ಥೆಗೊಂಡಿದ್ದ ಎಡಗಾಲು ಬಾದಿಸುತ್ತಿತ್ತು.ಬರಿಸಲಾಗದ ನೋವು ಕಾಡುತ್ತಿತ್ತು.ವೈಧ್ಯರ ಬಳಿ ಪರೀಕ್ಷೇ ಮಾಡಿಸಿದಾಗ ಒಂದು ಎಕ್ಸರೇ ತೆಗೆಸಿದರು.ಎಡಗಾಲಿನ ಹಿಂಬದಿಯ ಹಿಪ್ ಬೋನ್ಗೆ ಅಳವಡಿಸಿದ ರಾಡ್ ಜರುಗಿ ಹೋಗಿತ್ತು.ಹಳೆಯ ಎಕ್ಸರೇ ಮತ್ತು ಹೋಸ ಎಕ್ಸರೇಗಳನ್ನ ಗಮನಿಸಿದಾಗ ರಾಡ್ ಹಿಂದಿದ್ದ ಸ್ಥಳದಲ್ಲಿ ಇರಲಿಲ್ಲಾ. Rest is most important ಅಂತ ವೈಧ್ಯರು ಹೇಳಿದರು.ಕಾಲು ಮತ್ತು ಕಾಲ ಎರೆಡೂ ಕೈ ಕೊಟ್ಟಿತು. so. . . iಣ ತಿಚಿs ಣhe eಟಿಜ oಜಿ ಜeಚಿಜ eಟಿಜ .

ಕೈ ಕುಲುಕಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಮುತ್ತಪ್ಪರೈಯವರಿಗೂ ಹಾಗು ಸದಾ ಮುಗುಳು ನಗೆಯಿಂದ ತುಂಬು ಹೃದಯದಲ್ಲಿ ಬೆಂಬಲಿಸುತ್ತಿದ್ದ ನಿರ್ದೇಶಕರಾದ ಗುಣರಂಜನ್ ಶೆಟ್ಟಿಯವರಿಗೆ ನಾನು ಕೃತಜ್ಞ. ಪ್ರಜಾ ಟಿವಿಯಲ್ಲಿ ನನಗೆ ಸಂಪೂರ್ಣ ಸಹಕಾರ ನೀಡಿದ ವ್ಯವಸ್ಥಾಪಕರಾದ ಶಿವಪ್ರಕಾಶ್, ಚಿರಂಜೀವಿ,ಸಂಪಾದಕ ಮಂಡಳಿಯ ಸುರೇಶ್, ಮನೋಜ್, ದಿವಾಕರ್, ಆನಂದ್, ನಿರ್ಮಾಣ ವಿಭಾಗದ ಪ್ರವೀಣ್ಗೌಂಡರ್ ತಂಡ,ಮಾರ್ಕೇಟಿಂಗ್ ಕ್ಯಾಪ್ಟನ್ ಪ್ರಶಾಂತ್ ಪಡೆ, ಕ್ರೈಮ್ ಸೆಕ್ಷನ್ನ ಮೂರ್ತಿ, ಗಣೇಶ್ ಟೀಮ್,ಮೆಟ್ರೋದ ಥಾಮಸ್ಸ್ ಟೀಮ್,ಕ್ರೀಡೆಯ ದಾಮೋದರ್,ಸಿನಿಮಾ ಟೀಮ್,ಲಾಕಪ್ನ ಆಲ್ ಇನ್ ಒನ್ ರಾಮಕೃಷ್ಣ ರೆಡ್ಡಿ,ಸಂಕಲನÀ ವಿಭಾಗದ ಕಿಶೋರ್ ಅಂಡ್ ಟೀಮ್,ಛಾಯಾಗ್ರಹಣ ವಿಭಾಗದ ರಮೇಶ್ ಮತ್ತು ಟೋಟಲ್ ಕ್ಯಾಮರಾ ಮೆನ್ಸ್,ಗ್ರಾಫಿಕ್ಸ್ನ ರಾಜೇಂದ್ರ ಅಂಡ್ ಕ್ರೀಯೇಟೀವ್ ಟೀಮ್.ತಾಂತ್ರಿಕ,ಮಾಹಿತಿ ತಂತ್ರಜ್ಞ,ಮಾನವ ಸಂಪನ್ಮೂಲ ಹೀಗೆ ಎಲ್ಲಾ ವಿಭಾಗದಲೂ ಅನೇಕರು ನನಗೆ ಸಹಕರಿಸಿದ್ದಾರೆ, ಹಾಗಾಗಿ ಸಮಗ್ರ ಸಿಬಂಧಿವರ್ಗಕ್ಕೂ ನನ್ನ ಕೃತಜ್ಞತೆಗಳು.ಡೆಡ್ ಎಂಡ್ ಕಾರ್ಯಕ್ರಮದಲ್ಲಿ ನನಗೆ ಸಹಕರಿಸಿ ಪ್ರತಿ ಹಂತದಲ್ಲೂ ಜೋತೆಗಿದ್ದ ಗಿರೀಶ್ ಸೂಗೂರ್ನ ಮರೆಯಲು ಸಾಧ್ಯವಿಲ್ಲ.

By the by. . Its not a deadend…ಅಂತ್ಯದಿಂದ ಆರಂಭ. . . .!

Please follow and like us:
0